‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು (Madenur Manu) ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳು ಕೇಳಿ ಬರ್ತಿವೆ.. ಚಿತ್ರರಂಗ ಕೂಡ ಮನು ವಿರುದ್ಧ ಗರಂ ಆಗಿದೆ. ಸಹನಟಿ ಹಾಗೂ ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮನುರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

14 ದಿನಗಳ ಕಾಲ ನ್ಯಾಯಾಂಗ ಬಂಧನ (Judicial Custody) ವಿಧಿಸಿದ್ದು, ಇಂದು ಮೆಡಿಕಲ್ ಟೆಸ್ಟ್ ಮಾಡಿಸ ಲಾಯಿತು. ಮನು ಕೇಸ್​ ತನಿಖೆ ವೇಳೆ ಹಲವು ಶಾಕಿಂಗ್ ವಿಚಾರಗಳು ಬಹಿರಂಗ ಆಗುತ್ತಿವೆ. ಇನ್ನು ಅಷ್ಟೆ ಅಲ್ಲದೇ ಸ್ಯಾಂಡಲ್​ವುಡ್​​ನ (Sandalwood) ಹಿರಿಯ ನಟ ಶಿವರಾಜ್​ಕುಮಾರ್ (Shivarajkumar) ಅವರ ಬಗ್ಗೆ ಮಡೆನೂರು ಮನು ನಾಲಿಗೆ ಹರಿಬಿಟ್ಟದ್ದ. ಮಡೆನೂರು ಮನು ಮಾತನಾಡಿರೋ ಆಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಲ್ಲದೇ ಹಿರಿಯ ಕಲಾವಿದರ (Senior Artists) ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ನಟನಿಗೆ ಈಗ ಬಿಗ್‌ ಶಾಕ್‌ ಎದುರಾಗಿದೆ.

ಫಿಲ್ಮ್ ಚೇಂಬರ್ (Film Chamber) ಮೇಲೆ ಮಡೆನೂರು ಮನುನ‌ ಬ್ಯಾನ್ ಮಾಡೋಕೆ ಒತ್ತಡ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಲವು ಮಹತ್ವದ ತೀರ್ಮಾನ ಮಾಡಲಾಗಿದೆ. ಸ್ಟಾರ್ ನಟರ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.

Also Read: ನಿಜವಾಯ್ತ Singh ಭವಿಷ್ಯ.. ಕಪ್‌ ಗೆಲ್ಲೋದು ಇವ್ರೇನಾ?

ಸ್ಟಾರ್ ನಟರ ಅಭಿಮಾನಿಗಳಿಂದ ಫಿಲ್ಮ್ ಚೇಂಬರ್ ನಿಂದ ದೂರು ಬಂದ ಹಿನ್ನೆಲೆ ಫಿಲ್ಮ್ ಚೇಂಬರನಲ್ಲಿ ಸಭೆ ನಡೆಸಿದ್ದು, ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಲಾಗಿದೆ. ಮಡೆನೂರು ಮನುವನ್ನ ಬ್ಯಾನ್ ಮಾಡಬೇಕು ಅನ್ನೋ ಒತ್ತಾಯ ಕೇಳಿ ಬಂದಿತ್ತು. ಕಿರುತೆರೆ ಹಾಗು ಸಿನಿಮಾದಿಂದ ಬ್ಯಾನ್ ಮಾಡಬೇಕು ಅಂತ ದೂರು ನೀಡಲಾಗಿತ್ತು.

ಮಡೆನೂರು ಮನು ಎನ್ನಲಾದ ಆಡಿಯೋ ವಿಚಾರಕ್ಕೆ ಇಂದಿನಿಂದ ಕಿರುತೆರೆ- ಬೆಳ್ಳಿತೆರೆಯಿಂದ ಸಂಪೂರ್ಣ ಅನಿರ್ಧಿಷ್ಟಾವಧಿ ಅಸಹಕಾರ ನೀಡಲು ನಿರ್ಧರಿಸಲಾಗಿದೆ. ಇನ್ನು ಮಡೆನೂರು ಮನು ವಿರುದ್ಧ ಕೇಸ್ ದಾಖಲಿಸುತ್ತೇವೆ. ವಾಣಿಜ್ಯ ಮಂಡಳಿಯಿಂದಲೇ ಕೇಸ್ ದಾಖಲಿಸಲಾಗುತ್ತೆ ಎನ್ನಲಾಗಿದೆ.

Share.
Leave A Reply