ಸತತ 18 ವರ್ಷದ ಬಳಿಕ ಐಪಿಎಲ್ ಕಪ್‌ ನಮ್ದಾಗಿತ್ತು. ಅಂದ್ರೆ ಆರ್‌ಸಿಬಿ ಐಪಿಎಲ್‌ ಚಾಂಪಿಯನ್ಸ್‌ ಆಗಿ ಗೆದ್ದು ಬೀಗಿತ್ತು. ಅಭಿಮಾನಿಗಳ ಸಂಭ್ರಮವೂ ಮುಗಿಲುಮುಟ್ಟಿತ್ತು. ಆದ್ರೆ ಕಪ್‌ ಗೆದ್ದ ಸಂಭ್ರಮ 24 ಗಂಟೆಯೂ ಫ್ಯಾನ್ಸ್‌ ಪಾಲಿಗೆ ಉಳಿಯಲಿಲ್ಲ.. ಸಂಭ್ರಮದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಇಡೀ ರಾಜ್ಯವೇ ಸಡಗರದಲ್ಲಿ ತೇಲುವ ಹೊತ್ತಲ್ಲಿ 11 ಅಮಾಯಕ ಜೀವಗಳು ಕಾಲ್ತುಳಿತಕ್ಕೆ (Bengaluru Stampede) ಬಲಿಯಾಗಿರೋದು ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ..

ಆದ್ರೆ ಈಗ ನಡೆದಿರೋ ದುರಂತಕ್ಕೆ ಹೊಣೆಯಾರು..? ಆರ್‌ಸಿಬಿ ಮ್ಯಾನೆಜ್‌ಮೆಂಟ್‌ ಬಯಕೆಯೋ..? ಸರ್ಕಾರದ ವೈಫಲ್ಯವೋ..? ಡಿಸಿಎಂ ಡಿಕೆ ಶಿವಕುಮಾರ್‌ ಟಾರ್ಗೆಟ್‌ ಆಗ್ತಿರೋದು ಯಾಕೆ..? ಅನ್ನೋ ಸಾಕಷ್ಟು ಪ್ರಶ್ನೆಗಳು ಎಲ್ಲರಲ್ಲಿ ಮೂಡಿವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 11 ಆರ್‌ಸಿಬಿ ಫ್ಯಾನ್ಸ್ ಬಲಿಯಾದ ವಿಚಾರವಾಗಿ ಈಗ ಬ್ಲೇಮ್‌ಗೇಮ್‌ ಶುರುವಾಗಿದೆ.. ಆರ್‌ಸಿಬಿ ಕಪ್‌ ಗೆಲ್ತಿದ್ದಂತೆ ಯಾವುದೇ ಪೂರ್ವತಯಾರಿಯಿಲ್ಲದೇ ಸರ್ಕಾರ ಸಂಭ್ರಮಾ ಚರಣೆಯನ್ನು ಆಯೋಜಿಸಿದ್ದೇ ಎಲ್ಲಕ್ಕೂ ಕಾರಣ ಅನ್ನೋ ಆರೋಪಗಳು ಕೇಳಿ ಬರ್ತಿವೆ.. ಇದ್ರ ಮಧ್ಯೆ ಇದೀಗ ನಾಲ್ವರ ವಿರುದ್ಧ ಕೇಸ್‌ ದಾಖಲಿಸಿ, ಅವರನ್ನು ಬಂಧಿಸಲಾಗಿದೆ.

RCB ಮಾರ್ಕೆಟಿಂಗ್ ಮ್ಯಾನೇಜರ್ ನಿಖಿಲ್ ಸೋಸ್ಲೆ, DNA ಸಂಸ್ಥೆಯ ಸುನೀಲ್ ಮ್ಯಾಥ್ಯೂ ಸೇರಿದಂತೆ ನಾಲ್ವರನ್ನು ಅರೆಸ್ಟ್‌ ಮಾಡಲಾಗಿದೆ‌.. ಇದ್ರ ಜೊತೆಗೆ ಬೆಂಗಳೂರು ಕಮಿಷನರ್‌ ಆಗಿದ್ದ ದಯಾನಂದ್‌ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ.. ಇದ್ರಿಂದ ರೊಚ್ಚಿಗೆದ್ದ ವಿಪಕ್ಷ ನಾಯಕರು, ಸರ್ಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ ಅಂತಾ ಆರೋಪಿಸಿದ್ದಾರೆ.

ಪೊಲೀಸ್‌ ಇಲಾಖೆ ಮೊದಲೇ ಇಂತಹ ಕಾರ್ಯಕ್ರಮಕ್ಕೆ ಸಂಪೂರ್ಣ ರಕ್ಷಣೆ ಕೊಡಲು ಅಸಾಧ್ಯ ಅಂತ ಸೂಚನೆ ನೀಡಿ ದ್ರೂ ಡಿಕೆಶಿ ಒತ್ತಡ ಹಾಕಿ ಈ ಸಂಭ್ರಮಾಚರಣೆ ತರಾತುರಿಯಲ್ಲಿ ಆಯೋಜಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಗೃಹ ಸಚಿವ ಪರಮೇಶ್ವರ್‌ ಅವರ ಅಭಿಪ್ರಾಯವನ್ನು ಧಿಕ್ಕರಿಸಿದ್ದಾರೆ ಅಂತಾ ವಿಪಕ್ಷ ನಾಯಕರು ಆರೋಪಿಸಿದ್ದು, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಡಿಕೆಶಿಯನ್ನು ವಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.. ಡಿಕೆಶಿ ತಮ್ಮ ಲಾಭ, ಪ್ರಚಾರಕ್ಕೋಸ್ಕರ ಆರ್‌ಸಿಬಿ ಟೀಂ ಸ್ವಾಗತಿಸಲು ಏರ್‌ಪೋರ್ಟ್‌ಗೆ ಹೋಗಿದ್ರು. ರಕ್ಷಣಾ ಇಲಾಖೆಯ ಸಲಹೆಯನ್ನು ನಿರ್ಲಕ್ಷಿಸಿ ಕಾರ್ಯಕ್ರಮವನ್ನ ಆಯೋಜಿಸಿದ್ದೇ ಕಾರಣ ಅಂತ ವಿಪಕ್ಷ ನಾಯಕರು ಆರೋಪಿಸ್ತಿದ್ದಾರೆ. ಹೊರಗೆ ಹೆಣಗಳು ಬೀಳ್ತಾ ಇದ್ರೂ ಡಿಕೆಶಿ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟು ಪೋಸ್‌ ಕೊಡ್ತಾ ಇದ್ರು.

ಅಮಾಯಕರ ಸಾವಿಗೆ ಅವರ ಚೈಲ್ಡಿಷ್‌ ಬಿಹೇವಿಯರ್‌ ಕಾರಣ ಅಂತ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ. ಎರಡೆರಡು ಕಡೆ ಸಂಭ್ರಮಾಚರಣೆ ಯಾಕೆ ಬೇಕಿತ್ತು. ಡಿಕೆಶಿ ಅವ್ರಿಗೆ ಪ್ರಚಾರವೇ ಮುಖ್ಯವಾಗಿತ್ತು ಅಂತ ಮಾಜಿ ಸಂಸದ ಪ್ರತಾಪ್‌ ಸಿಂಹ ಲೇವಡಿ ಮಾಡಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗಿದೆ ಅಂತ ಗೊತ್ತಿದ್ರೂ ಡಿಕೆಶಿ ಆರ್‌ಸಿಬಿ ಟೀಂ ಜೊತೆ ಸೆಲೆಬ್ರೇಷನ್‌ ಮುಂದುವರಿಸಿದ್ಯಾಕೆ ಅಂತ ವಿಪಕ್ಷ ನಾಯಕರು ಪ್ರಶ್ನಿಸ್ತಿದ್ದಾರೆ..

ಒಂದ್ಕಡೆ ಸಂಭ್ರಮಾಚರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ ಕರೆ ಕೊಡ್ತಾರೆ. ಮತ್ತೊಂದ್ಕಡೆ ಆರ್‌ಸಿಬಿ ಮ್ಯಾನೆಜ್‌ಮೆಂಟ್‌ ಕೂಡ ಇನ್ಸ್ಟಾಗ್ರಾಂನಲ್ಲಿ ಪೆರೆಡ್‌, ಸೆಲೆಬ್ರೇಷನ್‌ ಬಗ್ಗೆ ಪೋಸ್ಟ್‌ ಮಾಡುತ್ತೆ. ಆರ್‌ಸಿಬಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿದೆ ಅಂತ ಗೊತ್ತಿದ್ರೂ ಸಹಾ ಈ ರೀತಿ ಬಹಿರಂಗವಾಗಿ ಪೂರ್ವ ತಯಾರಿಯಿಲ್ಲದೇ ಸಂಭ್ರಮಾಚರಣೆಗೆ ಕರೆ ಕೊಡೋದು ಎಷ್ಟು ಸರಿ..? ಆರ್‌ಸಿಬಿ ಮ್ಯಾನೆಜ್‌ಮೆಂಟ್‌ಗೂ ಬುದ್ಧಿ ಇರ್ಲಿಲ್ವಾ..? ಈ ದುರಂತಕ್ಕೆ ಪರೋಕ್ಷವಾಗಿ ಅವರೂ ಕೂಡ ಕಾರಣ ಅಂತ ವಿರೋಧಗಳು ವ್ಯಕ್ತವಾಗ್ತಿವೆ.. ಈಗಾಗ್ಲೇ ಪ್ರಕರಣ ಹೈ ಕೋರ್ಟ್‌ ಮೆಟ್ಟಿಲೇರಿರೋದ್ರಿಂದ ಮುಂದೇನಾಗುತ್ತೆ ಅನ್ನೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ..

Share.
Leave A Reply