Author: chandrakant

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌, ಪೊಲೀಸರ ವಿರುದ್ಧವೇ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ. ಹೌದು.. ಸಿಸಿಹೆಚ್-57ನೇ ಕೋರ್ಟ್​ಗೆ ಆರೋಪಿಗಳು ಹಾಜರಾಗಿದ್ರು. ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ಜಡ್ಜ್ ಎದುರು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ ಅಂತಾ ಆರೋಪ ಮಾಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದರ್ಶನ್ ಅವರು ಬಿಳಿ ಬಣ್ಣದ ಜಾಕೆಟ್ ಧರಿಸಿದ್ದರು. ಉಳಿದ ಆರೋಪಿಗಳಾದ ಪುಟ್ಟಸ್ವಾಮಿ, ರಾಘವೇಂದ್ರ, ಧನರಾಜ್, ವಿನಯ್ ಕಾರ್ತಿಕ್, ಕೇಶವ ಮೂರ್ತಿ, ನಿಖಿಲ್ ನಾಯಕ್ ಕೋರ್ಟ್​​ಗೆ ಖುದ್ದು ಹಾಜರಾಗಿದ್ದಾರೆ. ಆರೋಪಿ ನಂದೀಶ್ ನಂದೀಶ್ ಗೈರಾಗಿದ್ದಾನೆ. ಪ್ರಕರಣದಿಂದ ಕೈಬಿಡುವಂತೆ ಕೆಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನು, ವಿಚಾರಣೆ ವೇಳೆ ದರ್ಶನ್​​ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ಕೋರ್ಟ್ ಆದೇಶ ಪಾಲಿಸುತ್ತಿದ್ದಾರೆಯೇ? ಅಂತಾ ಪ್ರಶ್ನೆ ಕೇಳಿದ್ರು.. ಈ ವೇಳೆ ಪ್ರತಿಕ್ರಿಯೆ ನೀಡಿದ ದರ್ಶನ್‌, ಇಲ್ಲ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ ಸರ್‌ ಅಂತಾ ಹೇಳಿದ್ದಾರೆ.…

Read More

ಕನ್ನಡ ಸಾಹಿತ್ಯಿಕ ಸಾಧನೆಯಿಂದಲೇ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಎಸ್.ಎಲ್.ಭೈರಪ್ಪನವರು ಬಳಲುತ್ತಿದ್ರು. ಮರೆವಿನ ಕಾಯಿಲೆಯಿಂದ ಹೆಚ್ಚಾಗಿ ನರಳುತ್ತಿದ್ದ ಭೈರಪ್ಪ, ಬೆಂಗಳೂರಿನ ರಾಜಾಜಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಮೈಸೂರು ಬಿಟ್ಟು ಬೆಂಗಳೂರಿಗೆ ಬಂದು ಆಪ್ತರೊಬ್ಬರ ಮನೆಯಲ್ಲಿದ್ದು ಟ್ರೀಟ್ಮೆಂಟ್‌ ಪಡೆಯುತ್ತಿದ್ರು. ಆದ್ರೀಗ ಮೂರು ತಿಂಗಳ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದ್ರು. ಎಸ್.ಎಲ್. ಭೈರಪ್ಪನವರು ಲಿಂಗಣ್ಣಯ್ಯ ಮತ್ತು ಗೌರಮ್ಮ ದಂಪತಿ ಪುತ್ರರಾಗಿದ್ದ ಭೈರಪ್ಪನವರು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನ ಸುತ್ತಮುತ್ತಲಿನ ಶಾಲೆಗಳಲ್ಲಿ ಮುಗಿಸಿದರು. ನಂತರ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿದ್ದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಮುಗಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಸಹ ಪಡೆದಿದ್ದರು. ಸಾಹಿತ್ಯ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ಅವರು, ಯುವ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದಿದ್ದರು. ವಂಶವೃಕ್ಷ, ದಾಟು,…

Read More

ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಸೌಜನ್ಯ ಕೇಸಿನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಲಾಗಿದೆ. ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ಇವೆ. ಇದಲ್ಲದೇ ದ್ವೇಷ ಭಾಷಣ ಹಿನ್ನೆಲೆಯಲ್ಲಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಒತ್ತಾಯ ಹೆಚ್ಚಾಗಿತ್ತು. ಈ ಮನವಿಗಳನ್ನು ಪುರಸ್ಕರಿಸಿದ ಸಹಾಯಕ ಆಯುಕ್ತೆ‌ ಸ್ಟೆಲ್ಲಾ ವರ್ಗೀಸ್, ಸೆಪ್ಟೆಂಬರ್ 20ರಂದೇ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಆದ್ರೆ, ಇನ್ನೂ ಕೂಡ ಗಡಿಪಾರು ಪ್ರಕ್ರಿಯೆ ನಡೆದಿಲ್ಲ. ಯಾಕಂದ್ರೆ ಗಡಿಪಾರು ನೋಟಿಸ್ ಅನ್ನು ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಗೆ ನೀಡಬೇಕು. ಅದಾದ ಮೇಲೆ ಗಡಿಪಾರು ಪ್ರಕ್ರಿಯೆ ನಡೆಯುತ್ತದೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧವೂ ಸಹ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದರು.…

Read More

ಕಾಂತಾರಾ ಅ ಲೆಜೆಂಡ್‌ ಚ್ಯಾಪ್ಟರ್-1‌ ಶೀರ್ಷಿಕೆಯಡಿ ಕಾಂತಾರ ಪ್ರಿಕ್ವೆಲ್‌ನ ಟ್ರೈಲರ್‌ ರಿಲೀಸ್‌ ಆಗಿದ್ದು, ಜಗತ್ತಿನಾದ್ಯಂತ ಭಾರಿ ಸೆನ್ಸೇಷನ್‌ ಸೃಷ್ಟಿಸಿದೆ. ರಿಷಭ್‌ ಶೆಟ್ಟಿ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದೈವಿಕತೆಯ ಜೊತೆ ಭಯ, ಭಕ್ತಿ ಎಲ್ಲವನ್ನೂ ಶೆಟ್ರು ಈ ಸಿನಿಮಾದಲ್ಲಿ ತೋರಿಸಿದ್ದಾರೆ ಅನ್ನೋದು ಟ್ರೈಲರ್‌ ನೋಡಿಯೇ ಗೊತ್ತಾಗ್ತಾ ಇದೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೈಲರ್‌ ರಿಲೀಸ್‌ ಆಗಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ಜನರು ಟ್ರೇಲರ್‌ ವೀಕ್ಷಿಸಿದ್ದಾರೆ. ಇನ್ನು, ರಿಷಬ್‌ ಶೆಟ್ಟಿ ಅಭಿಯನದ ಕಾಂತಾರ 2022ರಲ್ಲಿ ತೆರೆ ಕಂಡಿತ್ತು. ಲೋ ಬಜೆಟ್‌ನಲ್ಲಿ ತಯಾರಾಗಿದ್ದ ಕಾಂತಾರ ನೂರಾರು ಕೋಟಿ ಕೊಳ್ಳೆ ಹೊಡೆದು ದೇಶಾದ್ಯಂತ ರಿಲೀಸ್‌ ಆಗಿ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿತ್ತು. ಕಾಂತಾರ ಸೀಕ್ವೆಲ್‌ನಲ್ಲಿ ಸಪ್ತಮಿಗೌಡ ನಾಯಕಿಯಾಗಿ ಮಿಂಚಿದ್ರು.. ಇದೀಗ ಅಕ್ಟೋಬರ್‌ 2ರಂದು ಕಾಂತಾರ ಚ್ಯಾಪ್ಟರ್‌ 1 ರಿಲೀಸ್‌ ಆಗ್ತಾ ಇದ್ದು, ಮತ್ತೆ ರೆಕಾರ್ಡ್‌ ಕ್ರಿಯೇಟ್‌ ಮಾಡೋ ಎಲ್ಲಾ ಸಾಧ್ಯತೆಗಳೂ ಇವೆ. ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವ…

Read More

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2025ರ ಉದ್ಘಾಟನೆಯು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ನಡೆಯಿತು. ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಹಲವು ವಿವಾದಗಳ ನಡುವೆಯೂ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟನೆ ಮಾಡಿದರು. ಜೊತೆಗೆ ಸಿಎಂ ಸಿದ್ದರಾಮಯ್ಯ, ಮೈಸೂರು ಉಸ್ತುವಾರಿ ಸಚಿವ ಹೆಚ್‌.ಸಿ. ಮಹದೇವಪ್ಪ, ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪ, ಕಾನೂನು ಸಚಿವ ಹೆಚ್‌.ಕೆ. ಪಾಟೀಲ್‌ ಸೇರಿದಂತೆ ಹಲವು ರಾಜಕೀಯ ನಾಯಕರು, ಗಣ್ಯರು ಉಪಸ್ಥಿತರಿದ್ದರು. ದಸರಾ ಉದ್ಘಾಟನೆಗೂ ಮೊದಲು ಬಾನು ಮುಷ್ತಾಕ್​ ಚಾಮುಂಡಿ ತಾಯಿಯ ಪೂಜೆಯಲ್ಲಿ ಭಾಗಿಯಾಗಿದ್ದರು. ಚಾಮುಂಡೇಶ್ವರಿ ದೇವಿಯ ಮಂಗಳಾರತಿ ಸ್ವೀಕರಿಸಿ, ಭಾವುಕರಾದರು. ಕೇಸರಿ ಹಾಗೂ ಹಸಿರು ಬಣ್ಣದ ಸೀರೆಯುಟ್ಟು ದೇವಸ್ಥಾನಕ್ಕೆ ಆಗಮಿಸಿದ್ದ ಬಾನು ಮುಷ್ತಾಕ್ ಬಿಜೆಪಿ ನಾಯಕರು ಸೇರಿದಂತೆ ಹಲವು ಸಂಘಟನೆಗಳ ವಿರೋಧದ ನಡುವೆಯೂ ತಮ್ಮ ಗೌರವವನ್ನು ಕಾಪಾಡಿಕೊಂಡು ದಸರಾ ಉದ್ಘಾಟನೆ ಮಾಡಿದರು. ಈ ಸನ್ನಿವೇಶ ಸಾಮಾಜಿಕ ಸಾಮರಸ್ಯ ಮತ್ತು ಭಾವೈಕ್ಯತೆ ಸಂದೇಶವನ್ನು ಸಮಾಜಕ್ಕೆ ಸಾರುತ್ತದೆ ಅಂತ ಹಲವರು ಸಂತಸ ವ್ಯಕ್ತಪಡಿಸ್ತಿದ್ದಾರೆ..

Read More

ಕನ್ನಡದ ಬಹುನೀರಿಕ್ಷಿತ ಚಿತ್ರದಲ್ಲಿ ಕಾಂತಾರ ಚಾಪ್ಟರ್‌ 1 ಸಹ ಒಂದು.. ರಿಷಬ್ ಶೆಟ್ಟಿ ನಿರ್ದೇಶಿಸಿ, ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿರುವ ಕಾಂತಾರ ಚಾಪ್ಟರ್‌ 1 ಅಕ್ಟೋಬರ್‌ 2ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. 7 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕಾಂತಾರ ಚಿತ್ರದ ಹಿಂದಿ ಟ್ರೈಲರ್ ಸೆಪ್ಟೆಂಬರ್‌ 22ರ ವಿಜಯದಶಮಿಯ ಮೊದಲನೇ ದಿನದಂದು ಮಧ್ಯಾಹ್ನ 12.45 ಕ್ಕೆ ಬಿಡುಗಡೆಯಾಗಲಿದೆ. ಕಾಂತಾರ ಚಿತ್ರ ತಂಡಕ್ಕೆ ಬಾಲಿವುಡ್​ ನಟ ಗ್ರೀಕ್ ಗಾಡ್ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ ಸಾಥ್‌ ನೀಡಿದ್ದಾರೆ. ಕನ್ನಡ ಅಷ್ಟೇ ಅಲ್ಲದೇ, ದೇಶ ವಿದೇಶಗಳಲ್ಲೂ ಹೈಪ್‌ ಕ್ರಿಯೆಟ್‌ ಮಾಡಿರುವ ಕಾಂತಾರ ಸಾವಿರ ಕೋಟಿಯ ಸರದಾರ ಆಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದ್ರ ಮಧ್ಯೆ ಬಾಲಿವುಡ್ ಸ್ಟಾರ್‌ ನಟ ಹೃತಿಕ್ ರೋಷನ್ ಹಿಂದಿ ಟ್ರೈಲರ್ ಬಿಡುಗಡೆ ಮಾಡುತ್ತಿದ್ದು, ಚಿತ್ರ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಈ ಕುರಿತಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ರಿಷಬ್ ಶೆಟ್ಟಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆಯು ಸಹ ತಮ್ಮ…

Read More

ಏಷ್ಯಾಕಪ್​​ನಲ್ಲಿ ಟೀಂ ಇಂಡಿಯಾ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಒಮಾನ್ ತಂಡವನ್ನು ಎದುರಿಸಿದ್ದ ಸೂರ್ಯಕುಮಾರ್ ಪಡೆ ಪಂದ್ಯವನ್ನು 21 ರನ್​​ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶ್ವದ ನಂಬರ್ ಒನ್ ಟಿ20 ತಂಡವಾಗಿರುವ ಭಾರತದ ವಿರುದ್ಧ ದಿಟ್ಟ ಆಟ ಪ್ರದರ್ಶಿಸಿದ ಒಮಾನ್ ತಂಡ ಪಂದ್ಯ ಸೋತರೂ ಎಲ್ಲರ ಮನಸ್ಸು ಗೆದ್ದಿದೆ. ಆಮಿರ್ ಕಲೀಂ ಮತ್ತು ಹಮೀದ್ ಮಿರ್ಝಾ ಅವರ ಹೋರಾಟದ ಬ್ಯಾಟಿಂಗ್‌ನ ಹೊರತಾಗಿಯೂ ಜತೀಂದರ್ ಸಿಂಗ್ ಬಳಗ ಟೀಂ ಇಂಡಿಯಾ ವಿರುದ್ಧ 21 ರನ್‌ಗಳಿಂದ ಪರಾಭವಗೊಂಡಿತು. ಈ ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಅಜೇಯವಾಗಿ ಸೂಪರ್ 4ರ ಹಂತವನ್ನು ಪ್ರವೇಶಿಸಿದೆ. ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಎ ಬಣದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸಂಜು ಸ್ಯಾಮ್ಸನ್‌ರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್‌ಗಳಿಸಿತು. ಭಾರತದ ತಂಡದ ನೀಡಿದ ಗುರಿಯನ್ನ ಬೆನ್ನತ್ತಿದ…

Read More

ಕೆಲದಿನಗಳ ಹಿಂದೆ ಕೇಂದ್ರ ವಿತ್ತ ಸಚಿವೆ ನಿರ್ಮಲಸೀತಾರಾಮನ್‌ ದೇಶದ ಜನತೆಗೆ ಹೊಸ GST ಜಾರಿಯಾಗುವ ಬಗ್ಗೆ ಚಾರ್ಟ್‌ ಬಿಡುಗಡೆ ಮಾಡಿದ್ದರು. ಈ ಹಿನ್ನಲೆ ಅನೇಕ ವಸ್ತಗಳು, ಉತ್ಪನ್ನಗಳ ಮೇಲಿನ GST ದರ ಕಡಿಮೆ ಮಾಡಲಾಗಿತ್ತು ಇದರಿಂದಾಗಿ ಕರ್ನಾಟಕದಲ್ಲು ದರ ಏರಿಕೆಯ ಬಿಸಿಗೆ ಸಿಲುಕಿದ್ದರ ಗ್ರಾಹಕರು ಈಗ ನಂದಿನಿ ಮೊಸರಿನ ಮೇಲಿನ ದರದಲ್ಲಿ ಇಳಿಕೆಯಾಗುವ ವಿಷಯ ತಿಳಿದು ಸಂತಸ ಪಟ್ಟಿದ್ದಾರೆ. ನಂದಿನಿ ಉತ್ಪನ್ನ ಬಳಸುವ ಗ್ರಾಹಕರಿಗೆ ಇಲ್ಲಿದೆ ಗುಡ್‌ ನ್ಯೂಸ್.‌ ಕೆಲ ತಿಂಗಳ ಹಿಂದೆ ನಂದಿನಿ ಹಾಲು ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಇದೀಗ ಗ್ರಾಹಕರಿಗೆ ಕೆಎಂಎಫ್‌ ಸಂಸ್ಥೆ ಸಿಹಿ ಸುದ್ದಿ ಕೊಟ್ಟಿದ್ದು, ಒಂದು ಲೀಟರ್‌ ಮೊಸರಿನ ಬೆಲೆ ನಾಲ್ಕು ರೂಪಾಯಿವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ. ಆಹಾರ ಉತ್ಪನ್ನಗಳ ಮೇಲಿನ GSTಯನ್ನ ಶೇ 12 ರಿಂದ 5ಕ್ಕೆ ಇಳಿಕೆ ಮಾಡುವ ‌ಸಾಧ್ಯತೆ ಇದೆ. ಹೀಗಾಗಿ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ‘ನಂದಿನಿ’ಯ ವಿವಿಧ ಉತ್ಪನ್ನಗಳ ದರ ಇಳಿಕೆಯಾಗುತ್ತೆ ಎನ್ನಲಾಗ್ತಿದೆ. ಸೆ.22ರಿಂದಲೇ…

Read More

ಬರ್ಗರ್‌, ಸ್ಯಾಂಡ್‌ವಿಚ್‌, ರೋಲ್‌ಗಳಲ್ಲಿ ಮೆಯೋನೀಸ್‌ ಎಂಬ ಸ್ಪ್ರೆಡ್‌ಅನ್ನ ಬಳಸಲಾಗುತ್ತೆ. ನೀವಿದನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಾಕಷ್ಟು ಬಾರಿ ಟೇಸ್ಟ್‌ ಮಾಡಿರ್ತೀರಾ.. ಅದ್ರಲ್ಲೂ ಮಕ್ಕಳಿಗಂತೂ ಮೆಯೋನೀಸ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇದನ್ನ ಹೆಲ್ದಿ ಅಂತಾ ಅನ್ಕೊಂಡು ನೀವೇನಾದ್ರೂ ಪ್ರತಿದಿನ ಬಳಸ್ತಾ ಇದ್ದಿರಾ ಹಾಗಿದ್ರೆ ಎಚ್ಚರ. ತುಂಬಾ ಜನರಿಗೆ ಗೊತ್ತಿರ್ಲಿಕ್ಕಿಲ್ಲ ಮೆಯೋನೀಸ್‌ಅನ್ನ ಟ್ರೆಡೀಷನಲ್‌ ಆಗಿ ಮೊಟ್ಟೆ ಬಳಸಿ ತಯಾರಿಸಲಾಗುತ್ತೆ. ಸೋ ನೀವು ವೆಜಿಟೇರಿಯನ್‌ ಆಗಿದ್ರೆ ಈ ಮೆಯೋನೀಸ್‌ ಬಳಸಿರುವ ಆಹಾರಗಳನ್ನ ಅವಾಯ್ಡ್‌ ಮಾಡೋದು ಒಳ್ಳೇದು. ಸಪೋಸ್‌ ನೀವು ನಾನ್‌ವೆಜಿಟೇರಿಯನ್‌ ಆಗಿದ್ರೂ ಕೂಡ ಇದು ಆರೋಗ್ಯಕ್ಕೆ ಒಳ್ಳೇದಲ್ಲ. ಯಾಕಂದ್ರೆ ಮೆಯೋನೀಸ್‌ನಲ್ಲಿ ಹಸಿ ಮೊಟ್ಟೆಯನ್ನ ಬಳಸಲಾಗುತ್ತೆ. ಹಸಿ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾವಿರುತ್ತೆ. ಇದರ ಸೇವನೆಯಿಂದ ಹೊಟ್ಟೆ ನೋವು, ವಾಂತಿ, ಅಜೀರ್ಣ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಬಹುದು. ಅಲ್ಲದೇ, ಇದು ಕ್ಯಾಲೊರಿಯಲ್ಲಿ ಕೂಡ ಅಧಿಕವಾಗಿದ್ದು, ತೂಕ ಇಳಿಕೆಗೆ ಸಹಾಯಕವಾಗಿರೋದಿಲ್ಲ. ಇನ್ನು ಮೆಯೋನೀಸ್‌ ಟ್ರ್ಯಾನ್ಸ್‌ಫ್ಯಾಟ್‌ಅನ್ನ ಹೊಂದಿರುತ್ತೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೇದಲ್ಲ. ಮೆಯೋನೀಸ್‌ನ ಶೆಲ್ಫ್‌ಲೈಫ್‌ ಹೆಚ್ಚಿಸೋದಿಕ್ಕೆ ಪ್ರಿಸರ್ವೇಟಿವ್ಸ್‌ ಬಳಸಲಾಗುತ್ತೆ. ಇದ್ರಿಂದ…

Read More

ಹೆಲ್ದಿ ಲೈಫ್‌ಸ್ಟೈಲ್‌ ಫಾಲೋ ಮಾಡೋರು ಹಾಗೆ ವೇಟ್‌ಲಾಸ್‌ ಆಗ್ಬೇಕು ಅನ್ಕೊಂಡಿರೋರು ಮೊದ್ಲು ಮಾಡೋ ಫಸ್ಟ್‌ ಕೆಲ್ಸ ಏನಂದ್ರೆ ನಾರ್ಮಲ್‌ ಹಾಲಿನ ಚಹಾದ ಬದಲು ಗ್ರೀನ್‌ ಟೀ ಕುಡಿಯೋದಿಕ್ಕೆ ಶುರುಮಾಡ್ತಾರೆ. ತನ್ನ ವಿಶೇಷ ಗುಣಗಳಿಂದಾಗಿ ಗ್ರೀನ್‌ ಟೀ ಪ್ರಪಂಚದಾದ್ಯಂತ ಪಾಪ್ಯುಲಾರಿಟಿ ಪಡ್ಕೊಂಡಿದೆ. ಕೇವಲ ತೂಕ ಇಳಿಕೆಗೆ ಮಾತ್ರವಲ್ಲದೇ ಇನ್ನೂ ಸಾಕಷ್ಟು ಹೆಲ್ತ್‌ ಬೆನಿಫಿಟ್ಸ್‌ ಗ್ರೀನ್‌ ಟೀ ಕುಡಿಯೋದ್ರಿಂದ ಸಿಗುತ್ತೆ. ಹಾಗಿದ್ರೆ, ಗ್ರೀನ್‌ ಟೀ ಕುಡಿಯೋದ್ರಿಂದ ಏನ್‌ ಪ್ರಯೋಜನ? ಇದನ್ನ ತಯಾರಿಸುವ ಸರಿಯಾದ ವಿಧಾನ ಹೇಗೆ? ತೂಕ ಕಡಿಮೆ ಮಾಡ್ಕೊಳೋದಿಕ್ಕೆ ಗ್ರೀನ್‌ ಟೀಯನ್ನ ಯಾವ ರೀತಿ ಸೇವನೆ ಮಾಡ್ಬೇಕು? ಗ್ರೀನ್‌ ಟೀ ತಯಾರಿಸೋದು ಸರಿಯಾದ ವಿಧಾನ ಗ್ರೀನ್‌ ಟೀಯನ್ನ ಯಾವತ್ತೂ ಕೂಡ ಡೈರೆಕ್ಟ್‌ ಹೀಟ್‌ನಲ್ಲಿ ಬಿಸಿ ಮಾಡೋಹಾಗಿಲ್ಲ. ಇದ್ರಿಂದ ಗ್ರೀನ್‌ ಟೀಯಲ್ಲಿರುವ ಆಂಟಿಆಕ್ಸಿಡೆಂಟ್ಸ್‌ ನಾಶವಾಗುತ್ವೆ. ಹಾಗೆ ಕುದಿಯುವ ನೀರಿಗೂ ಕೂಡ ಗ್ರೀನ್‌ ಟೀ ಹಾಕೋಹಾಗಿಲ್ಲ. ನೀರು ಚನ್ನಾಗಿ ಬಿಸಿಯಾದ್ಮೇಲೆ ಗ್ರೀನ್‌ ಟೀ ಬ್ಯಾಗ್ಸ್‌ ಅಥವಾ ಎಲೆಗಳನ್ನ ಹಾಕಿ ಒಂದೆರಡು ನಿಮಿಷ ಮುಚ್ಚಿಡಿ. ಒಂದ್ವೇಳೆ ನೀವು…

Read More