Author: chandrakant

ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಭರದಿಂದ ಸಾಗುತ್ತಿದ್ದು, ತಾರಾಗಣವೇ ಈ ಸಿನಿಮಾದಲ್ಲಿ ನಟಿಸುತ್ತಿದೆ. ಈಗ ಈ ಸಿನಿಮಾದಲ್ಲಿ ಮತ್ತೊಬ್ಬ ಪ್ಯಾನ್‌ ಇಂಡಿಯಾ ಸ್ಟಾರ್‌ ಕೈಜೊಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದು ಬೇರೆ ಯಾರೂ ಅಲ್ಲ ಕನ್ನಡದ ಬಾದ್‌ಷಾ ಕಿಚ್ಚ ಸುದೀಪ್‌. ಇದಕ್ಕೆ ಸಾಕ್ಷಿ ಎಂಬಂತೆ ಸಿನಿಮಾ ಸೆಟ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಾದ್‌ಷಾ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಧ್ರುವ ಸರ್ಜಾ ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಭರ್ಜರಿ ಆಕ್ಷನ್ ಹೊಂದಿರುವ ಈ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಜನರು ತುಂಬಾ ಇಷ್ಟಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಅನೇಕ ದೊಡ್ಡ ಸ್ಟಾರ್‌ಗಳು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ಇದೀಗ ಕಿಚ್ಚಾ ಸುದೀಪ್‌ ಸಹ ಕೈಜೋಡಿಸಿದಂತಿದೆ. ರಾಮೋಜಿಯಲ್ಲಿ ಕೆಡಿ ಸಿನಿಮಾ ಚಿತ್ರೀಕರಣಕ್ಕಾಗಿ ದೊಡ್ಡ ರೈಲಿನ…

Read More

ನೌಕರರ ಪಿಂಚಣಿ ಯೋಜನೆ EPS-95 ಪಿಂಚಣಿದಾರರ ಬಹುಕಾಲದ ಬೇಡಿಕೆ ಈಡೇರುವ ಕಾಲ ಬಂದಿದೆ. ಪಿಂಚಣಿದಾರರ ಕನಿಷ್ಠ ಪಿಂಚಣಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ನೌಕರರ ಪಿಂಚಣಿ ಯೋಜನೆ ಅಡಿಯಲ್ಲಿ ನೌಕರರ ಕನಿಷ್ಠ ಪಿಂಚಣಿಯನ್ನು ಏಳು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ. ನೌಕರರು ಪ್ರತಿ ತಿಂಗಳು ತಮ್ಮ ಸಂಬಳದ 12% ಅನ್ನು ತಮ್ಮ ಇಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಸಹ ಅದೇ ಮೊತ್ತವನ್ನು ಠೇವಣಿ ಮಾಡುತ್ತದೆ. ಇದರಲ್ಲಿ ಕಂಪನಿಯ ಪಾಲನ್ನು ಇಪಿಎಸ್‌ನಲ್ಲಿ ನಿವೃತ್ತಿಗಾಗಿ ಠೇವಣಿ ಮಾಡಲಾಗುತ್ತದೆ. ಇಲ್ಲಿಯವರೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ, EPS-95 ಪಿಂಚಣಿದಾರರಿಗೆ ನೀಡುತ್ತಿದ್ದ ಕನಿಷ್ಠ ಮಾಸಿಕ ಪಿಂಚಣಿ 1,000 ರೂಪಾಯಿ ಆಗಿತ್ತು. ಆದರೆ ಇನ್ನು ಮುಂದೆ ಈ ಪಿಂಚಣಿಯನ್ನು 7,500 ರೂಪಾಯಿಗೆ ಹೆಚ್ಚಿಸಲಾಗುತ್ತೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಇಪಿಎಫ್‌ಒ ಈಗಾಗಲೇ ಪೂರೈಸಿದ್ದು, ಶೀಘ್ರದಲ್ಲೇ ಅದರ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗುತ್ತೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಇದು ಹೆಚ್ಚು ಲಾಭದಾಯಕವಾಗಿದ್ದು, ನಿವೃತ್ತಿಯ ನಂತರ ತಮ್ಮ…

Read More

ಸದ್ಯ ಏಷ್ಯಾಕಪ್‌ ಕ್ರೇಜ್‌ ಎಲ್ಲೆಡೆ ಆವರಿಸಿದೆ. ಆದ್ರೆ ಅದಕ್ಕಿಂತ ಜಾಸ್ತಿ ಕುತೂಹಲ ಮೂಡಿಸಿರೋದು ಇಂಡಿಯಾ ವರ್ಸಸ್‌ ಪಾಕಿಸ್ತಾನ ಮ್ಯಾಚ್‌. ಬಹು ವರ್ಷಗಳಿಂದ ಈ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದೇ ಇಲ್ಲ. ಹೀಗಾಗಿ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಎರಡೂ ತಂಡಗಳು ಮುಖಾಮುಖಿಯಾಗಿ ಭರ್ಜರಿ ಎಂಟರ್‌ಟೈನ್‌ಮೆಂಟ್‌ ಕೊಡ್ತಿವೆ. ಇದೀಗ ಪ್ರಸ್ತುತ ಏಷ್ಯಾಕಪ್‌ನಲ್ಲಿ ಸೆ. 14ರಂದು ದುಬೈ ಸ್ಟೇಡಿಯಂನಲ್ಲಿ ಎರಡು ತಂಡಗಳು ಮತ್ತೊಮ್ಮೆ ಸೆಣಸಾಡಲಿವೆ. ಎರಡು ಟೀಂಗಳು ಒಂದೊಂದು ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ಮುನ್ನುಗ್ಗುತ್ತಿವೆ. ಆದ್ರೆ ಭಾರತದ ಸಾಮರ್ಥ್ಯ ಹೆಚ್ಚಾಗಿ ಕಾಣಿಸ್ತಿದೆ. ಚಾಂಪಿಯನ್ಸ್‌ ಟ್ರೋಫಿ, ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ. Read Also ಹೂವಿನ ಬಾಣದಂತೆ ಸಾಂಗ್‌ ವೈರಲ್‌ : ಹುಡುಗಿಗೆ ಯಶ್‌ ಜೊತೆ ನಟಿಸುವ ಆಸೆ ಭಾರತ ಹಾಗೂ ಪಾಕಿಸ್ತಾನ ಟಿ20 ಮಾದರಿಯಲ್ಲಿ ಈವರೆಗೂ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದ್ರಲ್ಲಿ ಭಾರತ ಬರೋಬ್ಬರಿ 9 ಪಂದ್ಯಗಳನ್ನು ಗೆದ್ದು ಬೀಗಿದೆ. ಏಕದಿನ ಮಾದರಿಯ ಒಟ್ಟು 19 ಪಂದ್ಯಗಳಲ್ಲಿ ಭಾರತ 10 ಪಂದ್ಯಗಳನ್ನು…

Read More

ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ.. ಅಂತ ಹಾಡು ಹಾಡಿ ಸೋಷಿಯಲ್‌ ಮಿಡಿಯಾದಲ್ಲಿ ಧೂಳೆಬ್ಬಿಸಿದ್ದ ವೈರಲ್‌ ಹುಡುಗಿ ಯಾರು ಎಂಬ ಮಾಹಿತಿ ಹೊರಬಿದ್ದಿದೆ. ಎಲ್ಲೆ ನೋಡಿದರು ಹೂವಿನ ಬಾಣದಂತೆ ಹಾಡು ಕೇಳಿಬರುತ್ತಿತ್ತು. ಅನೇಕರನ್ನ ನಕ್ಕು ನಲಿಸಿದ ಆ ವೈರಲ್‌ ಹಾಡುಗಾರ್ತಿ ಯಾರು ಗೊತ್ತಾ..?. ಕನ್ನಡದ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಮುಗ್ಧ ಹುಡುಗಿ ತಾನು ಯಾರು..? ಯಾವ ಊರು..? ಏನು ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ. Read Also : RBI ಟಫ್‌ ರೂಲ್ಸ್‌ : EMI ಕಟ್ಟದಿದ್ರೆ ಫೋನ್‌ ಲಾಕ್‌..! ಅಂದಹಾಗೆ ಹೂವಿನ ಬಾಣದಂತೆ ಹಾಡು ಹಾಡಿ ವೈರಲ್‌ ಆದ ಈ ಹುಡುಗಿಯ ಹೆಸರು ನಿತ್ಯಶ್ರೀ, ಊರು ಮಂಡ್ಯ ಜಿಲ್ಲೆಯ ಕೆ.ಆರ್.​ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದಲ್ಲಿ ಜನಿಸಿದವಾರಗಿದ್ದು, ಪದವಿ ಶಿಕ್ಷಣ ಪಡೆಯಲು ಮೈಸೂರಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಹಾಡಿನ ಬಗ್ಗೆ ಮಾತನಾಡಿರುವ ನಿತ್ಯಶ್ರೀ ನಾನು ಸ್ನೇಹಿತರ ಜೊತೆಗೆ ತಮಾಷೆಗಾಗಿ ಹಾಡಿದ್ದು, ನನ್ನ ವಿಡಿಯೋ ಇಷ್ಟೊಂದು ವೈರಲ್‌ ಆಗುತ್ತದೆ ಎಂದುಕೊಂಡಿರಲಿಲ್ಲ. ತುಂಬಾ…

Read More

EMI ಮೂಲಕ ಮೊಬೈಲ್‌ ಖರೀದಿಸುವವರಿಗೆ RBI ಅತಿ ದೊಡ್ಡ ಶಾಕ್‌ ಕೊಟ್ಟಿದೆ. ಸಾಲ ಪಡೆದು ಆನ್‌ ಟೈಮ್‌ ಮರುಪಾವತಿ ಮಾಡದಿದ್ರೆ ನಿಮ್ಮ ಫೋನ್‌ ಲಾಕ್‌ ಆಗುವುದು ಖಂಡಿತ. ಯಾಕಂದ್ರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಸಾಲ ಮರುಪಾವತಿ ಮಾಡದವರ ಫೋನ್‌ ಲಾಕ್‌ ಮಾಡುವ ನಿಯಮವನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದೆ. ಆರ್‌ಬಿಐನ ಈ ನಿಯಮವು ಸಾಲದಾತರಿಗೆ ಸಾಲ ಮರುಪಡೆಯುವಲ್ಲಿ ಸಹಾಯಕವಾಗಲಿದೆ. ಸಾಲ ನೀಡುವ ಸಂಸ್ಥೆಗಳು ಫೋನ್‌ಗಳಲ್ಲಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿ, ಸಾಲಗಾರರ ಫೋನ್‌ಗಳನ್ನು ಲಾಕ್ ಮಾಡಬಹುದು. ಇದ್ರಿಂದ ಫೋನ್‌, ಫೋನ್‌ನಲ್ಲಿರುವ ಡೇಟಾಗಾಗ್ಲಿ ಯಾವುದೇ ತೊಂದ್ರೆ ಆಗೋದಿಲ್ಲ. ಸಾಲ ಮರುಪಾವತಿ ಆಗ್ತಿದ್ದಾಗೆ ಫೋನ್‌ ಅನ್‌ಲಾಕ್‌ ಆಗಿ ಮೊದಲಿನಂತೆ ವರ್ಕ್‌ ಮಾಡುತ್ತೆ. ಸಾಲಗಾರರು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಫೋನ್ ಲಾಕ್ ಆಗಿ ದೈನಂದಿನ ಜೀವನಕ್ಕೆ ಅಡ್ಡಿಯಾಗಬಹುದು. ಈ ಕಾರಣದಿಂದ ಸಾಲ ಬೇಗನೆ ಮರು ಪಾವತಿಯಾಗಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ನಿಯಮ ಜಾರಿಗೆ ತರುವ ಚಿಂತನೆ ನಡೆಸುತ್ತಿದೆ. CIBILನಂತಹ ಕ್ರೆಡಿಟ್ ಬ್ಯೂರೋಗಳ ಪ್ರಕಾರ, ₹1,00,000ಕ್ಕಿಂತ…

Read More

2023ರಿಂದ ಕುಕಿ ಮತ್ತು ಮೈತೈ ಜನಾಂಗೀಯ ಗಲಭೆಗೆ ತುತ್ತಾಗಿರುವ ಮಣಿಪುರ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಮಣಿಪುರದ ಚಂದಾಚೂರ್‌ ಪುರಕ್ಕೆ ಭೇಟಿ ನೀಡಿದ ಮೋದಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಮಣಿಪುರ ಮುಖ್ಯಮಂತ್ರಿ ಎನ್.‌ ಬಿರೇನ್‌ ಸಿಂಗ್‌ ಮೋದಿಯನ್ನ ಆದರದಿಂದ ಬರಮಾಡಿಕೊಂಡರು. ಸಮಾರಂಭಕ್ಕೂ ಮುನ್ನ ಗಲಭೆಯಲ್ಲಿ ಪೋಷಕರನ್ನ ಕಳೆದುಕೊಂದ ಮಕ್ಕಳನ್ನ ಭೇಟಿ ಮಾಡಿದರು. ಇದರ ಜೊತೆಯಲ್ಲಿ ಮಣಿಪುರದಲ್ಲಿ 7,300 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಸಮಾರಂಭದಲ್ಲಿ ಭಾಷಣ ಮಾಡಿದ ಮೋದಿ ಜನಾಂಗೀಯ ಸಂಘರ್ಷದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮಣಿಪುರ ಈ ದೇಶಕ್ಕೆ ಪ್ರಕೃತಿ ನೀಡಿದ ವಿಶೇಷ ಕೊಡುಗೆಯಾಗಿದೆ. ಮಣಿಪುರ ರಾಜ್ಯದ ಹೆಸರಿನಲ್ಲೇ ಮಣಿ ಇದೆ. ಈ ರಾಜ್ಯ ಮುಂಬರುವ ದಿನಗಳಲ್ಲಿ ಸಮಸ್ತ ಈಶಾನ್ಯ ಭಾರತದ ಭಾಗ್ಯ ಬದಲಿಸುವ ಶಕ್ತಿಯಾಗಲಿದೆ ಎಂದು ಕೊಂಡಾಡಿದರು. ತಮ್ಮ ಭಾಷಣದಲ್ಲಿ ಮಣಿಪುರ ಹಿಂಸಾಚಾರವನ್ನು ಉಲ್ಲೇಖಿಸಿದರು. ಕಳೆದ ಎರಡು ವರ್ಷಗಳಿಂದ ಭೀಕರ ಹಿಂಸಾಚಾರದಿಂದ ನಲುಗಿದ್ದ ರಾಜ್ಯ ಈಗ ಶಾಂತಿಯ ಪಥದಲ್ಲಿ…

Read More

ಹಾಸನದ ಮೊಸಳೆಹೊಸಹಳ್ಳಿಯಲ್ಲಿ ನಡೆದಿರೋದು ಹೃದಯವಿದ್ರಾವಕ ದುರಂತ. ತಮ್ಮ ಪಾಡಿಗೆ ತಾವು ಗಣೇಶ ಮೆರವಣಿಗೆಯಲ್ಲಿ ಸಂಭ್ರಮಾಚರಣೆ ನಡೆಸ್ತಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಗಣೇಶ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಟ್ರಕ್ ನುಗ್ಗಿದ್ದರಿಂದ ಘಟನೆಯಲ್ಲಿ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದ್ಧೂರಿಯಾಗಿ ಗಣೇಶ ಮೆರವಣಿಗೆ ಸಾಗುತ್ತಿರುವ ವೇಳೆ ವೇಗವಾಗಿ ಬಂದ ಟ್ರಕ್‌ ಜನರ ಮೇಲೆ ನುಗ್ಗಿದೆ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಡಿವೈಡರ್​ಗೆ ಡಿಕ್ಕಿ ಆದ ಟ್ರಕ್​ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದು ಜನರ ಮೇಲೆ ಹರಿದಿದೆ. ಇದರ ಪರಿಣಾಮ ಮೆರವಣಿಗೆಯಲ್ಲಿದ್ದ 9 ಜನರು ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆಯ ಹೆಚ್ಚಾಗುವ ಸಾಧ್ಯತೆ ಇದೆ. ಲಾರಿ ಏಕಾಏಕಿ ನುಗ್ಗಿದ್ದರಿಂದ 10 ರಿಂದ 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಇನ್ನೂ ಕೆಲವರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇನ್ನು ಈ ಬಗ್ಗೆ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ಈ ಘಟನೆ ತೀವ್ರ…

Read More

ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶದ ರಾಜಕಾರಣದಲ್ಲಿ ಮೋಸ್ಟ್‌ ಪವರ್‌ಫುಲ್‌ ಲೀಡರ್. ದೇಶವನ್ನು ಸತತ 3ನೇ ಬಾರಿಗೆ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.. ಆದ್ರೀಗ ಮೋದಿ ಆಡಳಿತ ಅಂತ್ಯದ ಅವಧಿ ಅತಿಹೆಚ್ಚು ಚರ್ಚೆಯಾಗುತ್ತಿದೆ.. ಯಾಕಂದ್ರೆ, ಮೋದಿಗೆ ಸೆಪ್ಟೆಂಬರ್‌ 17 ಬಂತಂದ್ರೆ 75 ವರ್ಷ.. ಒಂದು ವೇಳೆ ಮೋದಿ ನಿವೃತ್ತಿ ಪಡೆದ್ರೆ ಮುಂದಿನ ಸಾರಥಿ ಯಾರು? ಮೋದಿಯಷ್ಟೇ ಸಮರ್ಥವಾಗಿ ದೇಶವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಯಾರಿಗಿದೆ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಬಿಜೆಪಿಯ (BJP) ಹೈಕಮಾಂಡ್‌ ಪಡಸಾಲೆಯಲ್ಲಿ ಅತಿದೊಡ್ಡ ನಿರ್ಧಾರವೊಂದು ಜನ್ಮತಳೆದಿದೆ. ಪ್ರಧಾನಿ ಮೋದಿಯ ಉತ್ತರಾಧಿಕಾರಿ ಯಾರು? ಇತ್ತೀಚೆಗಷ್ಟೆ ಮೋದಿ ಅತಿ ಹೆಚ್ಚು ಅವಧಿಯ ಕಾಲ ಪಿಎಂ ಆಗಿ ಆಳ್ವಿಕೆ ನಡೆಸಿ ಮಾಜಿ ಪಿಎಂ ದಿವಂಗತ ಇಂದಿರಾ ಗಾಂಧಿ (Indira Gandhi) ದಾಖಲೆಯನ್ನ ಬ್ರೇಕ್‌ ಮಾಡಿದ್ರು.. ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ನೆಹರು ಅಗ್ರ ಸ್ಥಾನದಲ್ಲಿದ್ರೆ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ.. ಬಿಜೆಪಿಯ ಅಗ್ರಗಣ್ಯ ನಾಯಕರಾಗಿರುವ ಮೋದಿ, ಈಗ ಅಧಿಕಾರ ಅಂತ್ಯದ ಹಾದಿಯಲ್ಲಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ..…

Read More

3, 4 ವರ್ಷಗಳಿಗೊಮ್ಮೆ ಸಿನಿಮಾ ಮಾಡಿದ್ರೂ ತಮ್ಮದೇ ಆದ ಕ್ರೇಜ್‌ ಹೊಂದಿರುವ ನಟ ಅಂದ್ರೆ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಮಾಡಿದ್ದು ನಾಲ್ಕೈದು ಸಿನಿಮಾಗಳಾದ್ರೂ ಈ ನಟನಿಗೆ ಭಾರೀ ಬೇಡಿಕೆ ಇದೆ.. ಹಿಂದಿನ ಮಾರ್ಟಿನ್‌(Martin) ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದ್ರೆ, ನಿರ್ದೇಶಕ ಪ್ರೇಮ್‌ (Prem)ಜೊತೆ ಮಾಡ್ತಿರುವ ಕೆ.ಡಿ ಫಿಲಂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಹಾಡುಗಳು ಕೂಡ ಸಖತ್‌ ಸದ್ದು ಮಾಡಿವೆ. ಹೀಗಿರುವಾಗ್ಲೇ ಧ್ರುವ ಮೇಲೆ ಕೋಟಿ ಕೋಟಿ ವಂಚನೆ ಆರೋಪ ಕೇಳಿ ಬಂದಿದೆ. ಜೊತೆಗೆ FIR ಕೂಡ ದಾಖಲಾಗಿದೆ. ಮೊದ್ಲೇ ಸಂಕಷ್ಟದಲ್ಲಿದ್ದ ಸ್ಯಾಂಡಲ್‌ವುಡ್‌ನಲ್ಲಿ (sandalwood) ಧ್ರುವ ವಿವಾದ ಮತ್ತಷ್ಟು ಕೋಲಾಹಲ ಎಬ್ಬಿಸಿದೆ. ನಟ ಧ್ರುವ ಮೇಲೆ 3.15 ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.. ಒಪ್ಪಂದಕ್ಕೂ ಮೊದಲೇ ನಿರ್ದೇಶಕ ರಾಘವೇಂದ್ರ ಹೆಗಡೆಯಿಂದ (raghavendra hegde) ಹಣ ಪಡೆದು ಚಿತ್ರೀಕರಣಕ್ಕೆ ಹಾಜರಾಗದಿದ್ದ ಕಾರಣ FIR ದಾಖಲಾಗಿದೆ.. ಮುಂಬೈನ ಅಂಬೋಲಿ ಪೊಲೀಸರು ಧ್ರುವ ಮೇಲೆ FIR ದಾಖಲಿಸಿದ್ದಾರೆ.…

Read More

ಧರ್ಮಸ್ಥಳ.. (Dharmasthala) ಧಾರ್ಮಿಕವಾಗಿ ಪ್ರಸಿದ್ಧವಾಗಿರುವ ಕೇಂದ್ರ.. ಆದ್ರೆ ಇದೀಗ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಕ್ಷೇತ್ರ.. ಅನಾಮಿಕನ ಹೇಳಿಕೆ ದಾಖಲಿಸಿ, ಸಮಾಧಿಯಾಗಿರುವ ಶವಗಳ ಹುಡುಕಿ ಹೊರಟ ಎಸ್‌ಐಟಿಗೆ (SIT) ಸಿಕ್ಕ ಕುರುಹುಗಳೇನು..? ಈಗಾಗಲೇ ಸಿಕ್ಕ ಕಳೇಬರ ಇಡೀ ಧರ್ಮಸ್ಥಳ ರಕ್ತ ಚರಿತ್ರೆಯ ಸಾಕ್ಷಿ ಹೇಳುತ್ತಾ? ಮಿಕ್ಕಿರುವ ಸ್ಥಳಗಳಲ್ಲಿ ಲೆಕ್ಕೇ ಸಿಗದಷ್ಟು ಅಸ್ತಿಪಂಜರಗಳು ಸಿಗುತ್ತಾ..? ಯಾವಾಗ ಅನಾಮಿಕ ವ್ಯಕ್ತಿ ತಾನು ನೇತ್ರಾವತಿ ತಟದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ (burial case) ಅಂತ ಹೇಳಿಕೆ ದಾಖಲಿಸಿದನೋ.. ಆಗ್ಲೇ ಈ ಪ್ರಕರಣ ದೇಶದ ತುಂಬೆಲ್ಲಾ ಹಲ್‌ಚಲ್‌ ಎಬ್ಬಿಸಿತು.. ದಿನಗಳೆದಂತೆ ಅದರ ಮೇಲಿದ್ದ ಕುತೂಹಲ ಇನ್ನಷ್ಟು ಹೆಚ್ಚಿಸಿತು.. ಎಲ್ಲರ ಬೇಡಿಕೆಯಂತೆ ಎಸ್‌ಐಟಿ ಕೂಡ ಎಂಟ್ರಿ ಕೊಡ್ತು.. IPS ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲೇ ತನಿಖೆ ಕೂಡ ಶುರುವಾಯ್ತು.. ಆದ್ರೆ ಆರಂಭಿಕವಾಗಿ ಈ ಪ್ರಕರಣ ಭಾರೀ ಹಿನ್ನಡೆ ಪಡೆದಿತ್ತು.. ಯಾಕಂದ್ರೆ ಪಾಯಿಂಟ್‌ ನಂಬರ್‌ 1ರಲ್ಲಿ ಪಾನ್‌ ಕಾರ್ಡ್‌, ಎಟಿಎಂ ಕಾರ್ಡ್‌ಗಳು ಬಿಟ್ರೆ ಉಳಿದ 4 ಪಾಯಿಂಟ್‌ಗಳಲ್ಲಿ ಏನೂ ಸಿಕ್ಕಿರಲಿಲ್ಲ..…

Read More