3, 4 ವರ್ಷಗಳಿಗೊಮ್ಮೆ ಸಿನಿಮಾ ಮಾಡಿದ್ರೂ ತಮ್ಮದೇ ಆದ ಕ್ರೇಜ್‌ ಹೊಂದಿರುವ ನಟ ಅಂದ್ರೆ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಮಾಡಿದ್ದು ನಾಲ್ಕೈದು ಸಿನಿಮಾಗಳಾದ್ರೂ ಈ ನಟನಿಗೆ ಭಾರೀ ಬೇಡಿಕೆ ಇದೆ.. ಹಿಂದಿನ ಮಾರ್ಟಿನ್‌(Martin) ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದ್ರೆ, ನಿರ್ದೇಶಕ ಪ್ರೇಮ್‌ (Prem)ಜೊತೆ ಮಾಡ್ತಿರುವ ಕೆ.ಡಿ ಫಿಲಂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಹಾಡುಗಳು ಕೂಡ ಸಖತ್‌ ಸದ್ದು ಮಾಡಿವೆ. ಹೀಗಿರುವಾಗ್ಲೇ ಧ್ರುವ ಮೇಲೆ ಕೋಟಿ ಕೋಟಿ ವಂಚನೆ ಆರೋಪ ಕೇಳಿ ಬಂದಿದೆ. ಜೊತೆಗೆ FIR ಕೂಡ ದಾಖಲಾಗಿದೆ. ಮೊದ್ಲೇ ಸಂಕಷ್ಟದಲ್ಲಿದ್ದ ಸ್ಯಾಂಡಲ್‌ವುಡ್‌ನಲ್ಲಿ (sandalwood) ಧ್ರುವ ವಿವಾದ ಮತ್ತಷ್ಟು ಕೋಲಾಹಲ ಎಬ್ಬಿಸಿದೆ.

ನಟ ಧ್ರುವ ಮೇಲೆ 3.15 ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.. ಒಪ್ಪಂದಕ್ಕೂ ಮೊದಲೇ ನಿರ್ದೇಶಕ ರಾಘವೇಂದ್ರ ಹೆಗಡೆಯಿಂದ (raghavendra hegde) ಹಣ ಪಡೆದು ಚಿತ್ರೀಕರಣಕ್ಕೆ ಹಾಜರಾಗದಿದ್ದ ಕಾರಣ FIR ದಾಖಲಾಗಿದೆ.. ಮುಂಬೈನ ಅಂಬೋಲಿ ಪೊಲೀಸರು ಧ್ರುವ ಮೇಲೆ FIR ದಾಖಲಿಸಿದ್ದಾರೆ. 2016ರಿಂದ‌ 2018ರವರೆಗೆ ಡೈರೆಕ್ಟರ್‌ ರಾಘವೇಂದ್ರ ಹಾಗೂ ಧ್ರುವ ಜೊತೆಯಲ್ಲೇ ಕೆಲಸ ಮಾಡಿದ್ದಾರೆ.. ಬಳಿಕ ಧ್ರುವ ರಾಘವೇಂದ್ರರನ್ನು ಭೇಟಿ ಮಾಡಿ ಸಿನಿಮಾ ಮಾಡೋಣ ಅಂತ ಹೇಳಿದ್ರಂತೆ. ಹೀಗಾಗಿ ನಿರ್ದೇಶಕ ರಾಘವೇಂದ್ರ ಸೈನಿಕರ ಕಥೆ ಆಧಾರಿತ ಸೋಲ್ಜರ್‌ ಎಂಬ ಸಿನಿಮಾ ಮಾಡಲು 2018 ಮತ್ತು 2021ರ ನಡುವೆಯೇ ಧ್ರುವಗೆ ಹಣ ನೀಡಿದ್ದಾರೆ. 2019 ಫೆಬ್ರವರಿ 21 ರಂದು ಒಪ್ಪಂದವೂ ಆಗಿತ್ತು. ಅದಕ್ಕೂ ಮೊದಲೇ ಹಣ ವರ್ಗಾವಣೆ ಕೂಡ ಆಗಿತ್ತು. ಇದೇ ದುಡ್ಡಿನಲ್ಲಿ ಧ್ರುವ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಅಂತಲೂ ಹೇಳಲಾಗ್ತಿದೆ.

ಅಷ್ಟೇ ಅಲ್ಲದೇ ಸ್ಕ್ರಿಪ್ಟ್‌ ರೈಟರ್ ಹಾಗೂ ಪಬ್ಲಿಸಿಟಿಗಾಗಿ ಧ್ರುವ ಮತ್ತೆ 28 ಲಕ್ಷ ಹಣ ಪಡೆದಿದ್ರಂತೆ. ಅದಾದ ನಂತರ ನಿರ್ದೇಶಕನಿಂದ ಅಂತರ ಕಾಯ್ದುಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಹೀಗಾಗಿ, ರಾಘವೇಂದ್ರ ಹೆಗಡೆ ಕರ್ನಾಟಕ ಫಿಲ್ಮ್ ಚೆಂಬರ್ ಸೇರಿ ಹಲವರಿಗೆ ದೂರು ನೀಡಿದ್ರು. ಬಳಿಕ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಧ್ರುವ ಮೇಲೆ FIR ದಾಖಲಿಸಿದ್ದಾರೆ. ಇತ್ತ ಧ್ರುವ ಸರ್ಜಾ ಆಪ್ತರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಧ್ರುವ ಮ್ಯಾನೇಜರ್‌ ಸ್ಪಷ್ಟನೆ ಕೊಟ್ಟಿದ್ದಾರೆ.. 8 ವರ್ಷದ ಹಿಂದೆ ರಾಘವೇಂದ್ರ ಹೆಗ್ಡೆ ಅಡ್ವಾನ್ಸ್ ಕೊಟ್ಟಿದ್ದು ನಿಜ. ಸಿನಿಮಾದ ಬಗ್ಗೆ ಆಗಾಗ ಚರ್ಚೆ ಕೂಡ ನಡೀತಾ ಇತ್ತು. ಜೂನ್‌ 8 ರಂದು ಅವ್ರು ಮತ್ತೆ ಬಂದು ಧ್ರುವ ಸರ್ಜಾರನ್ನು ಭೇಟಿ ಮಾಡಿದ್ದಾರೆ.. ಕನ್ನಡದಲ್ಲಿ ಸರಿಯಾಗಿ ಬ್ಯುಸಿನೆಸ್ ಆಗ್ತಿಲ್ಲ.. ತಮಿಳು ಅಥವಾ ತೆಲುಗಿನಲ್ಲಿ ಸಿನಿಮಾ ಮಾಡೋಣ ಅಂತ ಹೇಳಿದ್ರು. ಆದ್ರೆ ಇದಕ್ಕೆ ಒಪ್ಪದೇ ಕನ್ನಡದಲ್ಲೇ ಮಾಡೋಣ ಅಂತ ಹೇಳಿದ್ರು. ಆದ್ರೆ ಇದಕ್ಕೆ ಒಪ್ಪದ ನಿರ್ದೇಶಕರು ಜೂನ್ 10ಕ್ಕೆ ಮುಂಬೈ ಕೋರ್ಟ್‌ನಿಂದ ನೋಟಿಸ್ ಕಳಿಸಿದ್ದಾರೆ. ಜೂನ್ 15ಕ್ಕೆ ನಾವು ಆ ನೋಟಿಸ್‌ಗೆ ಉತ್ತರಿಸಿದ್ದೇವೆ ಅಂತ ಧ್ರುವ ಮ್ಯಾನೇಜರ್‌ ಅಶ್ವಿನ್ ಬಾಸ್‌ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಂದಾದ ಮೇಲೆ ಒಂದರಂತೆ ವಿವಾದಗಳು ಸೃಷ್ಟಿಯಾಗ್ತಾನೆ ಇವೆ. ಮೊದಲೇ ಸ್ಟಾರ್‌ಗಳ ಸಿನಿಮಾ ಅಪರೂಪ ಎನಿಸಿಕೊಂಡಿರುವ ಹೊತ್ತಲ್ಲಿ ಈ ರೀತಿಯ ಆರೋಪ, ವಿವಾದಗಳು ಹರಿದಾಡ್ತಿದೆ.. ಇದಕ್ಕೆ ಧ್ರುವ ಸರ್ಜಾ ಹೇಗೆ ಉತ್ತರಿಸುತ್ತಾರೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.

Share.
Leave A Reply