Author: chandrakant

ಬಿಜೆಪಿ ನಾಯಕರ ವಿರುದ್ಧದ ಹೇಳಿಕೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಈಗ ಹೊಸ ಪಕ್ಷ ಕಟ್ಟುವ ಆಲೋಚನೆ ಮಾಡಿದ್ದಾರೆ ಅನ್ನೋ ಸದ್ದು ತೀವ್ರಗೊಂಡಿದೆ. ಈ ಕುರಿತಾಗಿ ಮಾತನಾಡಿರುವ ಯತ್ನಾಳ್‌, ಪ್ರತಾಪ್ ಸಿಂಹ ಜೊತೆ ಸೇರಿ ಹೊಸ ಪಕ್ಷಕ್ಕೆ ನಾಂದಿ ಹಾಡ್ತೇನೆ ಎಂಬ ಹೇಳಿಕೆ ನೀಡಿದ್ರು. ಪ್ರತಾಪ್ ಸಿಂಹ ಸಹ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ವಂಚಿತರಾಗಿದ್ದು, ಈ ಕುರಿತಾಗಿ ಫೆಸ್‌ಬುಕ್‌ನಲ್ಲೂ ಪ್ರತಾಪ್‌ ಸಿಂಹ ಬೇಸರ ವ್ಯಕ್ತಪಡಿಸಿದ್ದರು. ಇಂತಹ ಸಮಯದಲ್ಲಿ ಯತ್ನಾಳ್‌ರ ಈ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆಗೆ ಕಾರಣವಾಗಿತ್ತು. ಹಾಗೂ ರಾಜ್ಯ ಬಿಜೆಪಿ ಇಬ್ಭಾಗವಾಗುತ್ತಾ ಎಂಬ ಮಾತುಗಳು ಸಹ ಕೇಳಿ ಬರ್ತಿವೆ. ಆದರೆ ಯತ್ನಾಳ್‌ರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಜತೆ ಸೇರಿ ಹೊಸ ಪಕ್ಷ ಕಟ್ಟುತ್ತೇನೆ ಎಂದು ಯತ್ನಾಳ್ ಹೇಳಿದ್ದು, ಈ ವಿಚಾರವಾಗಿ ಮಾತನಾಡಿ ಪ್ರತಾಪ್ ಸಿಂಹ,…

Read More

ಪ್ರೊ ಕಬಡ್ಡಿಯಲ್ಲಿ ಬೆಂಗಳೂರಿನ ಗೂಳಿಗಳ ಸದ್ದು ಜೋರಾಗಿದೆ. ಕೋಚ್ ಬಿ.ಸಿ ರಮೇಶ್‌ ನೇತೃತ್ವದ ಯುವ ಆಟಗಾರರ ಬೆಂಗಳೂರು ಬುಲ್ಸ್‌ ಸತತ ನಾಲ್ಕನೇ ಪಂದ್ಯವನ್ನು ಗೆದ್ದು ಬೀಗಿದ್ದು, ಅದರಲ್ಲಿ ವೀರ ಕನ್ನಡಿಗ ಗಣೇಶ್‌ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಮೊದಲಾವಧಿಯ ಆಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ವೇಳೆ ಬುಲ್ಸ್‌ ಆರಂಭದಲ್ಲಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದೆ. ಆದ್ರೆ 2ನೇ ಅವಧಿಯಲ್ಲಿ ಉಭಯ ತಂಡಗಳು ಸಮಬಲದಿಂದ ಅಬ್ಬರಿಸಿದ್ದು, ಕ್ಲೈಮ್ಯಾಕ್ಸ್‌ ಹಂತದಲ್ಲಿ ಟೈಟಾನ್ಸ್‌ ವಿರುದ್ಧ ವೀರ ಕನ್ನಡಿಗ ಗಣೇಶ್‌ ಮ್ಯಾಜಿಕ್‌ ರೆಡ್‌ ಮೂಲಕ ತಂಡದ ಗೆಲುವಿಗೆ ಸಾಕ್ಷಿಯದ್ರು. ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ಗಣೇಶ ಹನಮಂತಗೋಲ್ ಅವರ ಭರ್ಜರಿ ರೈಡ್‌ನ ಪರಿಣಾಮ 12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನ 34ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌, ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿದೆ. ಇನ್ನು ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಬುಲ್ಸ್‌ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ…

Read More

ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ಛಿಮಾರಿ ಹಾಕಿ, ಸಲ್ಲಿಸಿದ ಪಿಐಎಲ್‌ನ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ ವಜಾಗೊಳಿಸಿತ್ತು. ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ತೀವ್ರ ಬೇಸರ ವ್ಯಕ್ತಪಡಿಸಿದರು. ಹೈಕೋರ್ಟ್‌ನಲ್ಲಿ ಅರ್ಜಿ ವಜಾ ವಿಚಾರದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಮುಡಾದಲ್ಲಿ 14 ಸೈಟುಗಳನ್ನು ಪಡೆದು ಹಗಲುದರೋಡೆ ಮಾಡಿದ್ದ ಪ್ರಕರಣವನ್ನೇ ವಜಾ ಮಾಡಲಾಗಿತ್ತು. ಹಾಗೆಯೇ ಧರ್ಮಸ್ಥಳದ ಮೇಲೆ ಅಪನಂಬಿಕೆ ಬರುವಂಥ ವಿಡಿಯೋ ಮಾಡಿದ್ದ ಸಮೀರ್‌ಗೆ ಸೆಷನ್ ಕೋರ್ಟ್‌ ಜಾಮೀನು ಕೊಡ್ತು. ಮಹೇಶ್ ತಿಮರೋಡಿ ಕೂಡ ಆರಾಮವಾಗಿ ಓಡಾಡಿಕೊಂಡಿದ್ದಾನೆ. ನಾನು ನ್ಯಾಯ ಸಿಗುವ ಸಣ್ಣ ಭರವಸೆಯಿಂದ ಹೈಕೋರ್ಟ್‌ಗೆ ಪಿಐಎಲ್ ಹಾಕಿದ್ದೆ. ಆದರೆ ಹೈಕೋರ್ಟ್ ಬಾನು ಮುಷ್ತಾಕ್ ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಅನ್ನೋ ಸಣ್ಣ ಕಾರಣ ನೀಡಿ ನನ್ನ ಪಿಐಎಲ್‌ ವಜಾ ಮಾಡ್ತು. ಆದೇಶದ…

Read More

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಡೆವಿಲ್‌ ಶೂಟಿಂಗ್‌ ವೇಳೆ ಏಕಾಏಕಿ ಅಡ್ಡಡ್ಡ ಮಲಗಿಬಿಟ್ಟಿದ್ದಾರೆ.. ದರ್ಶನ್‌ ತೀವ್ರ ನೋವಿನಿಂದ ನರಳಾಡುತ್ತಿದ್ದಾಗ ಅಲ್ಲಿದ್ದವರೆಲ್ಲಾ ಗಾಬರಿಗೊಂಡು ಹಾಸಿಗೆ ತಂದು ಕೊಟ್ಟಿದ್ದಾರೆ.. ಹಾಸಿಗೆ ತರುತ್ತಿದ್ದಂತೆ ದರ್ಶನ್‌ ದಿಢೀರ್‌ ಮಲಗಿ, ಒಂದಷ್ಟು ಸಮಯ ಹಾಗೆ ಕಾಲ ಕಳೆದಿದ್ದಾರೆ.. ಇದೀಗ ದರ್ಶನ್‌ ನೋವಿನಿಂದ ನರಳಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್‌ ಬೆನ್ನು ನೋವಿನ ಸಮಸ್ಯೆ ಕಾರಣ ಜಾಮೀನಿನ ಮೇಲೆ ಹೊರ ಬಂದಿದ್ರು.. ಆದ್ರೆ ಕೆಲವು ತಿಂಗಳ ಬಳಿಕ ಅವರ ಬೇಲ್‌ ರದ್ದಾಗಿ ದರ್ಶನ್‌ ಮತ್ತೆ ಜೈಲು ಸೇರಿದ್ದಾರೆ. ಸಾಕಷ್ಟು ಜನರು ಅವರಿಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ ಅಂತ ಟೀಕೆ ಕೂಡ ಮಾಡ್ತಿದ್ರು.. ಆದ್ರೆ ಇದರ ಬೆನ್ನಲ್ಲೇ ದರ್ಶನ್‌ ವಿಡಿಯೋ ವೈರಲ್‌ ಆಗಿದೆ. ಡೆವಿಲ್‌ ಶೂಟಿಂಗ್‌ ಸಮಯದಲ್ಲಿ ದರ್ಶನ್‌ಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆ ಅಂತ ಹೇಳಲಾಗ್ತಿದೆ.. ಅದೇ ಬೆನ್ನು ನೋವಿನಲ್ಲೇ ಅವರು ಇಡೀ ಶೂಟಿಂಗ್‌ ಮುಗಿಸಿಕೊಟ್ಟಿದ್ದಾರೆ ಅನ್ನೋ ಮಾಹಿತಿ…

Read More

ನಾಡಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ಸರ್ಕಾರ ನಿರ್ಧಾರದ ವಿರುದ್ಧ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿರುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ರು. ನ್ಯಾಯ ಪೀಠದಿಂದ ಕೊನೆಗೂ ನ್ಯಾಯ ಸಿಕ್ಕಿದೆ. ನಾವು ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗುತ್ತೇವೆ. ನಮ್ಮದು ಪ್ರಜಾಪ್ರಭುತ್ವದ ವ್ಯವಸ್ಥೆ. ನಾವಿಂದು ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದೇವೆ. ನಮ್ಮ ಮತ ನಮ್ಮ ಹಕ್ಕು. ಬ್ಯಾಲೆಟ್ ಬುಲೆಟ್‌ಗಿಂತ ಶಕ್ತಿಶಾಲಿ. ನಮ್ಮದು ಈ ಮತಗಳಿಂದ ಆರಿಸಲಾಗಿರುವ ಸರ್ಕಾರ. ಜನರ ಬಹುಮತದೊಂದಿಗೆ ಆರಿಸಿ ಬಂದಿರುವ ಸರ್ಕಾರದ ತೀರ್ಮಾನ ಇದು ಎಂದು ಹೇಳಿದ್ದಾರೆ.. ನಮ್ಮ ಸಂವಿಧಾನ ಸಮಾನತೆಯ ಸಂದೇಶ ಸಾರುತ್ತದೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಚಾಮುಂಡೇಶ್ವರಿ ದೇವಿಗೆ ಪ್ರಾರ್ಥಿಸಬೇಡಿ, ಚಾಮುಂಡಿ ಬೆಟ್ಟಕ್ಕೆ ಬರಬೇಡಿ ಎಂದು ಹೇಳಲು ಹೇಗೆ ಸಾಧ್ಯ? ನಾವು ಸಂವಿಧಾನ ಬದ್ಧವಾದ ನಿರ್ಧಾರ ತೆಗೆದುಕೊಂಡಿದ್ದು, ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನವನ್ನು ಸರಿಯಾಗಿ ಓದಲಿ. ಆಗ ನಿಮ್ಮ ಹಕ್ಕು ಏನಿದೆ…

Read More

ರಾಜ್ಯಾದ್ಯಂತ ಭಾರೀ ಮಳೆ ಮತ್ತು ಪ್ರವಾಹದಿಂದ ಭಾರೀ ಬೆಳೆ ಹಾನಿ ಸಂಭವಿಸಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕೆಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಕಲಬುರಗಿಯ ಎಪಿಎಂಸಿ ಮಾರುಕಟ್ಟೆಯ ಬಳಿ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿ ಅತಿವೃಷ್ಟಿಯಿಂದ ರಾಜ್ಯದಲ್ಲಿ ಭಾರಿ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಇಷ್ಟಾದರೂ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡುವುದು ಬಿಟ್ಟರೆ ಬೇರೆ ಏನು ಮಾಡಿಲ್ಲ. ರಾಜ್ಯದಿಂದ ಕೃಷಿ ಸಚಿವರು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಕೃಷಿ ಸಚಿವರು ರೈತರ ಸಂಕಷ್ಟವನ್ನು ಆಲಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಕಲಬುರಗಿ ಜಿಲ್ಲೆಗಳನ್ನ ಕೃಷಿ ಸಚಿವರು ಮರತೇ ಬಿಟ್ಟಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದರೂ ಸಹ ಕೃಷಿ ಸಚಿವರು ಭೇಟಿ ನೀಡಿಲ್ಲ ಎಂದು ನಿಖಿಲ್‌ ಕಿಡಿಕಾರಿದ್ರು. ಜೆಡಿಎಸ್ ಪಕ್ಷಕ್ಕೆ ಅಧಿಕಾರ ಇರಲಿ…

Read More

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹಗೆ ಮುಖಭಂಗವಾಗಿದೆ. ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಸಲ್ಲಿಸಿದ್ದ ಪಿಐಎಲ್‌ ವಜಾ ಮಾಡುವುದರ ಜೊತೆಗೆ ಧರ್ಮದ ಮಧ್ಯೆ ಕಂದಕ ಸೃಷ್ಟಿಸುವವರಿಗೆ ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ ಮಾಡಿದೆ. ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್‌ಯನ್ನ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ ವಜಾಗೊಳಿಸಿದೆ. ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ, ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದಿದ್ದಾರೆ. ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಲ್ಲ. ಅವರು ಹಿಂದೂ ವಿರೋಧಿ, ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದ ಮಂಡಿಸಿದರು. ಇದಕ್ಕೆ ಉತ್ತರ ನೀಡಿದ ದ್ವಿಸದಸ್ಯರ ಪೀಠ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯಿಂದ…

Read More

ವಕ್ಫ್ ಮಂಡಳಿಯಲ್ಲಿ ಆಗುತ್ತಿರುವ ಅಕ್ರಮವನ್ನ ತಡೆಯಲು ಕೇಂದ್ರ ಸರ್ಕಾರ 2025ರಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನ ಜಾರಿಗೊಳಿಸಿತ್ತು. ವಕ್ಫ್ ಕಾಯ್ದೆಯ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವ್ಯಾಪಕ ವಿರೋಧದ ನಡುವೆಯೂ ಜಾರಿಗೊಳಿಸಿದೆ. ಹಾಗಾಗಿ, ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್, ಕಾಯ್ದೆಗೆ ಸಂಪೂರ್ಣ ತಡೆ ನೀಡಲು ನಿರಾಕರಿಸಿದೆ. ಆದರೆ, ಕೆಲವು ಅಂಶಗಳಿಗೆ ಮಾತ್ರ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಒಬ್ಬ ವ್ಯಕ್ತಿಯು ವಕ್ಫ್ ಮಂಡಳಿಗಳಿಗೆ ತನ್ನ ಭೂಮಿಯನ್ನು ದಾನ ಮಾಡಲು ಕನಿಷ್ಠ 5 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸಿರಬೇಕು. ಆಗ ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿಯನ್ನು ದಾನ ಕೊಡಲು ಅರ್ಹ ಎಂಬುದು 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಅಂಶಕ್ಕೆ ಸದ್ಯಕ್ಕೆ ತಡೆ ನೀಡಲು ಒಪ್ಪಿದೆ. ಜೊತೆಯಲ್ಲಿ ವಕ್ಫ್ ಆಸ್ತಿಯನ್ನು ಯಾವುದು ಎಂದು…

Read More

ದೇಶದಲ್ಲಿ ಡಿಜಿಟಲ್ ಕ್ರಾಂತಿ ಆದ್ಮೇಲೆ ಹ್ಯಾಕರ್ಸ್‌ ಅಟ್ಟಹಾಸ ಹೆಚ್ಚಾಗಿದೆ. ಜಸ್ಟ್ ಒಂದು ಲಿಂಕ್, ಒಂದು ಕಾಲ್‌ ಮಾಡಿ ನಿಮ್ಮ ಮೊಬೈಲ್‌, ಬ್ಯಾಂಕ್‌ ಅಕೌಂಟ್‌ ಹ್ಯಾಕ್ ಮಾಡಿ ಬಿಡ್ತಾರೆ. ಎಷ್ಟೇ ಅಲರ್ಟ್ ಆಗಿದ್ದರೂ ಎಷ್ಟೇ ಬುದ್ದಿವಂತರಾಗಿದ್ದರೂ ಸಹ ಹ್ಯಾಕರ್ಸ್‌ ಚತುರತೆ ಮುಂದೆ ಯಾಮಾರಿ ಬಿಡುತ್ತೇವೆ. ಅದಕ್ಕೆ ಅಪ್ಪಟ ಉದಾಹರಣೆ ಎಂದರೆ ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ. ಕನ್ನಡ ಚಿತ್ರರಂಗದ ಸೂಪರ್‌ ಜೋಡಿ ಅಂದ್ರೆ ಅದು ಉಪ್ಪಿ ಮತ್ತು ಪ್ರಿಯಾಂಕ.. ಈಗ ಈ ಜೋಡಿಗೆ ಹ್ಯಾಕರ್ಸ್‌ ಕಾಟ ಶುರುವಾಗಿದೆ. ಹೌದು ಪ್ರಿಯಾಂಕ ಉಪೇಂದ್ರಗೆ ಆನ್‌ಲೈನ್‌ ಆರ್ಡರ್‌ ಎಂದು ಲಿಂಕ್‌ ಕಳುಹಿಸಿ ದಂಪತಿಯ ಮೊಬೈಲ್‌ ಹ್ಯಾಕ್‌ ಮಾಡಿದ್ದಾರೆ. ಈ ಕುರಿತಾಗಿ ಉಪ್ಪಿ ಮತ್ತು ಪ್ರಿಯಾಂಕಾ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಮತ್ತು ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಆಗಿದೆ. ದುಡ್ಡು ಕೇಳಿದ್ರೆ ಕಳುಹಿಸಬೇಡಿ‌ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ಯಾಕಂದ್ರೆ ಹ್ಯಾಕರ್ಸ್‌ಗಳು ಸೋಷಿಯಲ್ ಮೀಡಿಯಾ ಪೇಜ್‌ಗಳನ್ನ ಹ್ಯಾಕ್ ಮಾಡಿ ಸ್ನೇಹಿತರು, ಸಂಬಂಧಿಕರಿಗೆ ಅವರ ಹೆಸರಲ್ಲಿ ಹಣ…

Read More

2025 ರ ಏಷ್ಯಾ ಕಪ್‌ನಲ್ಲಿ ಸೆ. 14ರಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಗುಂಪು ಹಂತದ ಪಂದ್ಯ ನಡೆಯಿತು. ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್​ಗಳಿಂದ ಬಹಳ ಸುಲಭವಾಗಿ ಜಯಬೇರಿ ಬಾರಿಸಿತು. ಉಗ್ರರಿಗೆ ಸದಾ ಕುಮ್ಮಕ್ಕು ನೀಡುತ್ತಾ ಭಾರತದ ಭದ್ರತೆಗೆ ಸದಾ ಭಂಗ ತರಲು ಪ್ರಯತ್ನಿಸುವ ಪಾಕಿಸ್ತಾನಕ್ಕೆ ಇದೀಗ ಟೀಂ ಇಂಡಿಯಾ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದೆ. ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಯನ್ನು ಸೋಲಿಸಿದಂತೆ, ಟೀಮ್ ಇಂಡಿಯಾ ಕೂಡ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನ ಅಟ್ಟಾಡಿಸಿ ಹೊಡೆದಿದೆ. ಭಾರತವು ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನ ಮುಗಿದೆ. ಇಂಡಿಯಾ-ಪಾಕ್​ ಮ್ಯಾಚ್​ ವೇಳೆ ನಮ್ಮ ಭಾರತೀಯ ಆಟಗಾರರ ಈ ವರ್ತನೆ ಪಾಕಿಗಳಿಗೆ ಖಡಕ್ ಸಂದೇಶ ನೀಡಿದೆ. ಸಾಕಷ್ಟು ನಿರೀಕ್ಷೆ ಹಾಗೂ ಒತ್ತಡದಲ್ಲಿಯೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಮೈದಾನಕ್ಕಿಳಿದಿತ್ತು. ಟಾಸ್ ಗೆದ್ದ ಪಾಕಿಸ್ತಾನ ತಂಡವು…

Read More