ಬೆಂಗಳೂರು, ಜ.19: ಹತ್ತು ನಿಮಿಷದಲ್ಲಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಿಷಯ ಇತ್ತೀಚೆಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಹತ್ತು ನಿಮಿಷದ ಡೆಲಿವರಿಯನ್ನು ಕ್ವಿಕ್‌ ಕಾಮರ್ಸ್‌ ವಲಯದ ಕಂಪನಿಗಳು ಇದೀಗ ಕೈ ಬಿಟ್ಟಿವೆ. ರಸ್ತೆ ಸುರಕ್ಷತೆಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಗಿಗ್‌ ಕಾರ್ಮಿಕರ ಆರೋಗ್ಯ ಮತ್ತು ಭದ್ರತೆಗೆ ಇದೀಗ ಸ್ಪಂದನೆ ಸಿಕ್ಕಿದೆ. ಈ ನಿರ್ಧಾರಕ್ಕೇನೋ ಕೇಂದ್ರ ಸರ್ಕಾರ ಈಗ ಬಂದಿದೆ, ಆದರೆ ಈ ಚರ್ಚೆಯನ್ನು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಸಾಕಷ್ಟು ದಿನಗಳ ಹಿಂದೆಯೇ ಹುಟ್ಟು ಹಾಕಿದ್ದರು ಎಂಬುದು ಗಮನಾರ್ಹ.

ಗಿಗ್‌ ಕಾರ್ಮಿಕರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ಹತ್ತು ನಿಮಿಷದ ವಿತರಣೆಯನ್ನು ರದ್ದು ಮಾಡುವ ಬಗ್ಗೆ ಇ ಕಾಮರ್ಸ್‌ ಕಂಪನಿಗಳೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬ್ಲಿಂಕಿಟ್‌, ಸ್ವಿಗ್ಗಿ ಮತ್ತು ಜೆಫ್ಟೊ ಕಂಪನಿಗಳು ಈ ಹತ್ತು ನಿಮಿಷದ ಸೇವೆಯನ್ನು ರದ್ದು ಮಾಡಿವೆ.

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಲಾಡ್‌ ಕಳವಳ :
ಗಿಗ್‌ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಸಾಕಷ್ಟು ಹಿಂದಿನಿಂದಲೂ ಕಾಳಜಿ ಮತ್ತು ಕಳವಳವನ್ನು ವಹಿಸುತ್ತಾ ಬಂದಿದ್ದಾರೆ. ಗಿಗ್‌ ಕಾರ್ಮಿಕರು ನಗರ ಮತ್ತು ಪಟ್ಟಣಗಳಲ್ಲಿ ವಸ್ತುಗಳನ್ನು ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ವೇಳೆ ಯಾವ ರೀತಿ ಅನಾರೋಗ್ಯಕ್ಕೊಳಗಾಗುತ್ತಾರೆ, ಎಷ್ಟೊಂದು ಪ್ರಮಾಣದಲ್ಲಿ ಹೊಗೆಯನ್ನು ಸೇವಿಸುತ್ತಾರೆ ಎಂಬ ಬಗ್ಗೆ ಮಾತನಾಡಿದ್ದರು.

ಸದಾ ಅವಸರದಲ್ಲಿ ಕೆಲಸ ಮಾಡುವ ಗಿಗ್‌ ಕಾರ್ಮಿಕರು ತಮ್ಮ ಜೀವನವನ್ನೇ ಹೇಗೆ ಪಣಕ್ಕಿಡುತ್ತಾರೆ ಎಂಬ ವಿಷಯವನ್ನು ಲಾಡ್‌ ಅವರು ಸಾಕಷ್ಟು ವೇದಿಕೆಗಳಲ್ಲಿ ಹಂಚಿಕೊಂಡಿದ್ದರು. ವಿವಿಧ ಉತ್ಪನ್ನಗಳನ್ನು ಡೆಲಿವರಿ ಮಾಡುವ ಗಿಗ್‌ ಕಾರ್ಮಿಕರು 10 ನಿಮಿಷಗಳಲ್ಲಿ ಆರ್ಡರ್‌ ಡೆಲಿವರಿ ಮಾಡಬೇಕು, ಅವಸರದಲ್ಲಿ ರಸ್ತೆಯಲ್ಲಿ ಜೀವದ ಹಂಗು ತೊರೆದು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ ಎಂಬ ಅಂಶವನ್ನು ಸಚಿವರು ಹೇಳಿದ್ದರು.

“10 ನಿಮಿಷದ ಡೆಲಿವರಿ” ಮಾದರಿಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗಿಗ್‌ ಕಾರ್ಮಿಕರು ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದರು. ದೇಶವ್ಯಾಪಿ ಮುಷ್ಕರದ ಪರಿಣಾಮ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಗಿಗ್‌ ಪ್ಲಾಟ್‌ಫಾರ್ಮ್‌ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿತ್ತು.

ಕಾರ್ಮಿಕರ ಪಾಲಿನ ಆಪ್ತ ರಕ್ಷಕ :
ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಅಸಂಘಟಿತ ಕಾರ್ಮಿಕರ ಜೀವನ ಭದ್ರತೆ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದ್ದಾರೆ. ಗಿಗ್‌ ಕಾರ್ಮಿಕರಿಗಂತೂ ಅವರು ತಮ್ಮ ಇಲಾಖೆಗಳ ಮೂಲಕ ಅಪಘಾತ ವಿಮೆ ಹಾಗೂ ಜೀವ ವಿಮಾ ಯೋಜನೆಯನ್ನು ಜಾರಿ ಮಾಡಿ ಇಡೀ ದೇಶದಲ್ಲೇ ಮಾದರಿಯಾಗಿದ್ದಾರೆ.

ಲಾಡ್‌ ಅವರ ದೂರದೃಷ್ಟಿಯಿಂದಾಗಿ ಸಾಕಷ್ಟು ಗಿಗ್‌ ಕಾರ್ಮಿಕರು ಲಾಭ ಪಡೆದುಕೊಂಡಿದ್ದಾರೆ. ಅವರ ಕುಟುಂಬದಲ್ಲಿ ನಗೆ ಮೂಡಿದೆ. ಇದೀಗ ಈ ಹತ್ತು ನಿಮಿಷದ ಡೆಲಿವರಿಗೆ ಬ್ರೇಕ್‌ ಬಿದ್ದಿರುವುದರಿಂದಲೂ ಅಸಂಖ್ಯಾತ ಗಿಗ್‌ ಕಾರ್ಮಿಕರಿಗೆ ನೆಮ್ಮದಿ ಸಿಕ್ಕಿದೆ.

ಕಾರ್ಮಿಕರಿಗೆ ಏನೇ ಒಳಿತನ್ನು ಮಾಡುವುದಿದ್ದರೂ ಸಚಿವ ಲಾಡ್‌ ಅವರು ಯೋಚನೆ ಮಾಡಿಯೇ ಇರುತ್ತಾರೆ. ರಾಜ್ಯದ ಕಾರ್ಮಿಕರಿಗಾಗಿ ಅವರು ತಮ್ಮ ಇಲಾಖೆಯ ಮೂಲಕ ಹಲವಾರು ಯೋಜನೆ ಮತ್ತು ಸೌಲಭ್ಯಗಳನ್ನು ಜಾರಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕರ ವಿಮಾ ಯೋಜನೆ ಕರ್ನಾಟಕದಲ್ಲಿ ಜಾರಿಯಾಗುವುದರಲ್ಲಿ ಸಂತೋಷ್‌ ಲಾಡ್‌ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಇಂತಹ ವಿಮಾ ಯೋಜನೆ ಎಂಬುದು ತಿಳಿದಿರುವ ವಿಷಯ. ಸಚಿವ ಲಾಡ್‌ ಅವರ ದೂರಗಾಮಿ ಆಲೋಚನೆ ಹೇಗೆ ಪ್ರಯೋಜನಕ್ಕೆ ಬಂದಿದೆ ಎಂಬುದು ತಿಳಿದಿದೆ.

ಆನ್‌ಲೈನ್‌ ಡೆಲಿವರಿ ವೃತ್ತಿಯಲ್ಲಿ ಅರೆಕಾಲಿಕವಾಗಿ ಮತ್ತು ಪೂರ್ಣವಾಗಿ ತೊಡಗಿಸಿಕೊಂಡ ಎಷ್ಟೋ ಗಿಗ್‌ ಕಾರ್ಮಿಕರಿಗೆ ಸರಿಯಾದ ಜೀವವಿಮೆ ಮತ್ತು ಅಪಘಾತ ವಿಮೆ ದೊರೆಯದೇ ಸಾಕಷ್ಟು ತೊಂದರೆಗೆ ಸಿಲುಕಿದ್ದರು. ಆದರೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಗಿಗ್‌ ಕಾರ್ಮಿಕರ ವಿಮಾ ಯೋಜನೆ ಅಂತಹ ಕಾರ್ಮಿಕರಿಗೆ ಸಂಜೀವಿನಿಯಾಗಿ ಲಾಭ ಮಾಡಿಕೊಟ್ಟಿದೆ. ಇಂತಹ ಮಹತ್ವದ ಯೋಜನೆಯ ಎಲ್ಲ ಯಶಸ್ಸು ಸಚಿವ ಸಂತೋಷ್‌ ಲಾಡ್‌ ಅವರಿಗೆ ಸಲ್ಲಬೇಕಿದೆ.

Share.
Leave A Reply