ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಬಲು ಜೋರಾಗಿದೆ. ಎಲ್ಲರ ಮನೆಯಲ್ಲೂ ಸಡಗರ ಮನೆಮಾಡಿದ್ದು ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಕಳೆದ ವಾರಕ್ಕಿಂತ ಈ ವಾರ ಅಗತ್ಯ ವಸ್ತುಗಳ ದರ ಡಬ್ಬಲ್ ಆಗಿದೆ. ಆದ್ರೂ ತರಕಾರಿ, ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಳ ಮಧ್ಯೆಯೂ ಖರೀದಿಗೆ ಜನರು ಮುಗಿಬಿದ್ದು ಖರೀದಿಸಿ ಹಬ್ಬವನ್ನ ಆಚರಿಸಲಾಗುತ್ತಿದೆ..
ವರಮಹಾಲಕ್ಷ್ಮಿ ಪೂಜೆ ಅಥವಾ ವ್ರತವನ್ನು ಮಹಿಳೆಯರು ಆಚರಿಸುವ ಹಬ್ಬ. ಈ ಶುಭ ದಿನದಂದು ಮನೆಯ ಮಹಿಳೆಯರು ಸಂಪ್ರದಾಯ ಉಡುಗೆ ತೊಟ್ಟು, ಹಬ್ಬದ ಊಟ ತಯಾರಿಸಿ, ಮನೆಯನ್ನ ಅಲಂಕಾರ ಮಾಡಿ, ರಂಗೋಲಿ ಹಾಕಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಬಹಳ ವಿಶೇಷವಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಹೊಸ ಉಡುಗೆ ತೊಟ್ಟು, ವಿವಿಧ ಬಗೆಯ ಅಡುಗೆ ಸವಿದು, ಸುಮಂಗಲೆಯರಿಗೆ ಅರಿಶಿಣ ಕುಂಕುಮ, ಬಾಗಿನ ಕೊಟ್ಟು ಹಬ್ಬವನ್ನ ಶಾಸ್ತ್ರೋಕ್ತವಾಗಿ ಆಚರಿಸಲಾಗುತ್ತದೆ.
