ಬಿಗ್ ಬಾಸ್ ಕನ್ನಡ 11 ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ಹಾವಳಿ ಜೋರಾಗಿದೆ. ಹೀಗಿರುವಾಗ ದೊಡ್ಮನೆಯಲ್ಲಿ ರಜತ್ ಕಿಶನ್ಗೆ ಕಳಪೆ ಪಟ್ಟ ಸಿಕ್ಕಿದೆ. ಅದಕ್ಕೆ ಗರಂ ಆಗಿರುವ ರಜತ್, ನಾನು ಇರೋದೆ ಹೀಗೆ.. ಇನ್ಮುಂದೆ ಅಸಲಿ ಶುರು ಅಂತ ಸವಾಲೆಸೆದಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ. ರಜತ್ ಆಟಕ್ಕೆ… ಆಡುವ ಮಾತಿಗೆ ಇಡೀ ಮನೆ ಅವರ ವಿರುದ್ಧ ತಿರುಗಿ ಬಿದ್ದಿದೆ. ಈ ವಾರದ ಉತ್ತಮ ಸ್ಪರ್ಧಿ ಮತ್ತು ಕಳಪೆ ಪ್ರದರ್ಶನ ಆಡಿದವರಿಗೆ ಹೆಸರನ್ನು ಸೂಚಿಸಲು ಎಂದಿನಂತೆ ಬಿಗ್ ಬಾಸ್ ಸೂಚಿಸಿದರು. ಅದರಂತೆ ಇಡೀ ಮನೆ ಮಂದಿ ರಜತ್ ಹೆಸರನ್ನು ಹೇಳಿದ್ದಾರೆ.
ಈಗ ಇದೇ ರಜತ್ ವಿರುದ್ಧ ಇಡೀ ಮನೆ ಮಂದಿ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಈ ವಾರದ ಕಳಪೆ ಯಾರು ಎಂಬ ಪ್ರಶ್ನೆಗೆ ಮನೆ ಮಂದಿ ಉತ್ತರ ನೀಡಿದ್ದಾರೆ. ಈ ಮೂಲಕ ಎಲ್ಲರ ಉತ್ತರ ಕೇಳಿ ಒಂದೇ ವಾರದಲ್ಲಿ ರಜತ್ ಕಿಶನ್ ಒಂಟಿಯಾಗಿದ್ದಾರೆ.
ಗೋಲ್ಡ್ ಸುರೇಶ್ಗೆ ಅವಾಚ್ಯ ಪದಗಳಿಂದ ನಿಂದಿಸಿದ ಕಾರಣ ಕೊಟ್ಟು ರಜತ್ಗೆ ಕಳಪೆ ಪಟ್ಟ ನೀಡಿದ್ದಾರೆ. ಇದು ರಜತ್ ಕೋಪಕ್ಕೆ ಕಾರಣವಾಗಿದೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ. ಬಿಗ್ ಬಾಸ್ ಆಟ ಗೆಲ್ಲೋದು. ಹುಟ್ಟಿದಾಗನಿಂದಲೂ ಹೀಗೆ ಇದ್ದೀನಿ. ಹಾಗೆ ಇದೀನಿ.. ಇನ್ಮುಂದೆ ಕೂಡ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ಇನ್ಮುಂದೆ ನಿಜವಾದ ಆಟ ಶುರು ಎಂದು ರಜತ್ ಮನೆ ಮಂದಿಗೆ ಕೌಂಟರ್ ಕೊಟ್ಟಿದ್ದಾರೆ.