ವಸತಿ ಇಲಾಖೆಯಿಂದ ಸರ್ಕಾರಿ ಮನೆಗಳನ್ನ ಪಡೆಯಲು ಲಂಚ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ಬಿ.ಆರ್‌. ಪಾಟೀಲ್ ಹೇಳಿಕೆ ನೀಡಿರೋ ಆಡಿಯೋ ಸದ್ಯ ರಾಜ್ಯ ರಾಜಕೀಯದಲ್ಲಿ ಬಿರಿಗಾಳಿ ಎಬ್ಬಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಾ. ಜಿ ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಇಲಾಖೆಯಿಂದ ಸರ್ಕಾರಿ ಮನೆಗಳನ್ನ ಪಡೆಯಲು ಲಂಚ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ಬಿ.ಆರ್‌. ಪಾಟೀಲ್ ಆರೋಪ ವಿಚಾರ ಮಾಧ್ಯಮಗಳಲ್ಲಿ ನೋಡಿದೇನೆ ಎಂದರು. ಪಾಟೀಲರು ಯಾವ ಅರ್ಥದಲ್ಲಿ ಹಾಗೇ ಹೇಳಿದಾರೆ ಅಂಥಾ ಗೊತ್ತಿಲ್ಲ.. ಅವರು ನೇರವಾಗಿ ಹೇಳಿಲ್ಲ.. ಇಲಾಖೆ‌ ಸಚಿವರು ಜಮೀರ್ ಇದ್ದಾರೆ.. ಯಾರು‌ ಲಂಚ ಕೇಳ್ತಿದಾರೆ ಅಂತಾ ದೂರು‌ ಕೊಡಲಿ, ಕ್ರಮ ತಗೋತಾರೆ ಎಂದು ಹೇಳಿದರು.

ಅಲ್ಪಸಂಖ್ಯಾತರಿಗೆ ವಸತಿ ಯೋಜನೆಗಳಲ್ಲಿ ಮೀಸಲಾತಿಗೆ ಸಂಪುಟ ಸಭೆಯಲ್ಲಿ ತೀರ್ಮಾನ ವಿಚಾರ ಯಾರಿಗೆ ಮನೆ ಇಲ್ಲ ಅವರಿಗೆ ಕೊಡಬೇಕಾಗುತ್ತದೆ. ಇಲ್ಲಿ 15%, 20% ಪ್ರಶ್ನೆ ಅಲ್ಲ, ಯಾರಿಗೆ ಮನೆ ಇಲ್ಲ ಅವರಿಗೆ ಕೊಡಬೇಕಾಗುತ್ತದೆ. ಆ ಸಮುದಾಯದವರಿಗೆ ಮನೆ ಇಲ್ಲ ಅಂದಾಗ ಕೊಡಬೇಕಾಗುತ್ತದೆ. ಈ ವರ್ಷ ಕೊಟ್ರೆ ಮುಂದೆ ಅವರ ಪರ್ಸಂಟೇಜ್ ಕಡಿಮೆ ಆಗುತ್ತದೆ.. ಧರ್ಮಾಧಾರಿತ ಪ್ರಶ್ನೆ ಬರಲ್ಲ.. ಈವರೆಗೆ ಪರಿಶಿಷ್ಟರಿಗೆ ಕಡಿಮೆ ಇತ್ತು. ಅವರಿಗೆ ಕೊಟ್ವಿದೆ. ಈಗ ಅವರ ಸಂಖ್ಯೆ ‌ಕಡಿಮೆ ಆಗಿದೆ. ಮುಂದೆ ಅದೇ ರೀತಿ ಇವರದ್ದು ಸಂಖ್ಯೆ ಕಡಿಮೆ ಆಗಲಿದೆ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್ ನಿಂದ ಮಗು ಅಪಹರಣ

ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ನಿಂದ ಮಗು ಅಪಹರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್‌, ಈಗಾಗಲೇ ಕಠಿಣ ಕಾನೂನು ತಂದಿದ್ದೇವೆ. ಇವತ್ತು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾಡ್ತೇನೆ.. ಕಠಿಣ ಹೃದಯಿಗಳು.. ಮಾನವೀಯತೆ ಇಲ್ಲದವರು ಮಗುವನ್ನ ಅಪಹರಣ ಮಾಡಿದಾರೆ ಮಾತಾಡಿ‌ ಕ್ರಮ ತಗೋತೇವೆ ಎಂದರು.

Share.
Leave A Reply