
ಪ್ರತಿ ವಾರ ಬಿಗ್ ಬಾಸ್(Bigg boss) ಮನೆಯಲ್ಲಿ ನಡೆಯುವ ಭಯಾನಕ ಟಾಸ್ಕ್ ಎಂದರೆ, ಅದು ನಾಮಿನೇಷನ್(Nomination) ಎಂಬ ಬೆಂಕಿ ಟಾಸ್ಕ್. ಹೌದು, ಪ್ರತಿವಾರ ಮಿಸ್ಸಿಲ್ಲದೇ ಇದನ್ನು ಸ್ಪರ್ಧಿಗಳು ಮಾಡಲೇಬೇಕು. ಹಾಗೇ ಈ ವಾರ ಕೂಡ ಬಹಳ ವಿಭಿನ್ನವಾಗಿ ಬಿಗ್ ಬಾಸ್ ಸೀಸನ್ 10ರ ಕೆಲ ಸ್ಪರ್ಧಿಗಳನ್ನು ದೊಡ್ಮನೆಯೊಳಗೆ ಕರೆಸಿ ಅವರ ನೇತೃತ್ವದಲ್ಲಿ ನಾಮಿನೇಷನ್ (Nomination) ಪ್ರಕ್ರಿಯೆಯನ್ನು ಮಾಡಲಾಗಿದೆ. ಇನ್ನು ಯಾರೆಲ್ಲಾ ಈ ವಾರ ನಾಮಿನೇಟ್ ಆಗಿದ್ದಾರೆ? ಅದನ್ನ ಹೇಳ್ತೀವಿ… ಅದಕ್ಕೂ ಮೊದಲು ಬಾಸ್ ಟಿವಿ ಕನ್ನಡ ಚಾನೆಲ್‌ನ್ನು ಸಬ್‌ಸ್ಕ್ರೈಬ್ ಮಾಡಿ.


ಬಿಗ್ ಬಾಸ್ ಸೀಸನ್ 10(Bigg boss season 10)ರಲ್ಲಿ ಸಂತು-ಪಂತು ಅಂತಲೇ ಫೇಮಸ್ ಆಗಿದ್ದ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಎಂಟ್ತರಿ ಕೊ ಟ್ಟಿದ್ದರು. ವರ್ತೂರು ಸಂತೋಷ್ ಅವರು ಮನೆಯೊಳಗೆ ಇರುವ ಜೈಲಿಗೆ ಕೆಲ ಸ್ಪರ್ಧಿಗಳನ್ನು ಕರೆದುಕೊಂಡು ಹೋಗಿ ನಾಮಿನೇಷನ್ ಮಾಡಿಸಿದರು. ನಮ್ರತಾ ಗೌಡ ಅವರು ಮುಖಕ್ಕೆ ಕ್ರೀಮ್ ಬಳಿಸುವ ಮೂಲಕ ಕೆಲವರ ನಾಮಿನೇಷನ್ ಮಾಡಿಸಿದರು. ತನಿಷಾ ಕುಪ್ಪಂಡ (Thanisha Kuppanda), ಡ್ರೋನ್ ಪ್ರತಾಪ್ (Drone Prathap) ಕೂಡ ನಾಮಿನೇಷನ್ ಪ್ರಕ್ರಿಯೆ ನಡೆಸಲು ಬಿಗ್ ಬಾಸ್ ಮನೆಗೆ ಬಂದಿದ್ದರು.


ಬಿಗ್ ಬಾಸ್’ ಕನ್ನಡ ಸೀಸನ್ 10ರ (Bigg boss kannada season 10) ವಿನ್ನರ್ ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಮನೆಯೊಳಗೆ ಸಖತ್ ಸರ್ಪ್ರೈಸ್ ಎಂಟ್ರಿ ನೀಡಿದರು. ಕ್ಯಾಪ್ಟನ್ ಗೌತಮಿ ಜಾಧವ್ ಅವರ ಕೈಯಲ್ಲಿ ನೇರ ನಾಮಿನೇಷನ್ ಮಾಡಿಸಿದರು. ಇದರಲ್ಲಿ ಮಂಜು (Manju), ಮೋಕ್ಷಿತಾ, ಐಶ್ವರ್ಯಾ, ಸುರೇಶ್ ಮಾತ್ರ ನಾಮಿನೇಟ್ ಆಗದೇ ಉಳಿದುಕೊಂಡಿದ್ದರು. ಬಾಕಿ ನಾಲ್ವರಲ್ಲಿ ಮೋಕ್ಷಿತಾ ಅವರನ್ನು ಗೌತಮಿ ನೇರವಾಗಿ ನಾಮಿನೇಟ್ ಮಾಡಿದ್ರು. ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಸ್ವಾಭಿಮಾನದ ಹೆಸರಿನಲ್ಲಿ ಕೈಚೆಲ್ಲಿದ್ದು ಮತ್ತು ವೀಕ್ಷಕರ ವೋಟ್‌ಗಳಿಗೆ ಅವಮಾನ ಮಾಡಿದ್ದು ಸರಿಯಲ್ಲ ಎಂದು ಮೋಕ್ಷಿತಾ ಬಗ್ಗೆ ಖಡಕ್ ಕಾರಣಗಳನ್ನು ನೀಡಿ ಅವರ ತಲೆ ಮೇಲೆ ಕಪ್ಪು ನೀರು ಹಾಕಿ, ನಾಮಿನೇಟ್ ಮಾಡಿದ್ರು.
ಮೋಕ್ಷಿತಾ ಅವರು ನೇರವಾಗಿ ನಾಮಿನೇಟ್ ಆದರೆ, ಮನೆಯ ಸದಸ್ಯರಿಂದ ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಭವ್ಯಾ ಕೂಡ ಇದ್ದಾರೆ. ಒಟ್ಟು ಈ ಎಂಟು ಮಂದಿಯಲ್ಲಿ ಭವ್ಯಾ ಮತ್ತು ಮೋಕ್ಷಿತಾ ಅವರೇ ಅತೀ ಹೆಚ್ಚು ಬಾರಿ ನಾಮಿನೇಟ್ ಆಗಿರುವುದು. ಉಳಿದಂತೆ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಶಿಶಿರ್ ಶಾಸ್ತ್ರಿ, ಧನರಾಜ್ ಆಚಾರ್, ರಜತ್ ಕಿಶನ್, ಹನುಮಂತ ಲಮಾಣಿ ಇದ್ದಾರೆ.
ಅದೇನೆ ಆಗಲಿ… ಸದ್ಯ ಬಿಗ್‌ಬಾಸ್ ಆಟದಲ್ಲಿ ಎಂಟು ಮಂದಿ ನಾಮೀನಟ್ ಆಗಿದ್ದು, ಈ ವಾರ ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಜೊತೆಗೆ ಕಳೆದ ವಾರ ಬೇರೆ ಯಾರೂ ಎಲಿಮಿನೇಟ್ ಆಗಿಲ್ಲ. ಹಾಗಾಗಿ, ಈ ವಾರ ಡಬಲ್ ಎಲಿಮಿನೇಷನ್ ಮಾಡಿದರೂ ಅಚ್ಚರಿ ಇಲ್ಲ! ಇದಕ್ಕೆ ನೀವೇನ್ ಹೇಳ್ತೀರಿ ಅಂತ ಕಮೆಂಟ್ ಮಾಡಿ ಹೇಳಿ…