ಈವರೆಗೆ ಕಂಪನಿಗಳಲ್ಲಿ ಕೇವಲ ಮನುಷ್ಯರು ಮಾಡ್ತಾ ಇದ್ರು. ಆದ್ರೆ ಹೈದರಾಬಾದ್‌ನ ಸ್ಟಾರ್ಟ್‌ಅಪ್ ಕಂಪನಿ ಯೊಂದ್ರಲ್ಲಿ ಕೆಲಸಕ್ಕಾಗಿ ನಾಯಿಯನ್ನ ಹೈರ್ ಮಾಡಲಾಗಿದೆ. ಈ ನಾಯಿಯ ಅಫೀಷಿಯಲ್ ಡೆಸಿಗ್ನೇಷನ್ ಏನಂದ್ರೆ chief officer!. ಅಂದ್ರೆ ಖುಷಿಯ ಮುಖ್ಯ ಅಧಿಕಾರಿ. ಹೈದರಾಬಾದ್‌ನ ಹಾರ್ವೆಸ್ಟಿಂಗ್ ರೋಬೋಟಿಕ್ಸ್ ಕಂಪನಿಯು ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯನ್ನ ತನ್ನ ಸಿಬ್ಬಂದಿಯಾಗಿ ನೇಮಕ ಮಾಡಿಕೊಂಡಿದೆ.
ಅಂದ್ಹಾಗೆ ಈ ನಾಯಿ ಹೆಸರು ಡೆನ್ವರ್. ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಎಂಬುವವರು ಡೆನ್ವರ್ ಫೋಟೋ ಗಳನ್ನ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಹೊಸ ಉದ್ಯೋಗಿ, ಚೀಫ್ ಹ್ಯಾಪಿನೆಸ್ ಆಫಿಸರ್ ಡೆನ್ವರ್. ಇವ್ನು ಕೋಡಿಂಗ್ ಮಾಡಲ್ಲ, ಕೇರ್ ಕೂಡ ಮಾಡಲ್ಲ.
Also Read: ಪ್ರಧಾನಿ Narendra Modi ಭೇಟಿಯಾದ ಸೂರ್ಯವಂಶಿ!
ಆದ್ರೆ, ಆಫಿಸ್‌ನಲ್ಲಿ ನಮ್ ಜೊತೆಗೆ ಆರಾಮಾಗಿರ್ತಾನೆ. ಎಲ್ಲರ ಹೃದಯ ಕದಿಯುತ್ತಾನೆ ಹಾಗೂ ಎಲ್ಲರೂ ಎನರ್ಜಿ ಯಲ್ಲಿರುವಂತೆ ಮಾಡ್ತಾನೆ ಅಂತಾ ಬರೆದುಕೊಂಡಿದ್ದಾರೆ. ಈ ಕಂಪನಿಯು ಪ್ರಾಣಿ ಪ್ರಿಯವಾಗಿದ್ದು, ಇದು ಕಂಪನಿ ಮಾಡಿದ ಬೆಸ್ಟ್ ನಿರ್ಧಾರ ಎಂದಿದ್ದಾರೆ. ಇದು ಸ್ಟಾರ್ಟ್ ಅಪ್ ಕಂಪನಿಯ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಇದರಿಂದ ಎಲ್ಲಾ ರೀತಿಯ ಬೆಳವಣಿಗೆ ಸಾಧ್ಯ ಎಂದಿದ್ದಾರೆ.
ಇನ್ನು, ಸೋಷಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಈ ನಾಯಿ ವೈರಲ್ ಆಗ್ತಾ ಇದ್ದು, ಪ್ರಾಣಿಪ್ರಿಯರಿಗೆ ಈ ನಡೆ ಬಹಳ ಇಷ್ಟವಾಗಿದೆ.
