IPLನ ಆಂಗ್ರಿ ಯಂಗ್‌ಮ್ಯಾನ್ ವೈಭವ್ ಸೂರ್ಯವಂಶಿ ನಡವಳಿಕೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಂಗಳವಾರ ನಡೆದ ರಾಜಸ್ಥಾನ ಮತ್ತು ಚೆನ್ನೈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯ ಆಕರ್ಷಕ ಅರ್ಧ ಶತಕ ಮತ್ತು ನಾಯಕ ಸಂಜು ಸ್ಯಾಮ್ಸನ್‌ರ 98 ರನ್‌ಗಳ ಜೊತೆಯಾಟದಿಂದ RR ಜಯದ ಹಾದಿ ಹಿಡಿಯಿತು.
ಟಾಸ್ ಸೋತ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿ ಕೇವಲ 188 ರನ್ ಕಲೆಹಾಕಲಷ್ಟೆ ಶಕ್ತವಾಯಿತು. ಈ ಗುರಿಯನ್ನ ಬೆನ್ನಟ್ಟಿದ ರಾಜಸ್ಥಾನ 17.1 ಓವರ್‌ನಲ್ಲಿ ಮ್ಯಾಚ್ ಮುಗಿಸಿತು. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಸೂರ್ಯವಂಶಿ ಕೇವಲ 33 ಎಸೆತಗಳಲ್ಲಿ 57 ರನ್ ಗಳಿಸಿ ಎಲ್ಲರ ಗಮನ ಸೆಳೆದರು.
Also Read: ಕನ್ನಡಿಗರನ್ನ ಕೆಣಕಿದ ಕಿರಿಕ್ ಲೇಡಿ, ಬ್ಯಾಂಕ್‌ನಿಂದ KickOut!
ಪಂದ್ಯದ ಬಳಿಕ ಹ್ಯಾಂಡ್‌ಶೇಕ್ ಸಮಯದಲ್ಲಿ ಸಿಎಸ್‌ಕೆ ನಾಯಕ Dhoni ಕಾಲಿಗೆ ಬಿದ್ದು ಎಲ್ಲರ ಗಮನ ಸೆಳೆದರು. ಈ ವೇಳೆ, ವೈಭವ್‌ಗೆ, ಧೋನಿ ನಗುತ್ತಾ ಬೆನ್ನು ತಟ್ಟಿ ಆಶೀರ್ವದಿಸಿದರು. ವೈಭವ್ ಮತ್ತು Dhoni ಯ ಈ ದೃಶ್ಯ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ವಿಡಿಯೋ ವೈರಲ್ ಆಗುತ್ತಿದ್ದು, ಇದಪ್ಪಾ ವಿನಯತೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ..
