ಏಷ್ಯಾಕಪ್ ಟೂರ್ನಿ ಟೂರ್ನಿಯ ಎರಡನೇ ದಿನ ಭಾರತ ಹಾಗೂ ಯುಎಇ ಮುಖಾಮಖಿಯಾಗಿದೆ. ಟೀಂ ಇಂಡಿಯಾ ಎದುರು ಯುಎಇ ದುರ್ಬಲ ತಂಡ. ಆದರೂ ದಿಟ್ಟ ಹೋರಾಟ ನೀಡುವ ವಿಶ್ವಾಸದೊಂದಿಗೆ ಯುಎಇ ತಂಡ ಕಣಕ್ಕಿಳಿದಿತ್ತು. ಟೀಂ ಇಂಡಿಯಾ ದಾಳಿಗೆ ಕಂಗೆಟ್ಟ ಯುಎಇ ಕೇವಲ 57 ರನ್‌ಗೆ ಆಲೌಟ್ ಆಗಿದೆ.
ಏಷ್ಯಾಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿತ್ತು. ಯುಎಇ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಸೂರ್ಯಕುಮಾರ್ ಯಾದವ್ ನಿರ್ಧಾರ ಸರಿಯಾಗಿತ್ತು. ನಾಯಕ ಮೊಹಮ್ಮದ್ ವಾಸೀಮ್ ಹಾಗೂ ಅಲಿಶನ್ ಶರಾಫು ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಜೋಡಿ ಉತ್ತಮ ಆರಂಭ ನೀಡಿತ್ತು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಮೊದಲ ವಿಕೆಟ್‌ಗೆ ಈ ಜೋಡಿ 26 ರನ್ ಜೊತೆಯಾಟ ನೀಡಿತ್ತು. 17 ಎಸೆತದಲ್ಲಿ ಅಲಿಶನ್ 22 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ವಿಕೆಟ್ ಪತನ ಆರಂಭಗೊಂಡಿತು. ವಾಸೀಮ್ 19 ರನ್ ಸಿಡಿಸಿ ನಿರ್ಗಮಿಸಿದರು.
ಆರಂಭಿಕ ಇಬ್ಬರು ಮಾತ್ರ ಎರಂಡಂಕಿ ದಾಟಿದ್ದಾರೆ. ಇನ್ನುಳಿದ ಎಲ್ಲಾ ಬ್ಯಾಟರ್ 1,2,3ಕ್ಕೆ ತೃಪ್ತಿ ಪಟ್ಟುಕೊಂಡರು. ರನ್ ಗಣಿಸಲು, ವಿಕೆಟ್ ಉಳಿಸಲು ಕೊಳ್ಳಲು ಯುಎಐ ಪರದಾಡಿತು. ಇದರ ಪರಿಣಾಮ ಯುಎಐ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಯಿತು.
ಭಾರತದ ಪರ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದರು. ಇನ್ನು ಶಿವಂ ದುಬೆ 3, ವರುಣ್ ಚಕ್ರವರ್ತಿ 1, ಅಕ್ಸರ್ ಪಟೇಲ್ 1, ಜಸ್ಪ್ರೀತ್ ಬುಮ್ರಾ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಕಬಳಿಸಿದರು.
Read Also : GST ಪರಿಷ್ಕರಣೆ ಬೆನ್ನಲ್ಲೇ RCB ಟಿಕೆಟ್ ದರ ಭಾರೀ ಏರಿಕೆ?
