2025ರ ಏಷ್ಯಾಕಪ್‌ನಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.. ವಿಮರ್ಶೆ, ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ.. ಪ್ರತಿಯೊಬ್ಬ ಆಟಗಾರನೂ ಮಿಂಚಿ ಭೋರ್ಗರೆದ ಪರಿಣಾಮ ಭಾರತ ತಂಡ ಸತತ 9ನೇ ಬಾರಿಗೆ ಏಷ್ಯಾಕಪ್ ಪಟ್ಟವನ್ನು ಮುಡಿಗೇರಿಸಿಕೊಂಡು.. ಏಷ್ಯಾ ಖಂಡದಲ್ಲೇ ಸರ್ವಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ.. ಚಾಂಪಿಯನ್ ಆಗುವುದರ ಜೊತೆಗೆ ಭಾರತ ತಂಡದ ಹಲವು ಆಟಗಾರರಿಗೆ ಪ್ರಶಸ್ತಿಗಳು ಹರಿದುಬಂದಿವೆ.. ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ಸಾರ್ಥಕತೆ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ.

ಏಷ್ಯಾಕಪ್ ಇಡೀ ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ಅಭಿಷೇಕ್ ಶರ್ಮಾಗೆ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಜೊತೆಗೆ 13.30 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ.. ಜೊತೆಗೆ 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ಕೂಡ ಬಹುಮಾನವಾಗಿ ಸಿಕ್ಕಿದೆ.. ಇನ್ನೂ ಟೂರ್ನಿಯ ಮೋಸ್ಟ್ ವಾಲ್ಯುಎಬೆಲ್ ಪ್ರೇಯರ್ ಪ್ರಶಸ್ತಿ ಸ್ಪಿನ್ ಮಾಂತ್ರಿಕ ಕುಲ್ದೀಪ್ ಯಾದವ್‌ಗೆ ದಕ್ಕಿದೆ.. ಇತ್ತ ಫೈನಲ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಶಿವಂ ದುಬೆಗೆ ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿದೆ.. ಫೈನಲ್ ಪಂದ್ಯದಲ್ಲಿ ನೆಲಕಚ್ಚಿ ನಿಂತು ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ತಿಲಕ್ ವರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.. ಅಲ್ಲದೇ ಸೂಪರ್ ಸಿಕ್ಸ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಬಂದಿದೆ.
ಇನ್ನೂ ಚಾಂಪಿಯನ್ ಆದ ಭಾರತ ತಂಡಕ್ಕೆ 2.6 ಕೋಟಿ ರೂ. ಪ್ರಶಸ್ತಿ ಮೊತ್ತ ಸಿಕ್ಕಿದೆ.. ಆದ್ರೆ ಬಿಸಿಸಿಐ ಭಾರತ ತಂಡಕ್ಕೆ ಬಹುಮಾನ ಮೊತ್ತವಾಗಿ ಬರೋಬ್ಬರಿ 21 ಕೋಟಿ ರೂ. ಬಹುಮಾನ ಮೊತ್ತವನ್ನು ಘೋಷಿಸಿದೆ.. ಇದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ಈ ಮೊತ್ತವನ್ನು ಭಾರತ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗದವರು ಹಂಚಿಕೊಳ್ಳಲಿದ್ದಾರೆ. ಆದ್ರೆ ಭಾರತ ತಂಡದ ನಾಯಕ ಸೂರ್ಯ ಮಾತ್ರ ಪ್ರತಿ ಪಂದ್ಯದ 4 ಲಕ್ಷ ರೂ. ಸಂಭಾವನೆಯನ್ನು ಭಾರತೀಯ ಸೇನೆ ಹಾಗೂ ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಹಂಚಿದ್ದಾರೆ.. ಈ ನಿರ್ಧಾರದಿಂದ ಸೂರ್ಯ ಕುಮಾರ್ ಯಾದವ್ ಎಲ್ಲರ ಹೃದಯ ಕದ್ದಿದ್ದಾರೆ.. ಅವರ ಈ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರ್ತಿವೆ.. ಹೀಗೆ ಪ್ರಸ್ತುತ ಏಷ್ಯಾಕಪ್‌ನ್ನ ಭರ್ಜರಿಯಾಗಿ ಗೆಲ್ಲುವ ಮೂಲಕ ಭಾರತ ತಂಡ ಹೊಸ ಮೈಲಿಗಲ್ಲು ಸೃಷ್ಟಿಸಿದೆ..
Read Also : ತಾಜಾ ಸುದ್ದಿ
ಸರ್ಕಾರಿ ಕೆಲಸ ಮಾಡಲು ಬಯಸುವವರಿಗೆ ಸುವರ್ಣಾವಕಾಶ : 7565 ಕಾನ್‌ಸ್ಟೇಬಲ್ ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭ
