
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹಾಗೂ ವಿನಯ್ ರಾಜ್‌ಕುಮಾರ್ ಡೇಟ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಾ ಇತ್ತು. ಈ ವಿಷ್ಯದ ಕುರಿತು ಇಬ್ಬರು ಡಿಫರೆಂಟ್ ಆಗಿ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಈ ಥರ ವಿಷ್ಯಗಳು ಮುನ್ನಲೆಗೆ ಬಂದಾಗ ಸೆಲೆಬ್ರಿಟಿಗಳು ಲೈವ್ ಬಂದು ಅಥವಾ ಪೋಸ್ಟ್ ಹಾಕುವ ಮೂಲಕ ಅಥವಾ ಮೀಡಿಯಾಗಳ ಮುಂದೆ ಹೇಳಿಕೆ ಕೊಡೋ ಮೂಲಕ ವಿಷಯದ ಕುರಿತಾಗಿ ಸ್ಪಷ್ಟನೆ ಕೊಡ್ತಾರೆ. ಆದ್ರೆ ನಟಿ ರಮ್ಯಾ ಸೋಷಿಯಲ್ ಮೀಡಿಯಾ ಟ್ರೆಂಡ್‌ಅನ್ನ ಫಾಲೋ ಮಾಡಿದ್ದಾರೆ. ಒಂದು ಕ್ಯೂಟ್ ಆದ ರೀಲ್ ಮೂಲಕ ವಿನಯ್ ರಾಜ್‌ಕುಮಾರ್ ಹಾಗೂ ಅವರ ನಡುವಿನ ಸಂಬಂಧ ಏನು ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಜುವೆಲ್ರಿ ಶಾಪ್ ಪ್ರಮೋಷನ್ ಥರ ಅನ್ಸಿದ್ರೂ ವಿಡಿಯೋ ಕೊನೆಯಲ್ಲಿ ಅವರಿಬ್ಬರ ರಿಲೇಷನ್‌ಶಿಪ್ ಕುರಿತು ಸ್ಪಷ್ಟನೆ ನೀಡುವ ವೀಡಿಯೋ ಇದಾಗಿದೆ. ರಮ್ಯಾ ಹಾಗೂ ವಿನಯ್ ಇಬ್ರೂ ಜುವೆಲ್ಲರಿ ಶಾಪ್‌ಗೆ ಡೈಮಂಡ್ ರಿಂಗ್ ಖರೀದಿಸೋದಿಕ್ಕೆ ಹೋಗ್ತಾರೆ. ರಮ್ಯಾ ಕೈಗೆ ವಿನಯ್ ರಿಂಗ್‌ಅನ್ನ ಹಾಕ್ತಾರೆ. ಬಳಿಕ ಆ ರಿಂಗ್ ಇಬ್ರಿಗೂ ಇಷ್ಟ ಆಗುತ್ತೆ ಹೀಗಾಗಿ ಪ್ಯಾಕ್ ಮಾಡೋದಿಕ್ಕೆ ಹೇಳ್ತಾರೆ. ಆಗ ಅಂಗಡಿ ಮಾಲೀಕ ಇಬ್ಬರಿಗೂ ಕಂಗ್ರಾಜುಲೇಷನ್ಸ್ ಅಂತಾ ವಿಶ್ ಮಾಡ್ತಾರೆ. ಇದಿಕ್ಕೆ ರಿಯಾಕ್ಟ್ ಮಾಡಿದ ರಮ್ಯಾ ಎಲ್ಲರೂ ಹಾಗೆಯೇ ಅಂದುಕೊಂಡಿದ್ದಾರೆ. ಆದರೆ ನಾವು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದಾರೆ. ಹಾಗೆ ವಿನಯ್ ರಾಜ್‌ಕುಮಾರ್ ಅವ್ರು ಕೂಡ ರಿಂಗ್ ಸೈಜ್ ಕರೆಕ್ಟ್ ಇಲ್ಲ ಅಂದ್ರೆ ಅವಳನ್ನೇ ಕರ್ಕೊಂಡ್ ಬರ್ತೀನಿ ಅಂತಾ ಹೇಳೋ ಮೂಲಕ ಕಾಂಟ್ರವರ್ಸಿಗೆ ತೆರೆ ಎಳೆದಿದ್ದಾರೆ. ಇನ್ನು ಈ ವಿಡಿಯೋಗೆ ರಮ್ಯಾ ಅವ್ರು Bonds as pure as diamonds ಅಂತಾ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.
Read Also : ಕಾಂತಾರ ಚಾಪ್ಟರ್ 1 ಟಿಕೆಟ್ ಬುಕಿಂಗ್ ಶುರು : ದರ ಎಷ್ಟು ಗೊತ್ತಾ?