ವಿಶ್ವ ಶ್ರೇಷ್ಠ ಬೌಲರ್, ಭಾರತದ ಬೌಲಿಂಗ್ ಮಾಂತ್ರಿಕ, ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ನೆಲದಲ್ಲಿ ಹೊಸ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿ ನಿಂತಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (Test Match) ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬುಮ್ರಾ ಹೊಸ ದಾಖಲೆಗೆ ಮಾಡಲು ಸಜ್ಜಾಗಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 13 ವಿಕೆಟ್ ಪಡೆದರೆ ಇಂಗ್ಲಿಷರ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಏಕೈಕ ಆಟಗಾರನಾಗಲಿದ್ದಾರೆ. ವೇಗಿ ಇಶಾಂತ್ ಶರ್ಮಾಕೇವಲ 14 ಪಂದ್ಯದಲ್ಲಿ 48 ವಿಕೆಟ್ ಪಡೆದು, ಇಂಗ್ಲಿಷರ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬಾರತದ ಆಟಗಾರನಾಗಿದ್ದಾರೆ.
ಕಪಿಲ್ ದೇವ್ 13 ಪಂದ್ಯಗಳಲ್ಲಿ 43 ವಿಕೆಟ್ ಕಬಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಬುಮ್ರಾ 8 ಟೆಸ್ಟ್ ಪಂದ್ಯಗಳಲ್ಲಿ 37 ಟೆಸ್ಟ್ ವಿಕೆಟ್ ಪಡೆದಿದ್ದು ಅರ್ಧ ಶತಕದ ಗಡಿಗೆ ಇನ್ನ ಕೇವಲ 13 ವಿಕೆಟ್ ಮಾತ್ರ ಬಾಕಿ ಇದೆ. ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ 50 ಗಡಿ ದಾಟುತ್ತಾರ ಕಾದು ನೋಡಬೇಕಾಗಿದೆ.
