ಧರ್ಮಸ್ಥಳ ಪ್ರಕರಣ ಸಂಬಂಧ ದೂರುದಾರನನ್ನ ಬಂಧಿಸಿರುವುದು ನಿಜ. SIT ತನಿಖೆ ಮುಂದುವರೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೂರುದಾರನ ಬಂಧನ ಆಗಿರುವುದು ನಿಜ. ಉಳಿದ ಮಾಹಿತಿಯನ್ನು ಎಸ್‌ಐಟಿ ನೀಡಲಿದೆ. ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು ಎಸ್ ಐಟಿಯವರೇ ನಿರ್ಧರಿಸುತ್ತಾರೆ. ದೂರುದಾರೆ ಸುಜಾತ್ ಭಟ್ ರನ್ನು ತನಿಖೆ ಮಾಡುತ್ತಿದ್ದಾರೆ. ಎಸ್ ಐಟಿ ತನಿಖೆ ಇನ್ನೂ ಮುಂದುವರೆದಿದೆ. ತನಿಖಾ ಹಂತದಲ್ಲಿ ನಾನು ಯಾವುದನ್ನೂ ಬಹಿರಂಗಪಡಿಸಲು ಆಗಲ್ಲ ಎಂದರು.

ಸುಜಾತಾ ಭಟ್‌ ಪ್ರಕರಣ ಹಾಗೂ ಸಾಕ್ಷಿದೂರುದಾರನ ಹಿಂದೆ ಜಾಲ ಇದೆ ಎಂಬ ಆರೋಪದ ಬಗ್ಗೆ ನಾನೇನೂ ಹೇಳಲು ಹಾಗುವುದಿಲ್ಲ. ಎಲ್ಲವನ್ನೂ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿಯ ಅಂತಿಮ ವರದಿ ಬರುವವರೆಗೆ ನಾನು ಹೇಳಿಕೆ ನೀಡಲ್ಲ ಎಂದು ಪರಮೇಶ್ವರ್ ತಿಳಿಸಿದರು.

ಈ ನಡುವೆ ಪ್ರಕರಣ ಸಂಬಂಧ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನ ಬಂಧಿಸಿರುವ ಎಸ್ ಐಟಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಕೆಲವೇ ಕ್ಷಣಗಳಲ್ಲಿ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

Read Also : ಮಾಸ್ಕ್‌ ಮ್ಯಾನ್‌ ಅರೆಸ್ಟ್‌.. ಬಿಜೆಪಿಗೆ ಡಿಕೆಶಿ ಟಾಂಗ್‌ : ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ, ಡಿಕೆ ವಾರ್ನಿಂಗ್!‌

Share.
Leave A Reply