ಬೆಂಗಳೂರು: ವಿಡಿಯೋ ಕಾಲ್ ಟಾರ್ಚರ್ ಗೆ ವಿದ್ಯಾರ್ಥಿಯೋರ್ವ ಬಲಿಯಾಗಿರುವ ಘಟನೆ ನಡೆದಿದೆ.

ಕೇರಳ ಮೂಲದ ಜಗನ್ ಮೋಹನ್(25) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಎನ್ನಲಾಗಿದೆ. ಸಿಲಿಕಾನ್ ಸಿಟಿಯ ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ. ಜಗನ್ ಮೋಹನ್ ಎಂಬಿಎ ಓದುತ್ತಿದ್ದ ಎನ್ನಲಾಗಿದೆ. ಕಾಲೇಜು ಹತ್ತಿರ ರೂಮ್ ಬಾಡಿಗೆ ಪಡೆದು ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ರೂಮ್ ನಲ್ಲೇ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಮೃತ ವಿದ್ಯಾರ್ಥಿ ಮೂರು ನಂಬರ್ ಬರೆದಿದ್ದಾನೆ. ಪರಿಶೀಲನೆ ನಡೆಸಿದಾಗ ಫೇಕ್ ವಿಡಿಯೋ ಕಾಲ್‌ನಲ್ಲಿ 25 ಸಾವಿರ ರೂ. ಹಣ ಕಳೆದುಕೊಂಡಿರುವ ಕುರಿತು ಮಾಹಿತಿ ಸಿಕ್ಕಿದೆ. ದುಷ್ಕರ್ಮಿಗಳು ಬೆತ್ತಲೆ ಬೆತ್ತಲೆ ವಿಡಿಯೋ ಹಾಗೂ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ವಾಯುವ್ಯ ವಿಭಾಗ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share.
Leave A Reply