ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ವಿರುದ್ಧ ಟೀಂ ಇಂಡಿಯಾ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 2008ರಲ್ಲಿ ವೇಗಿ ಎಸ್.ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸಂಬಂಧ ಹರ್ಭಜನ್‌ ಕಿಡಿಕಾರಿದ್ದಾರೆ. ಹೌದು.. ಇತ್ತೀಚೆಗೆ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಪಾಡ್‌ಕಾಸ್ಟ್‌ನಲ್ಲಿ ಮಾತಾಡಿದ ಲಲಿತ್‌ ಮೋದಿ ಒಂದು ವಿಡಿಯೋ ರಿಲೀಸ್‌ ಮಾಡಿದ್ದರು. ಅದ್ರಲ್ಲಿ ಹರ್ಭಜನ್‌ ಸಿಂಗ್‌, ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿದ್ದರು. 200೮ರಲ್ಲಿ ಮುಂಬೈ ಹಾಗೂ ಪಂಜಾಬ್‌ ನಡುವಿನ ಮ್ಯಾಚ್‌ ಮುಗಿದ ಬಳಿಕ ಭಜ್ಜಿ, ಶ್ರೀಶಾಂತ್‌ ಕೆನ್ನೆಗೆ ಬಾರಿ ಬಾರಿಸಿದ್ದರು.

ಬಳಿಕ ಮೈದಾನದಲ್ಲೇ ಶ್ರೀಶಾಂತ್‌ ಅಳುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸೆ‌ನ್ಸೇಷನ್ ಸೃಷ್ಟಿಸಿದ್ವು. ಈ ಘಟನೆಯನ್ನು ಕ್ರಿಕೆಟ್‌ ಅಭಿಮಾನಿಗಳೆಲ್ಲಾ ಮರೆತಿದ್ದರು. ಇದೀಗ ಲಲಿತ್‌ ಮೋದಿ, ಈ ವಿಡಿಯೋ ರಿಲೀಸ್‌ ಮಾಡುವ ಮೂಲಕ ಮತ್ತೆ ಸಂಚಲನ ಎಬ್ಬಿಸಿದ್ದಾರೆ. ಇದೇ ವಿಚಾರವಾಗಿ ಹರ್ಭಜನ್‌ ಸಿಂಗ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ, ಗಣೇಶ ಹಬ್ಬದ ಆಚರಣೆ ವೇಳೆ ಇನ್‌ಸ್ಟಂಟ್ ಬಾಲಿವುಡ್‌ ಜೊತೆ ಮಾತನಾಡಿದ ಹರ್ಭಜನ್‌ ಸಿಂಗ್, ವಿಡಿಯೋ ಸೋರಿಕೆಯಾದ ರೀತಿ ತಪ್ಪು ಎಂದರು. ಈ ಘಟನೆ ನಡೆಯಬಾರದಿತ್ತು. ಇದರ ಹಿಂದೆ ಸ್ವಾರ್ಥದ ಉದ್ದೇಶವಿರಬಹುದು. 18 ವರ್ಷಗಳ ಹಿಂದಿನ ಘಟನೆಯನ್ನು ಜನರು ಮರೆತಿದ್ದರು. ಈಗ ಅವರಿಗೆ ಮತ್ತೆ ನೆನಪಾಗಿದೆ. ಏನೇ ನಡೆದರೂ ಅದಕ್ಕೆ ಕ್ಷಮಿಸುತ್ತೇನೆ ಅಂತಾ ಹರ್ಭಜನ್‌ ಸಿಂಗ್‌ ಹೇಳಿದ್ದಾರೆ.

ಮತ್ತೊಂದೆಡೆ, ಈ ವಿಡಿಯೋ ನೋಡಿದ ಶ್ರೀಶಾಂತ್‌ ಪತ್ನಿ ಕೊಪಗೊಂಡು, ಲಲಿತ್ ಮೋದಿ ಮತ್ತು ಮೈಕೆಲ್ ಕ್ಲಾರ್ಕ್, ನಿಮಗೆ ನಾಚಿಕೆಯಾಗಬೇಕು. ಹರ್ಭಜನ್‌ ಸಿಂಗ್‌ ಮತ್ತು ಶ್ರೀಶಾಂತ ಇಬ್ಬರು ಬದಲಾಗಿದ್ದಾರೆ. ನೀವು ಹಳೆಯ ವಿಡಿಯೋ ಹಾಕಿ ಅವರ ಕಹಿ ಘಟನೆಗಳನ್ನ ನೆನಪು ಮಾಡುತಿದ್ದೀರಾ ಅಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ..

Share.
Leave A Reply