ಸಿದ್ದರಾಮಯ್ಯ ಅವರನ್ನ ಶಾಸಕರು ಆಯ್ಕೆ ಮಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕರೆದು, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯನ್ನ ಸ್ವಾಗತಿಸುತ್ತೇವೆ. ಸಿಎಂ ಅವರೇ ಕ್ಲಿಯರ್ ಆಗಿ ಹೇಳಿದ್ಮೇಲೆ ಇನ್ನೇನು ಚರ್ಚೆ ಮಾಡ್ತೀರಿ. ಇದು ಎಂಡ್ ಅಂತಾ ಸಿದ್ದರಾಮಯ್ಯ ಆಪ್ತ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಏನು ತೀರ್ಮಾನ ಮಾಡಿದೆಯೋ ಅದನ್ನ ಸಿಎಂ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವ ಗೊಂದಲದ ಸನ್ನಿವೇಶ ಇಲ್ಲವೇ ಇಲ್ಲ. ಕೆಲವರು ಮಾತಾಡುತ್ತಾರೆ. ಹೈಕಮಾಂಡ್ ಚರ್ಚೆ ಮಾಡಿ ಸೂಚನೆ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಬದಲಾವಣೆ ಮಾತುಕತೆ ಇಲ್ಲ ಅಂತಾ ಹೈಕಮಾಂಡ್ ಹೇಳಿದೆ. ಉಸ್ತುವಾರಿಗಳು ಕೂಡ ಮೊನ್ನೆ ಮಾಧ್ಯಮಗಳ ಮುಂದೆ ಸ್ಪಷ್ಟವಾಗಿ ಹೇಳಿದ್ದಾರೆ. ಇವರೆಲ್ಲ ಹೇಳಿದ ಮೇಲೆ ಇನ್ನೇನು. ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಮುಂದುವರಿಯುತ್ತಾರೆ. ಕೆಲ ಶಾಸಕರಿಂದ ಗೊಂದಲ ಸೃಷ್ಟಿಯಾಗುತ್ತೆ. ಜನರು ಐದು ವರ್ಷ ಆಡಳಿತ ನಡೆಸಲು ಅಧಿಕಾರ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಜನಾದೇಶವನ್ನ ಬದಲಾವಣೆಗಾಗಿ ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಯತ್ನಿಸಿದರು. ಬಿಜೆಪಿಯವರೇ ಹೈಕಮಾಂಡ್‌ನಂತೆ ಮಾತಾಡ್ತಾರೆ. ರಾಷ್ಟ್ರ ರಾಜಕಾರಣ ಇಷ್ಟ ಇಲ್ಲ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಪಕ್ಷ ಬಳಸಿಕೊಳ್ಳಲಿದೆ ಎಂದಿದ್ದಾರೆ.
