ಮಡಿಕೇರಿ: ಮಗು ಸೇರಿದಂತೆ ನಾಲ್ವರನ್ನು ಕೊಚ್ಚಿ ಕೊಂದಿದ್ದ ಪಾಪಿಗೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿದೆ. ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲಿನ ಅನುಮಾನದಿಂದಾಗಿ ಹಾಗೂ ಕಾಫಿ ಬೆಳೆಯ ಆಸೆಯಿಂದಾಗಿ ಪಾಪಿಯು ಮಗು ಸೇರಿದಂತೆ ನಾಲ್ವರನ್ನು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಕೇವಲ 9 ತಿಂಗಳಲ್ಲಿ ಮುಗಿಸಿದ ನ್ಯಾಯಾಧೀಶರಾದ ಎಸ್. ನಟರಾಜ್, ಈ ಶಿಕ್ಷೆ ವಿಧಿಸಿದ್ದಾರೆ.

ಕೇರಳ ಮೂಲದ ಮಾನಂದವಾಡಿ ಜಿಲ್ಲೆಯ ಅತ್ತಿಮಾಲಾ ನಿವಾಸಿ ಗಿರೀಶ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಮಾರ್ಚ್ 27ರಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಬಾಳುಗೋಡಿನ ತೋಟದ ಮನೆಯಲ್ಲಿ ಈ ಘಟನೆ ನಡೆದಿತ್ತು. ಕರಿಯ(70), ಆತನ ಪತ್ನಿ ಗೌರಿ, ನಾಗಿ(30), ನಾಲ್ಕು ವರ್ಷದ ಕಾವೇರಿ ಕೊಲೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಿರೀಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಘಟನೆ ಹೊರ ಬಂದಿತ್ತು.

ಮೊದಲ ಗಂಡನಿಂದ ಬೇರ್ಪಟ್ಟಿದ್ದ ನಾಗಿಯು ಸುಬ್ರಮಣಿ ಎಂಬಾತನೊಂದಿಗೆ ಇದ್ದಳು. ನಂತರ ಆತನನ್ನೂ ಬಿಟ್ಟು ತನ್ನ ಮಗಳೊಂದಿಗೆ ತಂದೆ ಕರಿಯನ ಮನೆಯಲ್ಲಿ ವಾಸಿಸುತ್ತಿದ್ದಳು. ಆದರೆ, ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್, ನಾಗಿಯ ಜೊತೆ ಸಂಬಂಧ ಬೆಳೆಸಿದ್ದಾಳೆ.

ಗಿರೀಶ್ ಗೆ ಐದು ಮಕ್ಕಳು ಇದ್ದರೂ ಸಂಬಂಧ ಬೆಳೆಸಿದ್ದ. ಆದರೆ, ನಾಗಿಯು ಸುಬ್ರಮಣಿ ಜೊತೆ ಸಂಬಂಧ ಮುಂದುವರಿಸಿದ್ದಾಳೆ ಎಂದು ಅನುಮಾನ ಪಡುತ್ತಿದ್ದ. ಹೀಗಾಗಿ ಇಬ್ಬರ ಮಧ್ಯೆ ಆಗಾಗ ಜಗಳ ಕೂಡ ನಡೆಯುತ್ತಿದ್ದ. ಅಲ್ಲದೇ, ನಾಗಿ ಅಪ್ಪ ಕರಿಯನಿಗಿದ್ದ 1 ಎಕರೆ ಕಾಫಿ ತೋಟ ಮತ್ತು ಮನೆಯಲ್ಲಿದ್ದ 10-15 ಚೀಲ ಕಾಫಿ ಬೆಳೆಯ ಮಾರಾಟದ ವಿಚಾರದಲ್ಲೂ ತಗಾದೆ ತೆಗೆದಿದ್ದ ಎನ್ನಲಾಗಿದೆ. ಮಾ. 27ರಂದು ಕೆಲಸ ಮುಗಿಸಿ ಮನೆಗೆ ಬಂದಾಗ ನಾಗಿ ಹಾಗೂ ಗಿರೀಶ್ ಮಧ್ಯೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗಿ ನಾಗಿಯನ್ನು ಕೊಲೆ ಮಾಡಿದ್ದಾನೆ. ತಡೆಯಲು ಬಂದಿದ್ದ ಕರಿಯ ಹಾಗೂ ಆತನ ಪತ್ನಿ ಗೌರಿಯನ್ನು ಕೂಡ ಹತ್ಯೆ ಮಾಡಿದ್ದಾನೆ. ಆನಂತರ ನಾಲ್ಕು ವರ್ಷದ ಕಾವೇರಿಯನ್ನೂ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸರು ತನಿಖೆ ಕೈಗೊಂಡು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಸದ್ಯ ಆರೋಪ ಸಾಬೀತಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share.
Leave A Reply