ಇಡೀ ಜಗತ್ತಿನಲ್ಲಿ RCB ತಂಡಕ್ಕೆ ಇರುವ ಹವಾ, ಫ್ಯಾನ್‌ ಫಾಲೋಯಿಂಗ್‌, ಕ್ರೇಜ್ ಬೇರೆ ಯಾರಿಗೂ ಇಲ್ಲ‌, ಇಷ್ಟು ವರ್ಷ ಒಂದೂ ಕಪ್‌ ಗೆಲ್ಲದಿದ್ರೂ ಅಭಿಮಾನಿಗಳ ಕ್ರೇಜ್‌ ಮಾತ್ರ ಕೊಂಚವೂ ಕಡಿಮೆಯಾಗಿದ್ದೇ ಇಲ್ಲ. ಇಂತಹ ನಿಷ್ಠಾವಂತ ಅಭಿಮಾನಿಗಳಿಗೆ ಒಂದಾದರೂ ಕಪ್‌ ಅನ್ನು ಉಡುಗೊರೆಯಾಗಿ ಕೊಡಬೇಕು ಎಂದು ಕೊಂಡ ಆರ್‌ಸಿಬಿ, ಕೊನೆಗೂ ಕನ್ನಡಿಗರ ಕನಸು ನನಸು ಮಾಡಿತ್ತು.

ಆದರೆ ವಿಧಿ ಆಟ ಬೇರೆನೇ ಇತ್ತು, ರಾಜಧಾನಿ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದ ಬಳಿ, ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಸಂಭ್ರಮ ಪಡುವಾಗಲೇ 11 ಜನ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡು ಸಾವನ್ನಪ್ಪಿದ್ದರು. ಈಗ ಅಭಿಮಾನಿಗಳ ಸಾವಿಗೆ ರೊಚ್ಚಿಗೆದ್ದಿರುವ ಫ್ಯಾನ್ಸ್‌ ಆರ್‌ಸಿಬಿ ತಂಡವನ್ನ ಬ್ಯಾನ್‌ ಮಾಡಿ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

18 ವರ್ಷ ನಂತರ ಕಫ್‌ ಗೆದ್ದ ಸಂಭ್ರಮಕ್ಕೆ ವಿಧಿ ಬೆಂಕಿ ಇಟ್ಟಿದೆ, ಆರ್‌ಸಿಬಿಗೆ ಸದಾ ಬೆನ್ನಿಗೆ ನಿಂತಿದ್ದ ಅಭಿಮಾನಿ ಆರ್‌ಸಿಬಿಗೆ ಶಾಪ ಹಾಕ್ತಿದ್ದರೆ. ಇತ್ತ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಂಡರೆ ಉರಿದು ಬೀಳುವ ಹಲವು ಬೇರೆ ತಂಡದ ಅಭಿಮಾನಿಗಳು 5 ವರ್ಷ ಆರ್‌ಸಿಬಿ ತಂಡವನ್ನು ಬ್ಯಾನ್ ಮಾಡುವಂತೆ ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಇನ್ನು 11 ಆರ್‌ಸಿಬಿ ಅಭಿಮಾನಿಗಳು ಜೀವ ಬಿಟ್ಟಿರುವ ವಿಚಾರವನ್ನು ಮುಂದಿಟ್ಟುಕೊಂಡು, ಸೋಷಿಯಲ್ ಮೀಡಿಯಾ ಮೂಲಕ ಆರ್‌ಸಿಬಿ ವಿರುದ್ಧ ಕ್ಯಾಂಪೇನ್ ಮಾಡಿ 5 ವರ್ಷ ಆರ್‌ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐ ಮೇಲೆ ಒತ್ತಡ ಹೇರಲು ಪ್ರಯತ್ನ ಮಾಡುತ್ತಿದ್ದಾರೆ.. ಈ ಬೆಳವಣಿಗೆ ಮುಂದೆ ಏನಾಗುತ್ತೋ ಅಂತಾ ಕಾದು ನೋಡಬೇಕು..

Share.
Leave A Reply