18 ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದೆ. 18ನೇ ನಂಬರ್ ಜೆರ್ಸಿ ಧರಿಸಿದ್ದ ವಿರಾಟ್ ಕೊಹ್ಲಿ ಕನಸು ಕೊನೆಗೂ ನನಸಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್​​ ಪಂದ್ಯ RCB ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳ ಅಂತರದಲ್ಲಿ ಗೆಲ್ಲುವ ಮೂಲಕ ಬರೋಬ್ಬರಿ 18 ವರ್ಷಗಳ ಬಳಿಕ ಮೊದಲ ಕಪ್ ಗೆದ್ದು ಸಂಭ್ರಮಿಸಿದೆ.

ಅಭಿಮಾನಿಗಳು ಪ್ರತೀ ವರ್ಷವೂ ಕೂಡ ಈ ಸಲ ಕಪ್ ನಮ್ದೆ ಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದರು. ಸದ್ಯ ಈ ಬಾರಿ ಗೆಲ್ಲುವ ಮೂಲಕ ಮೊದಲ ಕಪ್ ಗೆದ್ದು ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಪಂದ್ಯ ಗೆದ್ದ ಬಳಿಕ ಭಾವುಕರಾದ ವಿರಾಟ್, ಅಭಿಮಾನಿಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.. ಅಭಿಮಾನಿಗಳನ್ನು ಲಾಯಲ್‌ ರಾಯಲೀ ಅಂತಾ ಹಾಡಿ ಹೊಗಳಿದ್ದಾರೆ..

ಮತ್ತೊಂದೆಡೆ, ಮೊದಲ ಬಾರಿಗೆ ಐಪಿಎಲ್‌ ಟ್ರೋಪಿ ಗೆದ್ದಿರುವ ಆರ್‌ಸಿಬಿ ಟೀಂ, ಬೆಂಗಳೂರಿಗೆ ಬರಲು ಸಜ್ಜಾಗಿದೆ. ಆರ್‌ಸಿಬಿ ಫ್ಯಾನ್ಸ್‌ ಜೊತೆ ಸೆಲೆಬ್ರೇಷನ್ ಮಾಡಲು ಆರ್‌ಸಿಬಿ ಟೀಂ ಉತ್ಸುಕವಾಗಿದೆ. ಇನ್ನೊಂದು ವಿಶೇಷ ಅಂದ್ರೆ ಆರ್‌ಸಿಬಿ ಮಾಜಿ ಆಟಗಾರರಾದ ಎಬಿಡಿ, ಕ್ರಿಸ್‌ ಗೇಲ್‌ ಕೂಡ ಬರುತ್ತಿದ್ದಾರೆ. ಈ ಮೂಲಕ ಆರ್‌ಸಿಬಿ ಆರ್ಮಿ ಜೊತೆ ಕುಣಿದು ಕುಪ್ಪಳಿಸೋಕೆ ಆರ್‌ಸಿಬಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರೋದಂತೂ ಸುಳ್ಳಲ್ಲ..

Share.
Leave A Reply