ಸತತ 17 ವರ್ಷಗಳ ಕಾಲ ವನವಾಸ ಅನುಭವಿಸಿದ್ದ RCB ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ಪ್ರತಿ ಬಾರಿ ಯೂ ಈ ಸಲ ಕಪ್ ನಮ್ದೇ ಅಂತಾ ಹೇಳಿ ನಿರಾಸೆಗೊಳಗಾಗಿದ್ದ ಆರ್‌ಸಿಬಿ ಫ್ಯಾನ್ಸ್ ಈಗ ಕಪ್ ಎತ್ತಿ ಸಂಭ್ರಮಿ ಸುವ ಚರಿತ್ರೆಗೆ ಸಾಕ್ಷಿಯಾಗಿದ್ದಾರೆ.

ಐಪಿಎಲ್ 2025 ಬಹು ನಿರೀಕ್ಷಿತ ಫೈನಲ್ ಮ್ಯಾಚ್‌ನಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಪಡೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು..
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ, ಪಂಜಾಬ್‌ಗೆ 191ರನ್‌ಗಳ ಗುರಿಯನ್ನ ನೀಡಿತ್ತು. ಗುರಿ ಬೆನ್ನತ್ತಿದ್ದ ಪಂಜಾಬ್ ಮೊದ ಮೊದಲು ಆರ್‌ಸಿಬಿ ಬೌಲರ್‌ಗಳಿಗೆ ಸಖತ್ ಕಾಟ ಕೊಟ್ರು.. ಆದ್ರೆ ಶೆಪರ್ಡ್ ಹಾಗೂ ಕೃನಾಲ್ ಪಾಂಡ್ಯಾ, ಭುವನೇಶ್ವರ್ ಅದ್ಭುತ ಬೌಲಿಂಗ್‌ನಿಂದ ಪಂಜಾಬ್ ಬ್ಯಾಟ್ಸಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು..
ಇನ್ನು, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ ಜೋರಾಗಿತ್ತು.. ಮೈದಾನದ ತುಂಬೆಲ್ಲಾ ಆರ್‌ಸಿಬಿ ಜರ್ಸಿಗಳೇ ರಾರಾಜಿಸುತ್ತಿದ್ವು.. ಅಲ್ಲದೇ, ಕರುನಾಡಿನಲ್ಲೂ ಆರ್‌ಸಿಬಿ ಸಂಭ್ರಮ ಮನೆ ಮಾಡಿತ್ತು.. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಆರ್‌ಸಿಬಿ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು..
