ಪ್ರಧಾನಿ ಮೋದಿ ಕೇವಲ ಪ್ರಚಾರಪ್ರಿಯ. ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮೈಸೂರಿನಲ್ಲಿ ಇಂದು ಸಮಾವೇಶ ನಡೆಯುತ್ತಿದೆ. 24 ವಿವಿಧ ಇಲಾಖೆಯ ಯೋಜನೆಗಳಿಗೆ ಅನುದಾನ ನೀಡಲಾಗಿದೆ. 2578 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ ಮಾಡಿದ್ದಾರೆ. ಮೈಸೂರಿ ಅಂದರೆ ಅವರಿಗೆ ಪ್ರೀತಿ ಎಂದರು.

ಕೇಂದ್ರ ಬಿಜೆಪಿ ಸರ್ಕಾರ ಮಣಿಪುರಕ್ಕೆ ಭೇಟಿ ನೀಡಿಲ್ಲ. ದೇಶದ ಜನ ಸಾಯುವಾಗ ಮೋದಿ ವಿದೇಶಿ ಟೂರ್ ನಲ್ಲಿದ್ದರು. ಮೋದಿ ಕೇವಲ ಪ್ರಚಾರಪ್ರಿಯ. ಸಂವಿಧಾನದಿಂದಲೇ ಮೋದಿ ಪ್ರಧಾನಿ ಆಗಿದ್ದು. ಆದರೆ ಇಂದು ಮೋದಿಯಿಂದ ಅದೇ ಸಂವೀಧಾನದ ಕೊಲೆಯಾಗುತ್ತಿದೆ. ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ ಸಂವಿಧಾನ ಬದಲಾವಣೇ ಮಾಡಲು ಆಗಲ್ಲ. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಮಾಡಿದ್ದಾ ಅಂತಾ ಬಿಜೆಪಿಯವರು ಕೇಳುತ್ತಾರೆ ಅಂಬೇಡ್ಕರ್ ಅಲ್ಲದೆ ಆರ್ ಎಸ್ ಎಸ್ ನವರು ಸಂವಿಧಾನ ರಚನೆ ಮಾಡಿದ್ರಾ ಎಂದು ಗುಡುಗಿದರು.

ದೇಶದ ಕೆಲವು ರಾಜ್ಯದಲ್ಲಿ ಕಾಂಗ್ರೆಸ್ ಸೋತಿರಬಹುದು ಆದರೆ ಲಕ್ಷಾಂತರ ಜನ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಆಶಿಸುತ್ತಾರೆ. ಬಿಜೆಪಿ ಅಭಿವೃದ್ದಿ ಮಾಡಲ್ಲ ಭ್ರಷ್ಟಾಚಾರ ಮಾಡುತ್ತಾರೆ. ಕಾಂಗ್ರೆಸ್ ಏನು ಮಾಡಿದೆ ಅಂತಾ ಮೋದಿ ಪದೇ ಪದೇ ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟ ಕೊಡುಗೆ ಜನರ ಕಣ್ಮುಂದೆ ಇದೆ. ಆದರೆ ಮೋದಿ ಅವರು ಅದಾನಿ ಅಂಬಾನಿಗೆ ದೇಶದ ಆಸ್ತಿಯನ್ನ ಮಾರುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

Share.
Leave A Reply