2025 ರ ಏಷ್ಯಾ ಕಪ್‌ನಲ್ಲಿ ಸೆ. 14ರಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಗುಂಪು ಹಂತದ ಪಂದ್ಯ ನಡೆಯಿತು. ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್ಗಳಿಂದ ಬಹಳ ಸುಲಭವಾಗಿ ಜಯಬೇರಿ ಬಾರಿಸಿತು. ಉಗ್ರರಿಗೆ ಸದಾ ಕುಮ್ಮಕ್ಕು ನೀಡುತ್ತಾ ಭಾರತದ ಭದ್ರತೆಗೆ ಸದಾ ಭಂಗ ತರಲು ಪ್ರಯತ್ನಿಸುವ ಪಾಕಿಸ್ತಾನಕ್ಕೆ ಇದೀಗ ಟೀಂ ಇಂಡಿಯಾ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದೆ. ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಯನ್ನು ಸೋಲಿಸಿದಂತೆ, ಟೀಮ್ ಇಂಡಿಯಾ ಕೂಡ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನ ಅಟ್ಟಾಡಿಸಿ ಹೊಡೆದಿದೆ. ಭಾರತವು ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನ ಮುಗಿದೆ. ಇಂಡಿಯಾ-ಪಾಕ್ ಮ್ಯಾಚ್ ವೇಳೆ ನಮ್ಮ ಭಾರತೀಯ ಆಟಗಾರರ ಈ ವರ್ತನೆ ಪಾಕಿಗಳಿಗೆ ಖಡಕ್ ಸಂದೇಶ ನೀಡಿದೆ.

ಸಾಕಷ್ಟು ನಿರೀಕ್ಷೆ ಹಾಗೂ ಒತ್ತಡದಲ್ಲಿಯೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಮೈದಾನಕ್ಕಿಳಿದಿತ್ತು. ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಪಾಕಿಸ್ತಾನಕ್ಕೆ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಶಾಕ್ ನೀಡಿದರು. ನಂತರ ಬೌಲಿಂಗ್ ಮಾಡಿದ ಬುಮ್ರಾ ಕೂಡಾ ವಿಕೆಟ್ ಕಬಳಿಸುವ ಮೂಲಕ ಪಾಕಿಗೆ ಡಬಲ್ ಶಾಕ್ ನೀಡಿದರು. ಟೀಮ್ ಇಂಡಿಯಾ ಬೌಲರ್‌ಗಳ ಮಾರಕ ಬೌಲಿಂಗ್ ಸಿಲುಕಿದ ಪಾಕಿಸ್ತಾನ 9 ವಿಕೆಟ್ ನಷ್ಟಕ್ಕೆ ಕೇವಲ 127 ರನ್‌ಗಳ ಗುರಿ ನೀಡಲಷ್ಟೇ ಶಕ್ತವಾಯಿತು . 127 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 15.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 131ರನ್ ಗಳಸಿ ಗೆಲುವಿನ ನಗೆ ಬೀರಿತು.

ಇನ್ನು ಪಂದ್ಯದ ನಂತರ, ಭಾರತೀಯ ತಂಡದ ಆಟಗಾರರ ನಡೆ ದೇಶಭಕ್ತರ ಮೆಚ್ಚುಗೆಗೆ ಕಾರಣವಾಯಿತು. ಹೌದು ಭಾರತೀಯ ಆಟಗಾರರು ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಕೈ ಕುಲುಕಲು ನಿರಾಕರಿಸಿ ಡ್ರೆಸ್ಸಿಂಗ್ ಕೋಣೆಗೆ ತೆರಳಿದ್ರು. ಇತ್ತ ಪಾಕಿಸ್ತಾನಿ ಆಟಗಾರರು ಶೇಕ್ ಹ್ಯಾಂಡ್‌ಗಾಗಿ ಕಾಯುತ್ತಿದ್ದಾಗ, ಭಾರತೀಯ ತಂಡದ ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ಹೋಗಿ ಬಾಗಿಲು ಮುಚ್ಚಿದ್ದಾರೆ. ಇದು ಪಾಕ್ ಆಟಗಾರರ ಮುಖಭಂಗಕ್ಕೆ ಕಾರಣವಾಯಿತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾವು ಎಂದು ನಿಮ್ಮನ್ನ ಕ್ಷಮಿಸಲ್ಲ ಅನ್ನೋ ಖಡಕ್ ಸಂದೇಶವನ್ನು ಟೀಮ್ ಇಂಡಿಯಾ ಆಟಗಾರರು ನೀಡಿದ್ದಾರೆ. ಗೆಲುವಿನ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ಮುಂದಾಗಲಿಲ್ಲ. ಇದಕ್ಕೂ ಮೊದಲು, ಟಾಸ್ ಸಮಯದಲ್ಲಿಯೂ ಸಹ, ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ಸಲ್ಮಾನ್ ಅಗಾ ಕೈಕುಲುಕಲಿಲ್ಲ. ಜೊತೆಗೆ ಭಾರತ ವಿಜಯದ ಬಗ್ಗೆ ಮಾತನಾಡಿರುವ ಸೂರ್ಯ ಕುಮಾರ್ ಯಾದವ್, ಟೀಮ್ ಇಂಡಿಯಾ ಗೆಲುವನ್ನ ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಹಾಗೂ ಭಾರತೀಯ ಸೇನೆಗೆ ಅರ್ಪಿಸಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳೊಂದಿಗೆ ನಾವು ಸದಾ ನಿಲ್ಲುತ್ತೇವೆ ಮತ್ತು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಇಂದಿನ ಗೆಲುವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ ಎಂದು ಪಾಪಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.

Read Also ಹೂವಿನ ಬಾಣದಂತೆ ಸಾಂಗ್ ವೈರಲ್ : ಹುಡುಗಿಗೆ ಯಶ್ ಜೊತೆ ನಟಿಸುವ ಆಸೆ
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಕೈ ಕುಲುಕದಿರಲು ಕಾರಣ ತಿಳಿಸಿದರು. ಪತ್ರಕರ್ತನ ಪ್ರಶ್ನೆಗೆ ಉತ್ತರ ನೀಡಿದ ಸೂರ್ಯ ನಾವು ಇಲ್ಲಿಗೆ ಕ್ರಿಕೆಟ್ ಆಡಲು ಮಾತ್ರ ಬಂದಿದ್ದೇವೆ ಮತ್ತು ಅದನ್ನೇ ನಾವು ಮಾಡಿದ್ದೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮರಣ ಹೊಂದಿದವರಿಗೆ ಮಾತ್ರ ಈ ಗೆಲುವು ಸಮರ್ಪಿತವಾಗಿದೆ ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ತಾನು ಈಗಾಗಲೇ ಹೇಳಿದ್ದೇನೆ ಮತ್ತು ಭಾರತೀಯ ಸಶಸ್ತ್ರ ಪಡೆಗಳು ನಮ್ಮನ್ನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತದೆ. ಕ್ರಿಕೆಟ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ನಮ್ಮ ದೇಶಕ್ಕೆ ಸಂತೋಷವನ್ನು ನೀಡುತ್ತಲೇ ಇರಬೇಕು ಎಂದು ಸೂರ್ಯ ಹೇಳಿದರು
