ಆಪರೇಷನ್​ ಸಿಂಧೂರ್ (Operation Sindoor)​​ ಯಶಸ್ವಿ ಹಿನ್ನಲೆ ದೇಶದಲ್ಲಿ ಸಂಭ್ರಮದ ವಾತಾವರಣವಿದೆ. ಬಿಜೆಪಿ ನಾಯಕರು (BJP Leaders) ಭಾರತೀಯ ಸೇನೆ ಬೆಂಬಲಿಸಿ (Supports Indian Army) ತಿರಂಗ ಯಾತ್ರೆ ಹಮ್ಮಿಕೊಂಡಿದ್ದಾರೆ. ನಗರದಲ್ಲಿಂದು ಭಾರತೀಯ ಜನತಾ ಪಕ್ಷದ ಶಾಸಕರು (BJP leaders) ವಿಧಾನ ಪರಿಷತ್ ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು, ಮಾಜಿ ಯೋಧರೊಂದಿಗೆ ಜೊತೆಗೂಡಿ ತಿರಂಗಾ ಯಾತ್ರೆ ನಡೆಸಿದರು. ಭಾರತೀಯ ಸೇನೆ ಬೆಂಬಲಿಸಿ ತಿರಂಗ ಯಾತ್ರೆಯಲ್ಲಿ ಬೃಹತ್ ತಿರಂಗ ಪ್ರದರ್ಶನ ನಡೆಸಲಾಯ್ತು.

ಮಲ್ಲೇಶ್ವರಂನ ಶಿರೂರೂ ಪಾರ್ಕ್ ನಿಂದ ಯಾತ್ರೆ ಆರಂಭವಾಗಿದ್ದು, ಯೋಧರಿಗೆ ಮತ್ತೆ ಸೇನೆಗೆ ನಮ್ಮ ಬೆಂಬಲ ಎಂದು ಘೋಷ ವಾಕ್ಯಗಳನ್ನು ಕೂಗಿದ್ದಾರೆ. ವಂದೆ ಮಾತರಂ ಗೀತೆಯ ಮೂಲಕ ತಿರಂಗ ಯಾತ್ರೆ ಆರಂಭವಾಗಿತ್ತು.. ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಾರ್ವಜನಿಕರು, ವಿವಿಧ ಸಂಘಟನೆಯವರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸುಮಾರು 1500 ಅಡಿ ಉದ್ದದ ಬೃಹತ್ ತಿರಂಗ ಹಿಡಿದು ಯಾತ್ರೆ ‌ಸಾಗಿತು.

ವಿಧಾನ ಪರಿಷತ್ ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು ಮಾಜಿ ಯೋಧರೊಂದಿಗೆ ಜೊತೆಗೂಡಿ ತಿರಂಗಾ ಯಾತ್ರೆ ನಡೆಸಿದರು. ಆಪರೇಷನ್ ಸಿಂಧೂರ ವಿಜಯೋತ್ಸವದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು ಮತ್ತು ಎಲ್ಲರ ಕೈಯಲ್ಲಿ ತಿರಂಗ ರಾರಾಜಿಸುತಿತ್ತು. ಭಾರತ್ ಮಾತಾ ಕೀ ಜೈ ಘೋಷಣೆ ರಸ್ತೆಯುದ್ದಕ್ಕೂ ಪ್ರತಿಧ್ವನಿಸುತಿತ್ತು.

Share.
Leave A Reply