ಯುಪಿಐ ವರ್ಕ್ ಆಗ್ತಿಲ್ಲ, ಇಂಟರ್ನೆಟ್ ಸ್ಲೋ ಇದೆ, ರೀಚಾರ್ಜ್ ಕಾಲಿ ಆಗಿದೆ… ಇನ್ಮೇಲೆ ಈ ರೀತಿಯ ಸಮಸ್ಯೆಗಳಲ್ಲಿ ನೀವು ಸಿಕ್ ಹಾಕೊಳೋ ಅವಶ್ಯಕತೆ ಇಲ್ಲ. ಯಾಕಂದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ರೂಪಾಯಿಯನ್ನ ಇಂಟ್ರಡ್ಯೂಸ್ ಮಾಡ್ತಾ ಇದೆ. ಇದ್ರ ಸ್ಪೆಷಾಲಿಟಿ ಏನು ಅಂದ್ರೆ, ಇಂಟರ್ನೆಟ್ ಅಥವಾ ಮೊಬೈಲ್ ನೆಟ್ವರ್ಕ್ ಇಲ್ಲದೇ ನೀವು ಡಿಜಿಟಲ್ ಪೇಮೆಂಟ್ಗಳನ್ನ ಮಾಡ್ಬಹುದು. ಯಾವ ರೀತಿ ಯುಪಿಐ QR ಕೋಡ್ಅನ್ನ ಸ್ಕ್ಯಾನ್ ಮಾಡ್ತಿರೋ ಅದೇ ರೀತಿ ಸ್ಕ್ಯಾನ್ ಅಥವಾ ಟ್ಯಾಪ್ ಮಾಡಿದ್ರೆ ಆಯ್ತು ನಿಮ್ಮ ಟ್ರ್ಯಾನ್ಸಾಕ್ಷನ್ ಸಕ್ಸಸ್ಫುಲ್ ಆಗುತ್ತೆ. ಇನ್ನು, ದೇಶದ ಹಲವಾರು ಬ್ಯಾಂಕುಗಳಲ್ಲಿ ಡಿಜಿಟಲ್ ರೂಪಾಯಿಯನ್ನು ವ್ಯಾಲೆಟ್ ಆಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದನ್ನು SBI, ICICI ಬ್ಯಾಂಕ್, IDFC ಫಸ್ಟ್ ಬ್ಯಾಂಕ್, ಯೆಸ್ ಬ್ಯಾಂಕ್, HDFC ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಇದು ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಯಾಕಂದ್ರೆ ಅಲ್ಲಿ ಇಂಟರ್ನೆಟ್ ಹಾಗೂ ನೆಟ್ವರ್ಕ್ ಸಮಸ್ಯೆ ಹೆಚ್ಚು. ನಿಮ್ಮ ನಿಮ್ಮ ಬ್ಯಾಂಕ್ ಅಕೌಂಟ್ಗೆ ಸಂಬಂಧಪಟ್ಟ ಡಿಜಿಟಲ್ ರುಪೀ ಆಪ್ಗಳನ್ನ ಪ್ಲೇ ಸ್ಟೋರ್ ಅಥವಾ ಆಪಲ್ ಪ್ಲೇ ಸ್ಟೋರ್ನಿಂದ ನೀವು ಡೌನ್ಲೋಡ್ ಮಾಡ್ಕೊಳ್ಬಹುದು.
Subscribe to Updates
Get the latest creative news from FooBar about art, design and business.