ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮುಗಿಸಿ ಮನೆಗೆ ಹೋದ ನಂತರವೂ ಬಾಸ್ ಗಳ ಕಿರಿಕಿರಿ ತಪ್ಪಿದ್ದಲ್ಲ ಎಂಬ ಮಾತು ಕೇಳಿ ಬರುತ್ತಲೇ ಇವೆ. ಇಂತಹ ಘಟನೆಗಳಿಂದಾಗಿ ತೀವ್ರ ಒತ್ತಡ ಎದುರಿಸುತ್ತಿದ್ದೇವೆಂದು ಹಲವರು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದರು. ಈಗ ಕೇಂದ್ರ ಸರ್ಕಾರ ಇಂತಹ ಒತ್ತಡಗಳಿಗೆ ಮುಕ್ತಿ ಹಾಡಲು ಮುಂದಾಗಿದೆ.

ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೆಲವು ಮಹತ್ವದ ಮಸೂದೆಗಳನ್ನು ಮಂಡಿಸಲಾಗಿದೆ. ಈ ಪೈಕಿ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” (ದೂರವಾಣಿ ಸಂಪರ್ಕ ಕಡಿತಗೊಳಿಸುವ ಹಕ್ಕು) ಮಂಡಿಸಲಾಗಿದೆ. ಈ ಮೂಲಕ ಖಾಸಗಿ ಉದ್ಯೋಗಿಗಳ ಹಕ್ಕುಗಳ ರಕ್ಷಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಕೆಲಸದ ಸಮಯ ಮುಕ್ತಾಯವಾದ ನಂತರ ಹಾಗೂ ರಜಾ ದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳು ಮತ್ತು ಇಮೇಲ್‌ಗಳಿಂದ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” ನ್ನು ಉದ್ಯೋಗಿಗೆ ನೀಡಲು ನೌಕರರ ಕಲ್ಯಾಣ ಪ್ರಾಧಿಕಾರ ರಚಿಸಲಾಗುತ್ತದೆ. ಈ ಬಿಲ್ ನಂತೆ, ಕೆಲಸದ ಸಮಯದ ನಂತರ ಕಚೇರಿಯ ಕರೆಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಈ ಮಸೂದೆಯನ್ನು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಂಡಿಸಿದ್ದಾರೆ.

ಒಂದು ವೇಳೆ ಕಚೇರಿ ಉತನ್ನ ಅಧಿಕಾರಿ ಕೆಲಸ ಸಮಯದ ನಂತರವು ಕೆಲಸಕ್ಕೆ ಸಂಬಂಧಿಸಿದ ಕರೆ ಅಥವಾ ಇಮೇಲ್ಗಳನ್ನು ಮಾಡಿದರೆ, ಈ ಮಸೂದೆಯಲ್ಲಿ ಅಂತಹ ವ್ಯಕ್ತಿಗಳನ್ನು ದಂಡನೆಯ ಶಿಕ್ಷೆಗೆ ಒಳಪಡಿಸಬಹುತು.

ಕಾಂಗ್ರೆಸ್ ಸಂಸದೆ ಕಡಿಯಂ ಕಾವ್ಯ ಅವರು ಮುಟ್ಟಿನ ಪ್ರಯೋಜನ ಮಸೂದೆಯನ್ನು ಪರಿಚಯಸಿದ್ದರೆ. ಈ ಮೂಲಕ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ನೀಡಿಬೇಕಾದ ಸೌಲಭ್ಯಗಳು ಹಾಗೂ ಬೆಂಬಲದ ಬಗ್ಗೆ ಈ ಮಸೂದೆ ಪ್ರಸ್ತಾಪಿಸುತ್ತದೆ.

Share.
Leave A Reply