ಎಮ್‌ಎಲ್‌ಸಿ ರವಿಕುಮಾರ್ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ನೀಡಿರೋ ಅಸಂಸದೀಯ ಹೇಳಿಕೆ ಬಗ್ಗೆ ಸಚಿವೆ ಹಾಗೂ ಮಹಿಳಾ ಸಂಘಟನೆಗಳಿಂದ ತೀರಾ ಆಕ್ರೋಶ ವ್ಯಕ್ತವಾಗ್ತಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ MLC ರವಿಕುಮಾರ್ ವಿರುದ್ಧ ಕಿಡಿಕಾರಿದರು.
ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು. ಕಲಬುರಗಿ ಡಿಸಿ ವಿರುದ್ದ ಪಾಕಿಸ್ತಾನ ಯುದ್ದದ ಸಂದರ್ಭದಲ್ಲೂ ಹೀಗೆ ಮಾತಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ಅವರ ವಿರುದ್ಧವೂ ಕೆಟ್ಟದಾಗಿ ಮಾತನಾಡುವುದು ಎಷ್ಟು ಸರಿ. ರವಿಕುಮಾರ್ ಡಾನ್… ತತ್ವಜ್ಞಾನಿನಾ…? ಮಹಿಳೆಯರ ಬಗ್ಗೆ ಚೀಪ್…ಚೀಪಾಗಿ ಮಾತನಾಡಿದ್ರೆ.. ಸುಮೋಟೋ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ನಮ್ಮ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದರು.
