ಕನ್ನಡ ಹಿರಿಯ ನಟಿ ಬಿ ಸರೋಜಾದೇವಿ ಅವರ ನಿಧನಕ್ಕೆ ಇಡೀ ಚಿತ್ರರಂಗ ಸೇರಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು. ಇನ್ನು ಸಿಎಂ ಸಿದ್ದರಾಮಯ್ಯ ಅವರು ಸರೋಜಾ ದೇವಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಿರಿಯ ನಟಿ ಬಿ ಸರೋಜಾ ದೇವಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಲು ಮೂಲತಃ ಕನ್ನಡದಲ್ಲಿ ಬರೆಯಲಾಗಿದ್ದ ಪೋಸ್ಟ್ ಅನ್ನು ಇಂಗ್ಲಿಷ್‌ಗೆ ತಪ್ಪಾಗಿ ಅನುವಾದಿಸಲಾಗಿದೆ. ಮೆಟಾದ ಸ್ವಯಂಚಾಲಿತ ಅನುವಾದ ಸಾಧನವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಧನರಾಗಿದ್ದಾರೆಂದು ತಪ್ಪಾಗಿ ಟ್ರಾನ್ಸಲೇಟ್‌ ಮಾಡಿದೆ.

ಮುಖ್ಯಮಂತ್ರಿಗಳ ಕಚೇರಿ (CMO) ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಸಂತಾಪ ಸಂದೇಶವನ್ನು ಅನುವಾದಿಸುವಾಗ ಈ ದೋಷ ಕಂಡುಬಂದಿದೆ. ಕನ್ನಡದಲ್ಲಿದ್ದ ಕ್ಯಾಪ್ಶನ್‌ ಇಂಗ್ಲಿಷ್‌ನಲ್ಲಿ ತಪ್ಪಾಗಿ ಟ್ರಾನ್ಸ್‌ಲೇಟ್‌ ಆಗಿದೆ. ಕನ್ನಡ ಟು ಇಂಗ್ಲೀಷ್‌ ಆಟೋ ಜನರೇಟ್‌ ಆಗಿ ಟ್ರಾನ್ಸ್‌ಲೇಷನ್‌ ಆಗಿದೆ. ಕ್ಷಣದಲ್ಲಿಯೇ ಅವರ ಟ್ವೀಟ್‌ ವೈರಲ್‌ ಆಗಿದೆ. ಇದನ್ನ ಗಮನಿಸಿದ ಮೆಟಾ ಸಿದ್ದರಾಮಯ್ಯ ಅವರಿಗೆ ಅಧಿಕೃತ ಸಂದೇಶವನ್ನು ಕಳುಹಿಸಿ ಕ್ಷಮೆಯಾಚಿಸಿ ತಪ್ಪನ್ನ ಸರಿಪಡಿಸಿಕೊಂಡಿದೆ.

Share.
Leave A Reply