ಆಪರೇಷನ್ ಸಿಂಧೂರ (Operation Sindoor) ಶಕ್ತಿಗೆ ಉಗ್ರರ ಅಟ್ಟಹಾಸ ಬಂದ್‌…. ಬಂದ್‌!, ಹೆಣ್ಣುಮಕ್ಕಳ ಕಣ್ಣಿರು, ಶಾಪಕ್ಕೆ ಉಗ್ರ ಮಸೂದ್‌ ಅಜರ್‌ ಕುಟುಂಬವೇ ಫಿನಿಶ್‌, ಭಾರತ ನಡೆಸಿದ ರಣಬೇಟೆಗೆ ಪಾಕ್‌ ಜನರು ವಿಲವಿಲ..! ಮಸೂದ್‌ ಅಜರ್‌ ಧಗಧಗ!, ಅಷ್ಟಕ್ಕೂ ಪಾಪಿ ಅಜರ್‌ ಕುಟುಂಬದಲ್ಲಿ ಸತ್ತ ಪಿಂಡಗಳು ಎಷ್ಟು? ಆಗಿದ್ದೇನು, ಅದರ ಕಂಪ್ಲಿಟ್‌ ಡಿಟೇಲ್ಸ್‌ ಇಲ್ಲಿದೆ..

ರಣಕೇಕೆಯ ನಗು.. ರಕ್ತ ಹರಿಸೋಕೆ, ಮನೆಗಳನ್ನ ಹಾಳು ಮಾಡೋಕೆ ಅಂತ ಹುಟ್ಟಿದ ಪಾಪಿಯ ಸಂಹಾರ ಈಗ ಆಗಿದೆ. ಭೀಕರ ಪಹಲ್ಗಾಮ್ ಭಯೋತ್ಪಾದಕ (Pahalgam Terror Attack) ದಾಳಿಯ ಎರಡು ವಾರಗಳ ನಂತರ ಭಾರತೀಯ ಸಶಸ್ತ್ರ ಪಡೆಗಳು, ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ಶಿಬಿರಗಳ ಮೇಲೆ ಮಾರಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ಭಾರತದ ಹಲವಾರು ಮಂದಿಯ ರಕ್ತ ಹೀರಿದ ಪಾಪಿ ಕೀಟದ ವಂಶವೇ ಧ್ವಂಸವಾಗಿದೆ..

ಕಂದಹಾರ್‌ ವಿಮಾನ ಹೈಜಾಕ್‌ ಸಂಚುಕೋರ, ಸಂಸತ್‌ ಮೇಲಿನ ದಾಳಿ ಮಾಡಿದ್ದ ಜೈಶ್‌ ಉಗ್ರ ಸಂಘಟನೆಯ ಮುಖ್ಯಸ್ಥ ಭಯೋತ್ಪಾದಕ ಮಸೂದ್‌ ಅಜರ್‌ನ(Jaish-e-Mohammed chief Hafiz Masood Azhar) ಇಡೀ ಕುಟುಂಬ ಆಪರೇಷನ್‌ ಸಿಂಧೂರದಲ್ಲಿ ಸರ್ವನಾಶವಾಗಿದೆ.. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ಪುರ್ ನಗರದಲ್ಲಿರುವ ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಹಫೀಜ್ ಮಸೂದ್ ಅಜರ್ ಮನೆಯನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದ್ದು, ಇದರಲ್ಲಿ ಮಸೂದ್‌ ಕುಟುಂಬದ (Masood Azhar Family ) ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.


ಇನ್ನು ಬಹಾವಲ್ಪುರದಲ್ಲಿರುವ ಮಸೂದ್ ಅಜರ್ ಅಡಗುತಾಣ ಸೇರಿದಂತೆ ಒಟ್ಟಾರೆ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ್ದು, ಈ ಕ್ಷಿಪಣಿ ದಾಳಿಯಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಐಎಸ್ಐ ಬೆಂಬಲಿತ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ನಂತಹ ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳ ಎಲ್ಲಾ ನೆಲೆಗಳು ಸರ್ವನಾಶವಾಗಿದೆ ಎಂದು ತಿಳಿದು ಬಂದಿದೆ.

Aslo Read : ಆಪರೇಷನ್‌ ಸಿಂಧೂರದಲ್ಲಿ ಮಸೂದ್ ಅಜರ್ ಸಾವು?


ಒಟ್ಟಿನಲ್ಲಿ ಭಾರತೀಯ ಹೆಣ್ಣು ಮಕ್ಕಳ ಸಿಂಧೂರವನ್ನ ಅಳಿಸಿ, ಹೇಡಿಗಳು ಬದುಕುತ್ತಿದ್ದು ಪಾಪಿ ಮಸೂದ್‌ ಅಜರ್‌ ಕುಟುಂಬವನ್ನ ಭಾರತ ಸೇನೆ ಹುಡುಕಿ ಹುಡುಕಿ ಹೊಡೆದಿದ್ದು, ಭಾರತದ ತಂಟೆಗೆ ಬಂದ್ರೆ ಸಾವು ಖಚಿತ, ಸರ್ವನಾಶ ನಿಶ್ಚಿತ ಅನ್ನೋದನ್ನ ಮತ್ತೆ ಸಾಬೀತು ಮಾಡಿದೆ.

Share.
Leave A Reply