ಒಬ್ಬರಲ್ಲ.. ಇಬ್ಬರಲ್ಲ.. ಬರೋಬ್ಬರಿ 26 ಭಾರತೀಯರು.. ಮನಸ್‌ ಶಾಂತಿಗಾಗಿ ಕಾಶ್ಮೀರಕ್ಕೆ ಹೋದಾಗ ಉಗ್ರರು ಸಂಚು ರೂಪಿಸಿ ಹೊಡೆದು ರಣಕೇಕೆ ಹಾಕಿದ್ರು.. ಬಿಟ್ಟು ಬಿಡಿ ಅಂತಾ ಅಂಗಲಾಚಿದ್ರೂ ಬಿಡದೇ ರಾಕ್ಷಸರು ಕೊಂದು ಮುಗಿಸಿದ್ರು.. ಅಂಥವರನ್ನು ಸುಮ್ನೆ ಬಿಡೋದುಂಟೇ.. ಈಗ ಇಂಡಿಯನ್‌ ಆರ್ಮಿ, ಉಗ್ರರ ನೆಲೆಗಳನ್ನು ಹುಡುಕಿ ಹುಡುಕಿ ಬಾಂಬ್‌ ಹಾಕಿ ಮಟಾಶ್‌ ಮಾಡಿದೆ… 9 ಕಡೆ ದಾಳಿ ಮಾಡಿರುವ ಭಾರತೀಯ ಸೇನೆ(Indian Army), 100ಕ್ಕೂ ಹೆಚ್ಚು ಉಗ್ರರ ಕಥೆ ಮುಗಿಸಿದೆ..

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದೆ. ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ ಜಂಟಿಯಾಗಿ ಆಪರೇಷನ್ ಸಿಂಧೂರ್(Operation Sindoor)​ ನಡೆದಿದೆ. ಮುರೀದ್ಕೆ, ಮುಜಾಫರ್​ಬಾದ್, ಬಹಾವಲ್​ಪುರ್, ಕೋಟ್ಲಿ, ಚಾಕ್​ಅಮ್ರು, ಗುಲ್​ಪುರ್, ಭಿಂಬರ್​ ಪ್ರದೇಶಗಳಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿಯಾಗಿದೆ.. ಈ ರಣರೋಚಕ ದಾಳಿಗೆ ಇಂಡಿಯನ್‌ ಆರ್ಮಿ ಬಳಸಿದ್ದು ಅದೊಂದು ಭಯಾನಕ ಶಕ್ತಿಯ ಬ್ರಹ್ಮಾಸ್ತ್ರ..

ಸ್ಕಾಲ್ಪ್ ಕ್ಷಿಪಣಿ ಮೂಲಕ ಉಡಾಯಿಸಿದ ಭಾರತ!
ಉಗ್ರರನ್ನು ಹೊಡೆದುರುಳಿಸಿದ್ದು ಬೇರೆ ಯಾವುದೂ ಅಲ್ಲ.. ಸ್ಕಾಲ್ಪ್ ಕ್ಷಿಪಣಿ (Scalp missile) .. ರಫೇಲ್‌ ಜೆಟ್​ (Rafale jet)ಯುದ್ಧ ವಿಮಾನದ ಮೂಲಕ ಭಾರತೀಯ ವಾಯುಸೇನೆ ಸ್ಕಾಲ್ಪ್ ಕ್ಷಿಪಣಿಯನ್ನು ಉಡಾಯಿಸಿದೆ. ವಿಶೇಷ ಅಂದರೆ ಹಫೀಜ್ ಸಯೀದ್ ಅಡಗುತಾಣದ ಮೇಲೆ ಅಟ್ಯಾಕ್ ಮಾಡಲಾಗಿದೆ. ಪಾಕಿಸ್ತಾನಕ್ಕೆ ಚೀನಾ ನೀಡಿದ್ದ ಜೆಫ್​-17 ಯುದ್ಧ ವಿಮಾನವನ್ನ ಹೊಡೆದುರುಳಿಸಲಾಗಿದೆ..

ಹಾಗಾದ್ರೆ, ಸ್ಕಾಲ್ಪ್ ಕ್ಷಿಪಣಿ ಎಂದರೇನು? ಇದರ ಸಾಮರ್ಥ್ಯ ಏನು ಅನ್ನೋದಾದ್ರೆ, SCALP ಕ್ಷಿಪಣಿ ಫ್ರಾನ್ಸ್ ಮತ್ತು ಯುಕೆ ತಯಾರಿಸಿದ ಕ್ಷಿಪಣಿ.. ಇದು ದೀರ್ಘ-ಶ್ರೇಣಿಯ ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ. ಈ ಕ್ಷಿಪಣಿಯ ಪೂರ್ಣ ಹೆಸರು ಸ್ಟ್ರೈಕ್ ಏರ್-ಲಾಂಚ್ಡ್ ಕ್ರೂಸ್ ಕ್ಷಿಪಣಿ(Strike air-launched cruise missile).. ಈ ಕ್ಷಿಪಣಿಯನ್ನು ಬ್ರಿಟನ್​​ನಲ್ಲಿ ಸ್ಟಾರ್ಮ್ ಶ್ಯಾಡೋ ಮತ್ತು ಫ್ರಾನ್ಸ್‌ನಲ್ಲಿ SCALP-EG ಎಂದು ಕರೆಯಲಾಗುತ್ತದೆ..

ವಾಸ್ತವವಾಗಿ ಇವೆರಡೂ ಒಂದೇ ರೀತಿಯ ಕ್ಷಿಪಣಿಗಳು. ಇದರ ಸಾಫ್ಟ್‌ವೇರ್ ಮತ್ತು ಇಂಟರ್ಫೇಸ್‌ನಲ್ಲಿ ಕೊಂಚ ವ್ಯತ್ಯಾಸ ಇದೆ. ಈ ಕ್ಷಿಪಣಿಯನ್ನು ಸುರಕ್ಷಿತ ದೂರದಿಂದ ವಾಯುನೆಲೆಗಳು ಮತ್ತು ಬಂಕರ್‌ಗಳಂತಹ ಟಾರ್ಗೆಟ್​ ಮೇಲೆ ದಾಳಿ ಮಾಡಲು ವಿನ್ಯಾಸಗೊಳಿಸಲಾಗಿದೆ..

Also Read : ಆಪರೇಷನ್‌ ಸಿಂಧೂರದಲ್ಲಿ ಮಸೂದ್ ಅಜರ್ ಸಾವು?

ಹಾಗಾದ್ರೆ, ಸ್ಕಾಲ್ಪ್ ಮಿಸೈಲ್‌ನ ವಿಶೇಷತೆ ಏನು ಅಂತಾ ನೋಡೋದಾದ್ರೆ, ಸ್ಕಾಲ್ಪ್ ಮಿಸೈಲ್​ 550 ಕಿ.ಮೀ.ವರೆಗೂ ದಾಳಿ ನಡೆಸುವ ಸಾಮರ್ಥ್ಯವಿದ್ದು, ರಫೇಲ್ ಫೈಟರ್ ಜೆಟ್​ಗೆ ಸ್ಕಾಲ್ಪ್ ಮಿಸೈಲ್ ಜೋಡಿಸಿ ದಾಳಿ ಮಾಡಲಾಗಿದೆ. ಪ್ರಾನ್ಸ್​ನಿಂದ ಖರೀದಿಸಿರುವ ಸ್ಕಾಲ್ಪ್ ಮಿಸೈಲ್ ಅಟ್ಯಾಕ್ನಿಂದ ಸ್ಕಾಲ್ಪ್​ ಮಿಸೈಲ್​ನಿಂದ ಹೆಚ್ಚಿನ ಹಾನಿಯಾಗೋದು ಖಚಿತ. ಸ್ಕಾಲ್ಪ್ ಕ್ರೂಸ್​ ಮಿಸೈಲ್ 1,300 ಕೆಜಿ ತೂಕ ಹೊಂದಿರುತ್ತವೆ. ಇಂಥಾದ್ದೊಂದು ಭಯಾನಕ ಬ್ರಹ್ಮಾಸ್ತ್ರದ ಮೂಲಕ ಆಪರೇಷನ್‌ ಸಿಂಧೂರ ಯಶಸ್ವಿಗೊಳಿಸಲಾಗಿ

Share.
Leave A Reply