ಥೈರಾಯ್ಡ್‌ ಸಮಸ್ಯೆ ಇರುವವರು ಆಹಾರದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸ್ಬೇಕಾಗುತ್ತೆ. ಕೆಲವೊಂದು ಸೂಪರ್‌ ಫುಡ್‌ಗಳನ್ನ ನಿಯಮಿತವಾಗಿ ಸೇವಿಸೋದ್ರಿಂದ ಥೈರಾಯ್ಡ್‌ ಕಂಟ್ರೋಲ್‌ನಲ್ಲಿರುತ್ತೆ. ಥೈರಾಯ್ಡ್ ಇರುವವರು ಕೊತ್ತಂಬರಿ ಕಾಳನ್ನ ಹೆಚ್ಚು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

ಇದರಲ್ಲಿರುವ ಜೀವಸತ್ವಗಳು ಥೈರಾಯ್ಡ್ ಕಾರ್ಯವನ್ನ ಹೆಚ್ಚಿಸಲು, ಉರಿಯೂತವನ್ನ ಕಡಿಮೆ ಮಾಡಲು ಮತ್ತು ಟಿ4ನ್ನ ಟಿ3 ಆಗಿ ಪರಿವರ್ತಿಸುವ ಯಕೃತ್ತಿನ ಸಾಮರ್ಥ್ಯವನ್ನ ಹೆಚ್ಚಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಕೊತ್ತಂಬರಿ ನೀರನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.

ಥೈರಾಯ್ಡ್ ರೋಗಿಗಳು, ವಿಶೇಷವಾಗಿ ವಿಟಮಿನ್ ಸಿ ಹೊಂದಿರುವ ಆಹಾರಗಳನ್ನ ನಿಯಮಿತವಾಗಿ ತಮ್ಮ ಆಹಾರದಲ್ಲಿ ಸೇರಿಸಬೇಕು.

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಿತ್ತಳೆಗಿಂತ ಎಂಟು ಪಟ್ಟು ಹೆಚ್ಚು ವಿಟಮಿನ್ ಸಿ ಹೊಂದಿರುತ್ತದೆ. ಅಲ್ಲದೆ, ಕುಂಬಳಕಾಯಿ ಬೀಜಗಳು ಅದ್ಭುತ ಆರೋಗ್ಯ ಪ್ರಯೋಜನಗಳನ್ನ ಸಹ ಹೊಂದಿವೆ. ಇದರಲ್ಲಿ ಮೆಗ್ನೀಸಿಯಮ್ ಮತ್ತು ಸತು ಸಮೃದ್ಧವಾಗಿದೆ.

ವಿಶೇಷವಾಗಿ ಸತು ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪಾದನೆ ಮತ್ತು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ನಿಮ್ಮ ಆಹಾರದಲ್ಲಿ ಹೆಸರುಕಾಳು, ಬೇಳೆಗಳನ್ನ ತೆಗೆದುಕೊಂಡರೆ, ಚಯಾಪಚಯ ಕ್ರಿಯೆಯೂ ಸುಧಾರಿಸುತ್ತದೆ.

ಹೆಸರುಕಾಳುಗಳು ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕಾರ್ಬೋಹೈಡ್ರೇಟ್’ಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ.

Share.
Leave A Reply