ಭಾರತೀಯ ಅಡುಗೆಯಲ್ಲಿ ಬೆಳ್ಳುಳ್ಳಿ ಅವಿಭಾಜ್ಯ ಅಂಗವಾಗಿದೆ. ಕೇವಲ ಅಡುಗೆಯ ರುಚಿ ಹೆಚ್ಚಿಸೋದಿಕ್ಕೆ ಮಾತ್ರವಲ್ಲ, ಔಷಧಿಯಾಗಿ ಕೂಡ ಕೆಲಸ ಮಾಡುತ್ತೆ. ಹೀಗಾಗಿಯೇ ಸಾಕಷ್ಟು ಹೋಮ್‌ ರೆಮಿಡೀಸ್‌ಅಲ್ಲಿ ಕೂಡ ಬೆಳ್ಳುಳ್ಳಿಯನ್ನ ಬಳಸಲಾಗುತ್ತೆ. ಚೀನಾದ ಅಧ್ಯಯನದ ಪ್ರಕಾರ ಬೆಳ್ಳುಳ್ಳಿ ತಿಂದರೆ ಹೆಚ್ಚು ಕಾಲ ಬದುಕಬಹುದು.

ಬೆಳ್ಳುಳ್ಳಿಯು ಆಂಟಿ ಏಜಿಂಗ್‌ ಗುಣಗಳನ್ನ ಹೊಂದಿದೆ. ಬೆಳ್ಳುಳ್ಳಿ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತೆ. ಇತ್ತೀಚೆಗೆ ಹಾರ್ಟ್‌ ಅಟ್ಯಾಕ್‌ ಪ್ರಕರಣಗಳು ಹೆಚ್ಚಾಗ್ತಿವೆ. ಹೀಗಾಗಿ ಬೆಳ್ಳುಳ್ಳಿಯನ್ನ ಆಹಾರದಲ್ಲಿ ಸೇರಿಸಿಕೊಳ್ಳೋದು ಒಳ್ಳೆಯದು.

ಹಾಗೇ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಬೆಳ್ಳುಳ್ಳಿ ಸೇವನೆಯಿಂದ ನೆರವಾಗುತ್ತೆ. ಈ ಸಿಂಪಲ್‌ ಬೆಳ್ಳುಳ್ಳಿ ರೆಸಿಪಿಯನ್ನ ಟ್ರೈ ಮಾಡಿ ಇನ್ನೂ ಹೆಚ್ಚಿನ ಬೆನಿಫಿಟ್ಸ್‌ ಪಡ್ಕೋಬೋದು. ಬೆಳ್ಳುಳ್ಳಿ ಸಿಪ್ಪೆ ತೆಗೆದು ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಹಾಕಿ, ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ಕಡಿಮೆ ಉರಿಯಲ್ಲಿ ಹುರಿಯಿರಿ. ಈ ರೀತಿ ಮಾಡಿ ಪ್ರತಿದಿನ ಒಂದು ಅಥವಾ ಎರಡು ಎಸಳು ಬೆಳ್ಳುಳ್ಳಿ ತಿನ್ನಿ.

Share.
Leave A Reply