ಭಾರತ ಮಹಿಳಾ ತಂಡ 2025ರ ಏಕದಿನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2005ರಲ್ಲಿ ಆಸ್ಟ್ರೇಲಿಯಾ ಮತ್ತು 2017 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಂಡಿದ್ದ ಭಾರತ ತಂಡ, ಕೊನೆಗೂ ತವರಿನಲ್ಲಿ ಮೊದಲ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ, ಭಾರತೀಯ ಮಹಿಳಾ ತಂಡವು ಇತಿಹಾಸ ನಿರ್ಮಿಸಿತು. 52 ವರ್ಷಗಳ ವಿಶ್ವಕಪ್ ಬರ ನೀಗಿಸಿಕೊಂಡ ಭಾರತ ತಂಡಕ್ಕೆ ಅದ್ಭುತ ಜಯ ಸಿಕ್ಕಿದ್ದು, ಕಫ್ ಗೆದ್ದ ಸಿಂಹಿಣಿಯರ ಪಡೆಗೆ ಪ್ರಪಂಚದಾದ್ಯಂತ ಶುಭಾಶಯಗಳು ಮಹಾಪೂರ ಹರಿದುಬಂದಿದೆ. ಈ ಗೆಲುವು ಭಾರತ ಮಹಿಳಾ ತಂಡಕ್ಕೆ ಹಣದ ಸುರಿಮಳೆಯನ್ನು ಸುರಿಸಿದೆ.

ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಚೊಚ್ಚಲ ಏಕದಿನ ವಿಶ್ವಕಪ್ಗೆ ಮುತ್ತಿಟ್ಟಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದ್ದು, ದೇಶದಲ್ಲಿ ಹರ್ಷೋದ್ಘಾರ ಮೊಳಗಿದೆ. ನವಿ ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ, ನಿಗದಿತ 50 ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್‌ಗಳಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ವನಿತೆಯರು 45.3 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾದರು. 2005ರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಫಸ್ಟ್ ಟೈಂ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆಸ್ಟ್ರೇಲಿಯಾ ಎದುರು 98 ರನ್‌ಗಳಿಂದ ಸೋತು ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. 2017ರ ವಿಶ್ವಕಪ್ ಫೈನಲ್‌ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ಫೈನಲ್ ತಲುಪಿದ್ದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲೋ ಫೇವರಿಟ್ ಎನಿಸಿತ್ತು. ಆದ್ರೆ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಕ್ಲೋಸ್ ಮಾರ್ಜಿನ್ನಲ್ಲಿ ಅಂದ್ರೆ ಕೇವಲ 9 ರನ್ ಅಂತರದಲ್ಲಿ ಸೋತು ಹೊರಬಿದ್ದಿತ್ತು. ಈ ಸೋಲು ಟೀಮ್ ಇಂಡಿಯಾದಲ್ಲಿ ಹೊಸ ಎರಾ ಆರಂಭಕ್ಕೆ ಮುನ್ನುಡಿ ಬರೆದಿತ್ತು. ಅಂದು ತಂಡಕ್ಕೆ ಎಂಟ್ರಿ ಕೊಟ್ಟ ಯುವ ಪಡೆ ಈಗ ಮತ್ತೊಮ್ಮೆ ತಂಡವನ್ನ ಫೈನಲ್‌ಗೆ ಕೊಂಡೊಯ್ದು, ಟ್ರೋಫಿ ಗೆದ್ದು ಸಂಭ್ರಮಿಸಿದೆ.

ಭಾರತ ಮಹಿಳಾ ತಂಡ ಮೊದಲ ಬಾರಿಗೆ ವಿಶ್ವಚಾಂಪಿಯನ್ಶಿಪ್ ಗೆಲ್ಲುವ ಮೂಲಕ 4.5 ಮಿಲಿಯನ್ ಡಾಲರ್ ಅಂದ್ರೆ 39.78 ಕೋಟಿ ಗಳಿಸಿದೆ. ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಈವೆಂಟ್‌ಗೆ 122.5 ಕೋಟಿ ಬಹುಮಾನ ಸಿಕ್ಕಿದೆ. ಭಾರತೀಯ ವನಿತೆಯರ ಸಾಧನೆಗೆ ಬಿಸಿಸಿಐ ಕೂಡ ಭರ್ಜರಿ ಬಹುಮಾನ ಘೋಷಿಸಿದ್ದು, 51 ಕೋಟಿ ರೂಪಾಯಿ ಹಣವನ್ನು ತಂಡಕ್ಕೆ ಬಹುಮಾನವಾಗಿ ನೀಡಿದೆ. ರನ್ನರ್ ಅಪ್ ದಕ್ಷಿಣ ಆಫ್ರಿಕಾ ಸುಮಾರು 19.77 ಕೋಟಿ ಬಹುಮಾನವಾಗಿ ನೀಡಲಾಗಿದೆ.
