ದಸರಾ ಉದ್ಘಾಟನೆ ವಿವಾದ ತಾರಕಕ್ಕೇರಿದ್ದು, ಪ್ರತಿಪಕ್ಷದ ನಾಯಕರು ಸರ್ಕಾರದ ಮೇಲೆ ಮುಗಿಬಿದ್ದಿವೆ. ಒಂದ್ಕಡೆ ರಾಜ್ಯ ಸರ್ಕಾರ ಅಧಿಕೃತವಾಗಿ ಬಾನು ಮುಷ್ತಾಕ್‌ರನ್ನ ಆಹ್ವಾನಿಸಿದ್ರೆ, ಮತ್ತೊಂದೆಡೆ ಬಾನು ಮುಷ್ತಾಕ್‌ ಆಹ್ವಾನಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದ್ದು, ರಾಜಕೀಯ ದಾಳಿ ಮುಂದುವರೆದಿದೆ.

ಈ ಬಗ್ಗೆ ಮಾತನಾಡಿದ ಶಾಸಕ ಬಸನ್‌ಗೌಡ ಪಾಟೀಲ್‌ ಯತ್ನಾಳ್‌, ಬಾನು ಮುಷ್ತಾಕ್‌ ಅವರೇ ಮೈಸೂರು ದಸರಾ ಉತ್ಸವದ ಚಾಲನೆಗೆ ನೀಡಿರೋ ಆಹ್ವಾನವನ್ನ ತಿರಸ್ಕರಿಬೇಕು ಅಂತಾ ಮುಷ್ತಾಕ್‌ ಅವರ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮದ ಸಂಸ್ಕಾರ. ಅಲ್ಲಿ ಭಾನು ಮುಷ್ತಾಕ್ ಅವರಿಗೆ ಏನು ಕೆಲಸ? ಅವರೇನು ಹಿಂದೂನಾ? ಅವರೇನು ಮಾಜಿ ಮುಸ್ಲಿಮರಾ? ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದರೆ ಅವರೇ ಈ ಆಹ್ವಾನವನ್ನ ಬಿಟ್ಟು ಬಿಡಬೇಕು ಎಂದು ಆಗ್ರಹಿಸಿದ್ದಾರೆ.

Read Also : ಮಾಂಸಾಹಾರ ಸೇವಿಸದೇ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ : ಯತ್ನಾಳ್ ಲೇವಡಿ

Share.
Leave A Reply