ಬೆಂಗಳೂರು, ಫೆ.28: ಅಮೃತಧಾರೆ ಧಾರಾವಾಹಿಯ ಜೋಡಿ ನಿಜ ಜೀವನದಲ್ಲೂ ಒಂದಾಗೋಕೆ ನಿರ್ಧರಿಸಿದೆ. ಪಕ್ಕಾ ಡಿಬಾಸ್ ಫ್ಯಾನ್ ಆಗಿರುವ ರಾಧಾ ಭಗವತಿ, ಈಗ ದಾಂಪತ್ಯ ಜೀವನಕ್ಕೆ ಜೀವನಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ. ಜೀ ಕನ್ನಡದ ಅಮೃತಧಾರೆ ಖ್ಯಾತಿಯ ರಾಣವ್ ಗೌಡ ಮತ್ತು ಕಲರ್ಸ್ ಕನ್ನಡದ ಭಾರ್ಗವಿ LLB ನಟಿ ರಾಧಾ ಭಗವತಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದೀಗ ಎಂಗೇಜ್ಮೆಂಟ್ ಫೋಟೋಗಳನ್ನು ನೋಡಿ ಸೀರಿಯಲ್ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.
ಇನ್ನು, ರಾಣವ್ ಹಾಗೂ ರಾಧಾ ಮಧ್ಯೆ ಪ್ರೀತಿ ಹುಟ್ಟಿಕೊಂಡಿದ್ದೇ ರೋಚಕ. ಜೀ ಕನ್ನಡದಲ್ಲಿ ಪ್ರಸಾರವಾಗಿ ಜನ ಮನಗೆದ್ದಿದ್ದ ಅಮೃತಧಾರೆ ಸೀರಿಯಲ್‌ನಲ್ಲಿ ಈ ಇಬ್ಬರೂ ನಟಿಸುತ್ತಿದ್ರು. ಕ್ಯೂಟ್ ಆಕ್ಟಿಂಗ್ ಮೂಲಕವೇ ಅಭಿಮಾನಿಗಳ ಮನ ಗೆದ್ದಿದ್ರು. ಆ ಸೀರಿಯಲ್ ನೋಡುತ್ತಿದ್ದ ಜನರು, ಇಬ್ಬರೂ ನಿಜ ಜೀವನದಲ್ಲೂ ಒಂದಾಗಲಿ ಅಂತಾ ಹರಸುತ್ತಿದ್ರು. ಅದರಂತೆ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿಯ ಸೆಟ್‌ನಲ್ಲೇ ಇವರಿಬ್ಬರ ಪ್ರೀತಿ ಚಿಗುರಿತ್ತು. ಇದೀಗ ಪ್ರೀತಿ ಮದುವೆಯ ಬಂಧಕ್ಕೆ ಮುನ್ನುಡಿ ಬರೆದಿದೆ.

ಅಷ್ಟಕ್ಕೂ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಆಗಿದ್ದ ರಾಣವ್ ಪತ್ನಿಯಾಗಿ ರಾಧಾ ಭಗವತಿ ನಟಿಸುತ್ತಿದ್ರು. ಕಲರ್ಸ್ ಕನ್ನಡದಿಂದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಹೀರೋಯಿನ್ ಆಗಿ ಚಾನ್ಸ್ ಸಿಕ್ಕಿತ್ತು. ಆಗ ಅಮೃತಧಾರೆ ಸೀರಿಯಲ್‌ನಿಂದ ಹೊರಬಂದು ಭಾರ್ಗವಿಯಾಗಿ ಅಬ್ಬರಿಸುತ್ತಿದ್ರು. ಇದರ ಜೊತೆಗೆ ಜೀ ಪವರ್ನ ಶುಭಸ್ಯ ಶೀಘ್ರಂ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಜೆಡಿ ಹಾಗೂ ಮಲ್ಲಿ ಕೊನೆಗೂ ಒಂದಾದರು, ಈ ಜೋಡಿ ತುಂಬ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಇನ್ನು, ರಾಧಾ ಭಗವತಿ ಮೂಲತಃ ವಿಜಯಪುರದವರು. ಇವರ ತಾತ ರಂಗಭೂಮಿ ಕಲಾವಿದರು. ಜೊತೆಗೆ ಹರಿಕಥೆ ದಾಸರೂ ಹೌದು. ರಾಧಾ ತಾಯಿ ಜಾನಪದ ಹಾಡುಗಾರ್ತಿ. ಹೀಗಾಗಿ, ಇವರಿಗೆ ಕಲೆಯ ನಂಟಿದೆ. ಅಮೃತಧಾರೆಗೂ ಮುನ್ನ ರಾಧಾ ಭಗವತಿ, ಉಘೇ ಉಘೇ ಮಹಾದೇಶ್ವರ ಹಾಗೂ ರಾಮಾಚಾರಿ ಕಲರ್ಸ್‌ನಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿ ಶೃತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಧಾ ಹಿನ್ನೆಲೆ ಗಾಯಕಿಯೂ ಹೌದು. ಇನ್‌ಸ್ಟಾಗ್ರಾಮ್‌ನಲ್ಲೂ ಆಗಾಗ ಹಾಡುಗಳನ್ನು ಹಾಡುತ್ತಾ ರೀಲ್ಸ್ ಮಾಡುತ್ತಿರುತ್ತಾರೆ. ಅಣ್ಣಯ್ಯ ಸೀರಿಯಲ್‌ನ ವಿಕಾಸ್ ಉತ್ತಯ್ಯ ಜೊತೆಗೆ ಅಪಾಯವಿದೆ ಎಚ್ಚರಿಕೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ರಾಣವ್ ಹಾಗೂ ರಾಧಾ ಎಂಗೇಜ್ ಆಗಿದ್ದು, ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಆಲ್ ದಿ ಬೆಸ್ಟ್ ಹೇಳ್ತಿದ್ದಾರೆ.
