ಅಧಿಕಾರಿಗಳ ಜತೆ ರಣದೀಪ್ ಸಿಂಗ್ ಸುರ್ಜೇವಾಲಾ ಸಭೆ ಕುರಿತು ನನಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಭೆಗೆ ಸಚಿವ ಕೆ.ಎನ್ ರಾಜಣ್ಣ ಅಸಮಾಧಾನ ಕುರಿತು ಮಾತನಾಡಿದ ಸಚಿವ ಪರಮೇಶ್ವರ್, ಕೆಎನ್ ರಾಜಣ್ಣ ಹೇಳಿದ್ದಾರೆ ಅಂದರೆ ಅವರಿಗೆ ಗೊತ್ತಿರಬಹುದು. ಆದರೆ ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಆಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಯಾವ ಸಂದರ್ಭಧಲ್ಲಿ ಏನು ನಡೆದಿದೆ ಅಂತಾ ಅವರು ಹೇಳಿದ್ದಾರೆ. ಯಾವಾಗ ಏನು ಆಗಿದೆ ಅಂತಾ ಹೇಳಿದ್ದಾರೆ ಅಷ್ಟೆ ಎಂದರು.

ಏರ್ ಪೋರ್ಟ್ ನಲ್ಲಿ ನಟ ದರ್ಶನ್ ಗೆ ಭದ್ರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಭದ್ರತೆ ಕೊಟ್ಟಿದ್ದಾರಾ ಇಲ್ಲವಾ ಎಂಬುದು ನನಗೆ ಗೊತ್ತಿಲ್ಲ ಭದ್ರತೆ ಕೊಟ್ಟಿರುವ ಬಗ್ಗೆ ನಾನು ವಿಚಾರಿಸುತ್ತೇನೆ ಎಂದರು.

ಇನ್ನು ಮೈಸೂರಿಗೆ ಒಡೆಯರ್ ಅವರಿಗಿಂತ ಸಿದ್ದರಾಮಯ್ಯ ಅವರ ಕೊಡುಗೆಯೇ ಹೆಚ್ಚು ಎಂಬ ಯತೀಂದ್ರ ಹೇಳಿಕೆಗೆ ನೋ ಕಾಮೆಂಟ್ಸ್ ಎಂದರು.

Share.
Leave A Reply