ಏಷ್ಯಾಕಪ್ 2025ಕ್ಕೆ ಭಾರತ ತಂಡ ಸಂಪೂರ್ಣವಾಗಿ ಸಜ್ಜಾಗಿದೆ. ಇನ್ನು ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಅಭ್ಯಾಸದ ಜೊತೆಗೆ ತಮ್ಮ ಲುಕ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಹೊಸ ಹೇರ್ ಕಟ್ ಮತ್ತು ಕಲರ್ ಮಾಡಿಸಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇನ್ಸ್ಟಾಗ್ರಾಮ್ ನಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಪೇಜ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ನಾನು ಎಂದು ಬರೆದುಕೊಂಡಿದ್ದಾರೆ. ಹೊಸ ಹೇರ್ ಸ್ಟೈಲ್ ನಲ್ಲಿ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಬದಿಯಲ್ಲಿ ಕೂದಲು ಕಡಿಮೆ ಇದ್ದು, ಮುಂದೆ ಸ್ವಲ್ಪ ಉದ್ದವಾಗಿದೆ. ಬ್ಲಾಂಡ್ ಕಲರ್ ಕೂದಲು ಮತ್ತು ಕಪ್ಪು ಗಡ್ಡ.

ಹಾರ್ದಿಕ್ ಫೋಟೋಗಳಿಗೆ ಫ್ಯಾನ್ಸ್ ಲವ್ ಇಮೋಜಿ ಹಾಕ್ತಿದ್ದಾರೆ. ಸ್ಟೈಲ್ ಸೂಪರ್ ಅಂತ ಕಮೆಂಟ್ ಮಾಡ್ತಿದ್ದಾರೆ. ಹೊಸ ಲುಕ್ ಚೆನ್ನಾಗಿದೆ ಅಂತೆಲೂ ಹೇಳ್ತಿದ್ದಾರೆ. ಭಾರತ ತಂಡದ ಸ್ಟೈಲಿಶ್ ಆಟಗಾರರಲ್ಲಿ ಹಾರ್ದಿಕ್ ಒಬ್ಬರು. ಈ ಬಾರಿ ಹೊಸ ಟ್ರೆಂಡಿ ಹೇರ್ ಕಲರ್ ಮಾಡಿಸಿದ್ದಾರೆ. ಏಷ್ಯಾಕಪ್ ನಲ್ಲಿ ಈ ಹೇರ್ ಸ್ಟೈಲ್ ನಲ್ಲಿ ಅವರನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಸೆಪ್ಟೆಂಬರ್ 9 ರಿಂದ ದುಬೈನಲ್ಲಿ ಏಷ್ಯಾಕಪ್ ಶುರುವಾಗಲಿದೆ. ಹಾರ್ದಿಕ್ ಕೂಡ ತಂಡದಲ್ಲಿದ್ದಾರೆ.

2025ರ ಏಷ್ಯಾಕಪ್ ಟೂರ್ನಿಯಲ್ಲಿ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಪಾಲಿಗೆ ಎಕ್ಸ್‌ ಫ್ಯಾಕ್ಟರ್ ಆಗುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡುವ ಸಾಧ್ಯತೆಯಿದೆ. ಬ್ಯಾಟಿಂಗ್‌ನಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಲಿರುವ ಪಾಂಡ್ಯ, ಬೌಲಿಂಗ್‌ನಲ್ಲಿ 4 ಓವರ್‌ ಪರಿಣಾಮಕಾರಿ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ.

Read Also : GST ಪರಿಷ್ಕರಣೆ ಬೆನ್ನಲ್ಲೇ RCB ಟಿಕೆಟ್‌ ದರ ಭಾರೀ ಏರಿಕೆ?

Share.
Leave A Reply