ಗುಜರಾತ್‌ನ ಅಹಮಾಬಾದ್‌ನಲ್ಲಿ ಭೀಕರ ವಿಮಾನ ಅಪಘಾತ (Gujarat Plane Crash) ಸಂಭವಿಸಿದೆ. ಮೇಘಾನಿ ಪ್ರದೇಶದಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದು ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿ242 ಪ್ರಯಾಣಿಕರಿದ್ದರು ಎಂಬ ಮಾಹಿತಿ ಅಧಿಕಾರಿಗಳಿಂದ ತಿಳಿದು ಬಂದಿದೆ.

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆಗುತ್ತಿದ್ದಂತೆ ಪತನವಾಗಿದೆ. ಜನ ವಸತಿ ಪ್ರದೇಶದಲ್ಲಿ ದುರಂತ ಸಂಭವಿಸಿದ್ದು, ಸ್ಥಳಕ್ಕೆ ಆಂಬ್ಯಲೆನ್ಸ್‌, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾ ಭರಪೂರದಿಂದ ಸಾಗಿದೆ.

ಗಾಯಾಳುಗಳನ್ನ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗ್ತಿದೆ. ಅಹಮದಾಬಾದ್‌ನ ಏರ್‌ಪೋರ್ಟ್‌ ಬಳಿ ದಟ್ಟವಾದ ಹೊಗೆ ಆವರಿಸಿದೆ. ದುರಂತ ನಡೆದ ಸ್ಥಳದಲ್ಲಿ ಎನ್‌ಡಿಆರ್‌ಎಫ್‌ ರಕ್ಷಣಾಪಡೆಯಿಂದ ಕಾರ್ಯಾಚರಣೆ ನಡೆದಿದೆ.

ವಿಮಾನ ಹೊತ್ತಿ ಉರಿಯುತ್ತಿರೋ ಕೊನೆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಮಾನ ಧಗಧಗನೆ ಹೊತ್ತಿ ಉರಿದಿದೆ.

ಇನ್ನು, ಮೂಲಗಳ ಪ್ರಕಾರ ಹೊತ್ತಿ ಉರಿದ ವಿಮಾನದಲ್ಲಿ ಗುಜರಾತ್‌ನ ಮಾಜಿ ಸಿಎಂ ವಿಜಯ್‌ ರೂಪಾನಿ ಇದ್ರೂ ಎಂಬ ಮಾಹಿತಿ ತಿಳಿದು ಬಂದಿದೆ.

Share.
Leave A Reply