ರಾಜ್ಯದಲ್ಲಿ ದಿನೇದಿನೆ ಹೃದಯಾಘಾತದಿಂದ ಜೀವ ಬಿಡ್ತಿರೋರ ಸಂಖ್ಯೆ ಹೆಚ್ಚಾಗಿದ್ದು, ಈ ವಿಚಾರ ಭಾರಿ ಆತಂಕ ಸೃಷ್ಟಿಸಿದೆ.. ಹೀಗಾಗಿ, ರಾಜ್ಯ ಸರ್ಕಾರ ಹೃದಯಾಘಾತ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.. ಹಾರ್ಟ್‌ ಅಟ್ಯಾಕ್‌ ತಡೆಗಟ್ಟುವ ಸಲುವಾಗಿ ಸರ್ಕಾರ, ಆಸ್ಪತ್ರೆಗಳಿಗೆ ಗೈಡ್‌ಲೈನ್ಸ್‌ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿಂದು ಅಧಿಕಾರಿಗಳ ಮೀಟಿಂಗ್‌ ನಡೆಯಲಿದೆ..

ಈ ಸಭೆಯಲ್ಲಿ ಹೃದಯಾಘಾತ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಸಚಿವರು ಚರ್ಚೆ ನಡೆಸಲಿದ್ದಾರೆ. ಈಗಾಗ್ಲೇ ರಾಜ್ಯ ತಾಂತ್ರಿಕ ಸಮಿತಿ ರಾಜ್ಯ ಸರ್ಕಾರಕ್ಕೆ ಸುದೀರ್ಘವಾದ ವರದಿ ಸಲ್ಲಿಸಿದೆ.. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಅಧಿಕಾರಿಗಳ ಜೊತೆ ಸಭೆ ಮಾಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.

ಇದಾದ ಬಳಿಕ ಹೃದಯಾಘಾತ ತಡೆಯುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಸ್ಪತ್ರೆಗಳಿಗೆ, ತುರ್ತು ಚಿಕಿತ್ಸೆ ಪ್ರಕ್ರಿಯೆ ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.. ಇನ್ನು, ರಾಜ್ಯದಲ್ಲಿ ಹಾಸನ ಜಿಲ್ಲೆಯಲ್ಲೇ ಅತಿಹೆಚ್ಚು ಹೃದಯಾಘಾತ ಪ್ರಕರಣಗಳು ಬೆಳಕಿಗೆ ಬರ್ತಿವೆ.. ಚಿಕ್ಕ ವಯಸ್ಸಿನವರು, ಗಟ್ಟಿಮುಟ್ಟಾಗಿದ್ದವರೂ ಕೂಡ ಹಾರ್ಟ್‌ ಅಟ್ಯಾಕ್‌ಗೆ ಬಲಿಯಾಗ್ತಿರೋದು ತೀವ್ರ ಕಳವಳ ಉಂಟು ಮಾಡುತ್ತಿದೆ..

Share.
Leave A Reply