ನ್ಯೂಜಿಲೆಂಡ್‌ನ ಕ್ರಿಕೆಟಿಗ ರಾಸ್ ಟೇಲರ್ ಇದೀಗ ನಿವೃತ್ತಿಯಿಂದ ಹೊರಬಂದು 2026ರ T20 ವಿಶ್ವಕಪ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದಾರೆ. ಆದರೆ ಅವರು ಪ್ರತಿನಿಧಿಸುತ್ತಿರುವುದು ನ್ಯೂಜಿಲೆಂಡ್ ತಂಡವನ್ನು ಅಲ್ಲ. ಏಷ್ಯಾ-ಪೂರ್ವ ಏಷ್ಯಾ-ಪೆಸಿಫಿಕ್ T20 ವಿಶ್ವಕಪ್ 2026ರ ಅರ್ಹತಾ ಪಂದ್ಯಗಳಲ್ಲಿ ಸಮೋವಾ ಪರವಾಗಿ ಆಡಲಿದ್ದಾರೆ. ಸೋಮೋವಾ ಅವರ ತಾಯಿಯ ತವರು ದೇಶ ಎಂಬುದು ವಿಶೇಷವಾಗಿದೆ.
2022ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಅದಾಗಿ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ಅವರು ಮತ್ತೊಂದು ಅಂತರರಾಷ್ಟ್ರೀಯ ತಂಡಕ್ಕೆ ಆಡಲು ಅರ್ಹತೆ ಪಡೆದಿದ್ದಾರೆ. ಹೊಸ ತಂಡದಲ್ಲಿ ಆಡುತ್ತಿರುವ ಬಗ್ಗೆ ರಾಸ್ ಟೇಲರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇದು ಅಧಿಕೃತ. ನಾನು ಕ್ರಿಕೆಟ್‌ನಲ್ಲಿ ಸಮೋವಾವನ್ನು ಪ್ರತಿನಿಧಿಸಲು ಹೆಮ್ಮೆಪಡುತ್ತೇನೆ ಎಂದು ಅವರು ಬರೆದಿದ್ದಾರೆ.
ರಾಸ್ ಟೇಲರ್ ಅವರು ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 18199 ರನ್ ಕಲೆ ಹಾಕಿದ್ದಾರೆ. 112 ಟೆಸ್ಟ್ ಪಂದ್ಯವನ್ನು ಆಡಿರುವ ಅವರು 7683 ರನ್ ಮತ್ತು 236 ಏಕದಿನ ಪಂದ್ಯಗಳಿಂದ 8607 ರನ್, 102 ಅಂತಾರಾಷ್ಟ್ರೀಯ ಪಂದ್ಯಗಳಿಂದ 1909 ರನ್ ಗಳಿಸಿದ್ದಾರೆ.
2022ರಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧದ ಏಕದಿನ ಪಂದ್ಯ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಏಕದಿನ ಪಂದ್ಯಗಳಲ್ಲಿ ಕ್ಯಾಚ್ ಹಿಡಿದವರ ಟಾಪ್ 5ರ ಪಟ್ಟಿಯಲ್ಲಿ ರಾಸ್ ಟೇಲರ್ ಅವರು ಇದ್ದಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪುಣೆ ವಾರಿಯರ್ಸ್ ಪರ ಆಡಿದ್ದರು.
Read Also : ಕ್ರಿಕೆಟ್‌ಗೆ ಮತ್ತೊಬ್ಬ ಆಟಗಾರ ವಿದಾಯ.. ನಿವೃತ್ತಿ ಘೋಷಿಸಿದ ಅಮಿತ್ ಮಿಶ್ರಾ..!
