ರಾಜ್ಯದ ಪವರ್ ಹಿಡಿದಿರುವ ಕಾಂಗ್ರೆಸ್‌ನಲ್ಲೇ ಪವರ್ ಸೆಂಟರ್‌ಗಳು ಹೆಚ್ಚಾಗಿವೆ ಅನ್ನೋ ಸುದ್ದಿ ಸ್ವತಃ ಕೈ ನಾಯಕರು ಹೇಳ್ಕೊಂಡಿದ್ದಾರೆ.. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದ್ರೆ ಅತ್ತ ಸಿಎಂ ಇತ್ತ ಡಿಸಿಎಂ ಒಪ್ಪಿಗೆ ಬೇಕು ಅನ್ನೋದು ಜಗಜ್ಜಾಹೀರವಾಗಿದೆ.. ಆದ್ರೆ ಸಿಎಂ ಸಿದ್ದರಾಮಯ್ಯ ಡೆಲ್ಲಿಗೆ ಭೇಟಿ ನೀಡಿದ್ದೇ ತಡ ಎಲ್ಲವೂ ಬದಲಾದಂತೆ ಕಾಣಿಸ್ತಿದೆ.. ಒಂದೇ ಮೀಟಿಂಗ್‌ನಲ್ಲಿ ಕಾಂಗ್ರೆಸ್‌ನ ಸಂಪೂರ್ಣ ಚಿತ್ರಣವೇ ತಿರುಗಿದೆ.. ಇನ್ಮೇಲೆ ಕಾಂಗ್ರೆಸ್‌ನಲ್ಲಿ ನಾನು ಒಬ್ನೆ ಬಾಸ್.. ನನ್ನ ನಿರ್ಧಾರವೇ ಅಂತಿಮ ಅಂತ ಮೆರೆಯುತ್ತಿರುವ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿಗೆ ಮತ್ತೆ ಭಾರೀ ಹೊಡೆತ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ.
ಮೀಟಿಂಗ್‌ನಿಂದ ಡಿಕೆಶಿ ಔಟ್..
ಈಗಾಗಲೇ ಸಿದ್ರಾಮಯ್ಯ ನಾನೇ 5 ವರ್ಷ ಸಿಎಂ ಅಂತ ಹೇಳಿದ್ರೂ ಡಿಕೆಶಿ ಫುಲ್ ಸೈಲೆಂಟ್ ಆಗಿದ್ರು.. ಅದಾದ ಬಳಿಕ ಮೈಸೂರಿನ ಸಮಾವೇಶದಲ್ಲಿ ಮನೆಗೆ ಹೋದವರ ಹೆಸರು ನಾನೇಕೆ ಹೇಳಲಿ ಅಂತ ನೀಡಿದ್ದ ಹೇಳಿಕೆ ಡಿಕೆಶಿಯನ್ನು ಮತ್ತಷ್ಟು ಕೆರಳಿಸಿತ್ತು.. ಅಲ್ಲಿಯೂ ಕೂಡ ಡಿಕೆಶಿ ಅದೇ ಮೌನವನ್ನು ಮುಂದುವರಿಸಿದ್ರು.. ಅಲ್ಲಿಗೆ ಆನೆ ನಡೆದಿದ್ದೇ ದಾರಿ ಅನ್ನುವಂತೆ ಸಿದ್ದು ಹೇಳಿದ್ದೇ ಕಾಂಗ್ರೆಸ್‌ನಲ್ಲಿ ಅಂತಿಮ ಅನ್ನೋದು ಬಹುತೇಕ ಸಾಬೀತಾದಂತೆ ಕಾಣಿಸಿತ್ತು.. ಇದೀಗ ಮತ್ತೆ ಸಿದ್ದರಾಮಯ್ಯ ಡಿಕೆಶಿಗೆ ಮತ್ತೊಂದು ಹೊಡೆತ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ.. ಟಗರು ಹೀಗೆ ಪದೇ ಪದೇ ತಮ್ಮ ಅಸ್ತ್ರ ಪ್ರಯೋಗಿಸ್ತಿದ್ರೂ ಬಂಡೆ ಮಾತ್ರ ಕದಲದಂತೆ ನಿಂತಿರೋದು ಹಲವರ ಅನುಮಾನಕ್ಕೆ ಕಾರಣವಾಗಿದೆ..
ಬಂಡೆಗೆ ಟಗರು 3ನೇ ಡಿಚ್ಚಿ..!
ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಅರ್ಧಾವಧಿ ಪೂರ್ಣಗೊಳ್ಳುತ್ತಿರುವ ಕಾರಣ ಸಿಎಂ ಸಿದ್ದರಾಮಯ್ಯ ಸಚಿವರು, ಶಾಸಕರು, ಉಸ್ತುವಾರಿ ಸಚಿವರ ಜೊತೆ ಮೀಟಿಂಗ್ ಏರ್ಪಡಿಸಿದ್ದಾರೆ.. ಶಾಸಕರ ಅಸಮಾಧಾನ, ಅಹವಾಲು ಹಾಗೂ 50 ಕೋಟಿ ಅನುಧಾನ ಬಿಡುಗಡೆ ಸಂಬಂಧ ಚರ್ಚೆ ನಡೆಸಲಿದ್ದಾರಂತೆ.. ಆದ್ರೆ ಈ ಸಭೆಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನೇ ಆಹ್ವಾನಿಸಿಲ್ಲ ಅಂತ ಹೇಳಲಾಗ್ತಿದೆ.. ಸಿದ್ದು ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿವೆ.. ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಈ ರೀತಿಯ ಸಭೆಗಳಿಗೆ ಕೆಪಿಸಿಸಿ ಅಧ್ಯಕ್ಷರ ಉಪಸ್ಥಿತಿ ಇರುತಿತ್ತು.. ಆದ್ರೆ ಈಗ್ಯಾಕೆ ಇಲ್ಲ ಅಂತ ಹಲವರು ಪ್ರಶ್ನಿಸ್ತಿದ್ದಾರೆ.. ಆದ್ರೆ ಸಿದ್ದು ಮಾತ್ರ ಕಾಂಗ್ರೆಸ್‌ನಲ್ಲಿ ಒಂದೇ ಪವರ್ ಸೆಂಟರ್ ಅದು ನಾನೇ ಅಂತ ಈ ಮೂಲಕ ಸಂದೇಶ ರವಾನಿಸಿದ್ದಾರೆ ಅಂತ ವಿಶ್ಲೇಷಿಸಲಾಗ್ತಿದೆ.
ಗೃಹ ಸಚಿವ ಪರಮೇಶ್ವರ್ ಏನೋ ಡಿಕೆಶಿಗೆ ಡೆಂಗ್ಯೂ ಬಂದಿತ್ತು.. ಅವರ ಆರೋಗ್ಯ ಸರಿ ಇರಲಿಲ್ಲ. ಅವರನ್ನೂ ಆಹ್ವಾನಿಸಲಾಗಿದೆ ಅಂತ ಹೇಳಿಕೆ ನೀಡಿದ್ದಾರೆ.. ಆದ್ರೆ ಬಲ್ಲ ಮೂಲಗಳು ಮಾತ್ರ ಡಿಕೆಶಿಯನ್ನ ಸಭೆಗೆ ಬೇಕಂತಲೇ ಕರೆದಿಲ್ಲ ಅಂತ ತಿಳಿಸಿವೆ.. ಡಿಕೆಶಿ ತಮ್ಮ ಆಪ್ತರ ಬಳಿ ಬೇಸರವನ್ನೂ ಹೊರ ಹಾಕಿದ್ದಾರಂತೆ.. ಒಟ್ನಲ್ಲಿ ಸಿದ್ದು ಪ್ರತೀ ಅಸ್ತ್ರಕ್ಕೂ ಡಿಕೆಶಿ ಮೌನವನ್ನೇ ಪ್ರತ್ಯಸ್ತ್ರವನ್ನಾಗಿ ಪ್ರಯೋಗಿಸ್ತಿದ್ದಾರೆ.. ಆದ್ರೆ ಇದು ಕಾದು ನೋಡುವ ತಂತ್ರವೋ ಅಥವಾ ಸೈಲೆಂಟ್ ಆಗಿದ್ದುಕೊಂಡೇ ದಾಳ ಉರುಳಿಸುವ ಗೇಮ್‌ಪ್ಲ್ಯಾನಾ ಅನ್ನೋದು ಸದ್ಯದ ಕುತೂಹಲ..
