Advertisement

ಬೆಂಗಳೂರು, ಫೆ.28: ತಮಿಳು ಚಿತ್ರರಂಗದಲ್ಲಿ ದಳಪತಿಯಾಗಿ ಮಿಂಚಿದ್ದ ವಿಜಯ್‌ ಈಗ ದ್ರಾವಿಡ ನಾಡಿನ ದೊರೆಯಾಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಬ್ಬರಿಸೋಕೆ ಮಿಂಚಿನಂತೆ ಅಬ್ಬರಿಸುತ್ತಿದ್ದಾರೆ. ಆದ್ರೆ, ಸಿಎಂ ಆಗುವ ಕನಸಿನಲ್ಲಿ ತೇಲಾಡುತ್ತಿರುವ ದಳಪತಿ ವಿಜಯ್‌ಗೆ ಪತ್ನಿಯೇ ಆಘಾತ ನೀಡಿದ್ದಾರೆ. ಹೌದು.. ತಮಿಳುನಾಡು ಚುನಾವಣೆ ಹೊಸ್ತಿಲಲ್ಲೇ ದಳಪತಿ ವಿಜಯ್‌ ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಭಾರಿ ಚರ್ಚೆ ಹುಟ್ಟು ಹಾಕಿದೆ.

ಹೌದು.. ದಳಪತಿ ವಿಜಯ್‌ ಹಾಗೂ ಅವರ ಪತ್ನಿ ಸಂಗೀತಾ ಡಿವೋರ್ಸ್‌ ಪಡೆದುಕೊಳ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್‌ ಆಗ್ತಿದೆ. ಆದ್ರೆ ಈ ದಂಪತಿಗೆ ಡಿವೋರ್ಸ್‌ ಸಿಗೋದು ಅಷ್ಟು ಸುಲಭವಲ್ಲ. ಸಂಸಾರದಲ್ಲಿ ಬಿರುಕು ಮೂಡಿರೋದು ಮಾತ್ರವಲ್ಲದೇ ಡಿವೋರ್ಸ್‌ ವೇಳೆಯೂ ಸಮಸ್ಯೆ ಕಾಣಿಸಿಕೊಳ್ತಿದೆ. ಬರೋಬ್ಬರಿ 27 ವರ್ಷಗಳ ಕಾಲ ಸುಖಸಂಸಾರ ನಡೆಸಿದ್ದ ಈ ಜೋಡಿ ಇದೀಗ ಡಿವೋರ್ಸ್‌ಗೆ ಅಪ್ಲೈ ಮಾಡಿರೋದಿಕ್ಕೆ ಕಾರಣ ಏನು? ಡಿವೋರ್ಸ್‌ ಪಡೆಯಲು ಯಾಕೆ ಪ್ರಾಬ್ಲಂ ಆಗ್ತಿದೆ ಗೊತ್ತಾ?

ದಳಪತಿ ವಿಜಯ್​ ಪತ್ನಿ ಸಂಗೀತಾ ಮೂಲತಃ ಶ್ರೀಲಂಕಾದ ತಮಿಳು ಪರಿಪಾರಕ್ಕೆ ಸೇರಿದವರು. ಇವರು ಮೊದಲಿಂದಲೂ ವಿಜಯ್​ ಅವರ ದೊಡ್ಡ ಅಭಿಮಾನಿಯಾಗಿದ್ದು, 1996 ರಲ್ಲಿ ಚೆನ್ನೈಗೆ ಬಂದಿದ್ದಾಗ ಸಂಗೀತಾ ವಿಜಯ್​ ಅವರನ್ನು ಭೇಟಿಯಾಗಿದ್ದರು. 1998ರ ಜುಲೈ 10ರಂದು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಇವರಿಬ್ರು ಮೊದಲು ಮದುವೆಯನ್ನ ರಿಜಿಸ್ಟರ್‌ ಮಾಡ್ಕೊಂಡಿದ್ರು. ನಂತ್ರ 1999ರ ಆಗಸ್ಟ್ 25ರಂದು ಚೆನ್ನೈನ ಎಗ್ಮೋರ್‌ನಲ್ಲಿರುವ ರಾಜ ಮುತ್ತಯ್ಯ ಮಂದಾರಂನಲ್ಲಿ ಹಿಂದೂ ವಿಧಿವಿಧಾನಗಳ ಪ್ರಕಾರ ಮದುವೆಯಾಗ್ತಾರೆ. ವಿಜಯ್‌-ಸಂಗೀತಾ ದಂಪತಿಗೆ ದಿವ್ಯಾ ಹಾಗೂ ಸಂಜಯ್‌ ಎಂಬ ಇಬ್ಬರು ಮಕ್ಕಳಿದ್ದಾರೆ. 2021ರವರೆಗೂ ವಿಜಯ್ ಮತ್ತು ಸಂಗೀತಾ ಆಗಾಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ವಿಶೇಷವಾಗಿ ವಿಜಯ್ ಅವರ ಸಿನಿಮಾ ಆಡಿಯೋ ಲಾಂಚ್ ಸಮಾರಂಭಗಳು ಮತ್ತು ಸ್ನೇಹಿತರ ಕುಟುಂಬ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಹಾಜರಾಗ್ತಾ ಇದ್ರು. ಆದ್ರೆ 2021ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ..

ಕಳೆದ ಕೆಲವು ವರ್ಷಗಳಿಂದ ವಿಜಯ್ ಮತ್ತು ಸಂಗೀತಾ ನಡುವೆ ಬಿರುಕು ಉಂಟಾಗಿದೆ. ಇದಕ್ಕೆ ನಟಿಯೊಬ್ಬರು ಕಾರಣ ಎಂಬ ಸುದ್ದಿ ಹರಡುತ್ತಿದೆ. ವಿಶೇಷವಾಗಿ ಕಳೆದ 6 ವರ್ಷಗಳಿಂದ, ಆ ಸುದ್ದಿ ವದಂತಿಯಾಗಿತ್ತು. ಈ ಹಿಂದೆಯೂ ಕೂಡ ಇಬ್ಬರೂ ಸಪರೇಟ್‌ ಆಗ್ತಾರೆ ಅನ್ನೋ ಸುದ್ದಿಗಳು ಹರಿದಾಡ್ತಿದ್ವು. ಆದ್ರೆ ಈ ಬಾರಿ ಇದು ಆಲ್‌ಮೋಸ್ಟ್‌ ಕನ್‌ಫರ್ಮ್‌ ಅಂತಾ ಹೇಳಲಾಗ್ತಿದೆ. ಸಂಗೀತಾ ಅವರು ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ತನ್ನ ಪತಿಯಿಂದ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ತನ್ನ ಅರ್ಜಿಯಲ್ಲಿ, ವಿಜಯ್ ಒಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದೇ ಈ ನಿರ್ಧಾರಕ್ಕೆ ಕಾರಣ. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ.. ಬಹುಭಾಷಾ ತಾರೆ ತ್ರಿಶಾ ಕೃಷ್ಣನ್ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಸುದ್ದಿ ಬೆಳಕಿಗೆ ಬಂದು ತನ್ನ ಮಾನಸಿಕ ನೋವು ಮತ್ತು ದುಃಖಕ್ಕೆ ಕಾರಣವಾಯಿತು. ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಯಾವುದೇ ಪಶ್ಚಾತ್ತಾಪವಿಲ್ಲದೆ ಅದನ್ನು ಮುಂದುವರಿಸಿದ್ದಾರೆ ಅಂತಾ ಉಲ್ಲೇಖಿಸಿದ್ದಾರೆ.

ಇದರ ಮಧ್ಯೆ ಸಂಗೀತಾ-ವಿಜಯ್‌ ಡಿವೋರ್ಸ್‌ಗೆ ತೊಡಕುಂಟಾಗುವ ಸಾಧ್ಯತೆ ಇದೆ. ಮೂಲತಃ ಶ್ರೀಲಂಕಾದವರಾದ ಸಂಗೀತಾ ಲಂಡನ್‌ನಲ್ಲಿ ಹುಟ್ಟಿ ಬೆಳೆದವರು. ಲಂಡನ್‌ನಲ್ಲಿ ಬಿಎಸ್‌ಸಿ ಪದವಿ ಪಡೆದು ನಂತ್ರ ಅಲ್ಲಿಯೇ ಮದುವೆಯನ್ನ ಕೂಡ ರಿಜಿಸ್ಟರ್‌ ಮಾಡಿಸಿಕೊಂಡಿದ್ರು. ಹೀಗಾಗಿ ಭಾರತದಲ್ಲಿ ವಿಚ್ಛೇದನ ಪಡೆಯಬಹುದೇ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಇನ್ನು ಇವರಿಬ್ಬರ ಡಿವೋರ್ಸ್‌ಗೆ ಕಾರಣವಾದ ನಟಿ ತ್ರಿಶಾ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಸಂಗೀತಾ ಕೂಡ ಅರ್ಜಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅನೈತಿಕ ಸಂಬಂಧ ಹೊಂದಿರುವ ನಟಿಯ ಜೊತೆಗೇ ವಿದೇಶ ಪ್ರವಾಸ ಮಾಡುವುದು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ವಿಜಯ್ ಮುಂದುವರಿಸಿದ್ದಾರೆ. ಆ ನಟಿ ಈ ಪ್ರವಾಸಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದರೂ ವಿಜಯ್ ಅದನ್ನು ಎಂದೂ ವಿರೋಧಿಸಿಲ್ಲ. ಇದು ನನಗೂ ಮತ್ತು ನಮ್ಮ ಮಕ್ಕಳಿಗೂ ನಿರಂತರ ಅವಮಾನ ಉಂಟುಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ನಲ್ಲಿ, ಸದ್ಯಕ್ಕಂತೂ ವಿಜಯ್​ ಅವರ ವಿಚ್ಛೇದನದ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದ್ದು, ರಾಜಕೀಯಕ್ಕೆ ಕಾಲಿಡ್ತಿರೋ ವಿಜಯ್‌ಗೆ ಇದು ತೊಡಕುಂಟು ಮಾಡುತ್ತಾ ಅಂತಾ ಕಾದುನೋಡ್ಬೇಕಿದೆ.

Share.
Leave A Reply