ಕಳೆದ ಎರಡು-ಮೂರು ವಾರಗಳಿಂದ ಹಾವು-ಏಣಿ ಆಟದಂತೆ ಭಾಸವಾಗಿದ್ದ ಧರ್ಮಸ್ಥಳದಲ್ಲಿ ಅಕ್ರಮ ಶವಗಳನ್ನು ಹೂತಿಟ್ಟ ಆರೋಪ ಕೇಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ.. ಸಾರ್ವಜನಿಕರ ತೀವ್ರ ಆಕ್ರೋಶ, SITಯಿಂದ ನಿರಂತರ ಶೋಧ, ಗುಂಪು ಘರ್ಷಣೆ, ಆರೋಪ-ಪ್ರತ್ಯಾರೋಪ ಹೀಗೆ ಎಲ್ಲಾ ಸರಣಿ ಬೆಳವಣಿಗೆಗಳ ಬಳಿಕ ಇದೀಗ ಸ್ಫೋಟಕ ಸತ್ಯ ಬಯಲಾಗಿದೆ..
ಇಷ್ಟು ದಿನಗಳ ಕಾಲ ಶವಗಳನ್ನು ಹೂತಿಡಲಾಗಿದೆ ಅಂತ ಇದ್ದ ನಂಬಿಕೆ ಇದೀಗ ಯಾರೋ ಷಡ್ಯಂತ್ರ ರೂಪಿಸಿದ್ದಾರೆ ಅನ್ನೋ ಕಡೆ ತಿರುಗಿದೆ.. ಧರ್ಮಸ್ಥಳ ವಿರುದ್ಧವಾಗಿದ್ದ ಅಭಿಪ್ರಾಯಗಳು ಇದೀಗ ಕ್ಷೇತ್ರದ ಪರವಾಗಿ ತಿರುಗಿವೆ.. ರಾಜಕಾರಣಿಗಳಂತೂ ನ್ಯಾಯಕ್ಕಾಗಿ ಹೋರಾಡಲು ಸದಾ ಸಿದ್ಧ ಅಂತ ಹೇಳಿಕೆಗಳನ್ನು ನೀಡ್ತಾ ಇದ್ದಾರೆ..
ವಿಧಾನಸಭೆಯಲ್ಲೂ ಧರ್ಮಸ್ಥಳ ಕೇಸ್ ಝೇಂಕರಿಸಿದೆ.. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೀತಾ ಇದ್ರೂ ಸರ್ಕಾರ ಸುಮ್ನೆ ಕೂತಿದೆ.. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಯಾರದ್ದೋ ಷಡ್ಯಂತ್ರ ಇದೆ.. ಬೇಕಂತಲೇ ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯುವ ಹುನ್ನಾರ ನಡೆಸಿದ್ದಾರೆ ಅಂತ ತೀವ್ರ ವಾಗ್ದಾಳಿ ನಡೆಸಿದ್ದಾರೆ..
ಜೊತೆಗೆ ಕೂಡಲೇ ಮಧ್ಯಂತರ ವರದಿ ನೀಡಲು ಬಿಜೆಪಿ ಆಗ್ರಹಿಸಿದೆ.. ಇದರ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಅಲರ್ಟ್ ಅಗಿದೆ. ಮಧ್ಯಂತರ ವರದಿ ನೀಡುವಂತೆ SITಗೆ ಗೃಹ ಸಚಿವ ಪರಮೇಶ್ವರ್ ಸೂಚಿಸಿದ್ದಾರೆ ಅಂತ ಹೇಳಲಾಗ್ತಿದೆ. ಹೀಗಾಗಿ ಸೋಮವಾರ ಮಧ್ಯಂತರ ವರದಿ ಬರುವ ಸಾಧ್ಯತೆ ಇದ್ದು ವಿಧಾನಸಭೆ ಅಧಿವೇಶನದಲ್ಲಿ ಭಾರೀ ಚರ್ಚೆ ನಡೆಯುವ ನಿರೀಕ್ಷೆ ಇದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಯಾರದ್ದೋ ಷಡ್ಯಂತ್ರವಿದೆ.. ಎಲ್ಲಾ ಸತ್ಯ ನಂಗೆ ತಿಳಿದಿದೆ ಅಂತ ಸ್ಫೋಟಕ ವಾಗ್ಬಾಣವನ್ನ ಸಿಡಿಸಿದ್ದಾರೆ..
Read Also : ಧರ್ಮಸ್ಥಳದ ವಿರುದ್ಧ ಷಡ್ಯಂತ್ರ : ರಾಜ್ಯಾದ್ಯಂತ ಭುಗಿಲೆದ್ದ ಭಕ್ತರ ಆಕ್ರೋಶ