ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೂರ್ಯನೇ ಕಾಣುತ್ತಿಲ್ಲ. ಸೂರ್ಯನ ಬರುವಿಕೆಗಾಗಿ ಜನ ಕಾದು ಕುಳಿತಂತಹ ವಾತಾವರಣ ನಿರ್ಮಾಣವಾಗಿದೆ. ಮೋಡಮುಸಕಿದ ವಾತವರಣ (Weather Forecast) ದೊಂದಿಗೆ ಚಳಿಯ ಅನುಭವವಾಗುತ್ತಿದ್ದು ಜನ ಗಡಗಡ ನಡಗುವಂತಾಗಿದೆ.

Independance day banner

ಅಲ್ಲದೇ, ಸಿಲಿಕಾನ್ ಸಿಟಿ ಸೇರಿದಂತೆ ಹಲವೆಡೆ ಮಳೆ ಕೂಡ ಆಗುತ್ತಿದೆ. ಸೈಕ್ಲೋನ್ ಪರಿಣಾಮ ತಗ್ಗಿದರೂ ಚಳಿ ಮತ್ತು ಮಳೆ ಮುಂದುವರದಿದೆ. ವಾತವರಣದಲ್ಲಿ ಕಡಿಮೆ ತಾಪಮಾನ ಹಿನ್ನಲೆ ಒತ್ತಡ ಕಡಿಮೆಯಾಗಿ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೆ, ಹಲವೆಡೆ ತುಂತುರು ಮಳೆಯೊಂದಿಗೆ ಚಳಿ ಕಂಡು ಬರುತ್ತಿದೆ.

ಹೀಗಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಶುಕ್ರವಾರ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಉತ್ತರ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ 7 ರಿಂದ 19 ಡಿಗ್ರಿಯವರೆಗೆ ದಾಖಲಾಗುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ 18-20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದರೆ, ಇಂದಿನಿಂದ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share.
Leave A Reply