ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ SIT ತನಿಖೆ ರಚಿಸಲಾಗಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎರಡು ಒಂದೇ ಅಲ್ಲಾ ಆ ಎರಡು ಪ್ರಕರಣಗಳು ಬೇರೆ ಬೇರೆಯಾಗಿವೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ ಅಂತಾ ಗೃಹ ಸಚಿವ ಪರಮೇಶ್ವರ್‌ ತಿಳಿಸಿದರು. ಎಸ್ಐಟಿ ಸೌಜನ್ಯ ಪ್ರಕರಣವನ್ನು ತನಿಖೆ ನಡೆಸುವುದಿಲ್ಲ. ಇಲ್ಲಿ ಈಗ ದೂರು ನೀಡಿರುವ ಪ್ರಕರಣದ ಕುರಿತು ಮಾತ್ರ ತನಿಖೆಯಾಗುತ್ತದೆ. ಈ ಬಗ್ಗೆ ಎಸ್‌ಐಟಿ ರಚನೆ ವೇಳೆಯೇ ನಿಬಂಧನೆಗಳನ್ನೂ ತಿಳಿಸಿದ್ದೇವೆಂದು ನಿನ್ನೆ ಹೇಳಿದ್ದರು..

ಇಂದು ಕೂಡ ಎಸ್‌ಐಟಿಯ ಕಾರ್ಯಸೂಚಿಯಲ್ಲಿ ಸೌಜನ್ಯ ಪ್ರಕರಣ ಸೇರಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಧರ್ಮಸ್ಥಳ ಪ್ರಕರಣ ವಿಚಾರವಾಗಿ ಹಲವರಿಂದ ದೂರು ಬಂದ ಹಿನ್ನೆಲೆ ಎಸ್​ಐಟಿ ತನಿಖೆಗೆ ಆದೇಶಿಸಲಾಗಿದ್ದು, ತನಿಖೆಯಿಂದ ಏನಾಗಿದೆ ಎಂಬುದು ಗೊತ್ತಾಗಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್​ ತಿಳಿಸಿದರು.

ಬೆಂಗಳೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಜನ, ಪ್ರಗತಿಪರರು ತನಿಖೆಗೆ ಒತ್ತಾಯ ಮಾಡಿದ್ದರು. ಹಲವರಿಂದ ತನಿಖೆ ಮಾಡುವಂತೆ ದೂರು ಬಂದಿದ್ದವು. ತನಿಖೆ ಮಾಡಿ ಅಲ್ಲಿ ದೂರಿನಂತೆ ಘಟನೆ ಆಗಿದೆಯಾ, ಇಲ್ಲವಾ ಎಂಬುದು ಗೊತ್ತಾಬೇಕಲ್ವಾ, ಸುಮ್ನೆ ಹೀಗೆ ಹೇಳಿಕೊಂಡು ಹೋಗುತ್ತಿದ್ದರೆ ಅದು ಕಾನೂನು ದೃಷ್ಟಿಯಲ್ಲಿ ಸರಿ ಕಾಣಿಸುವುದಿಲ್ಲ. ಹಾಗಾಗಿ ತನಿಖೆಗೆ ಆದೇಶ ಮಾಡಿದ್ದೇವೆ. ತನಿಖೆಯಲ್ಲಿ ಏನು ಬರುತ್ತದೆ ಗೊತ್ತಿಲ್ಲ ನಮಗೆ. ಕಾದು ನೋಡೋಣ ಎಂದರು.

ಧರ್ಮಸ್ಥಳ ಗ್ರಾಮದಲ್ಲಿ ಹಲವು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಎಸ್​ಐಟಿ ರಚಿಸಿ ನಿನ್ನೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಎಡಿಜಿಪಿ ಪ್ರಣವ ಮೊಹಂತಿ ನೇತೃತ್ವದಲ್ಲಿ ಮೂರು ಸದಸ್ಯರನ್ನು ಸೇರಿಸಿ ಎಸ್​ಐಟಿ ರಚನೆ ಮಾಡಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿಗಳಾದ ಎನ್‌.ಎಂ.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾರ್ ದಯಾಮ ಎಸ್​ಐಟಿ ತಂಡದಲ್ಲಿದ್ದಾರೆ ಎಂದರು.

Share.
Leave A Reply