ಧರ್ಮಸ್ಥಳ ಪ್ರಕರಣದಲ್ಲಿ SIT ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಶವಗಳ ಪತ್ತೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಎಸ್.ಐ.ಟಿ‌ ತನಿಖೆಗೆ ಒತ್ತಾಯ ವಿಚಾರ ಅಗತ್ಯತೆಗಳನ್ನು ನೋಡಿಕೊಂಡು ತೀರ್ಮಾನ ಮಾಡ್ತೇವೆ. ಪ್ರಿಲಿಮಿನರಿ ಹಂತದಲ್ಲೇ ಎಸ್.ಐ.ಟಿ ಅಂದರೆ ಹೇಗೆ? ಈಗ ತನಿಖೆ‌ ನಡೀತಿದೆ.. ಸಿಎಂ ಜೊತೆಗೂ ಮಾತಾಡಿದ್ದೇನೆ ಎಂದರು.

ಅನುದಾನ‌ ತಾರತಮ್ಯದ ಬಗ್ಗೆ ವಿಪಕ್ಷಗಳಿಗೆ ಟಾಂಗ್‌
ಕಾಂಗ್ರೆಸ್ ಸರ್ಕಾರ ರಿವೇಂಜ್‌ ಪೊಲಿಟಿಕ್ಸ್‌ ಮಾಡ್ತಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ತಲಾ ಐವತ್ತವತ್ತು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ವಿರೋಧ ಪಕ್ಷದ ಶಾಸಕರಿಗೆ ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ಶಾಸಕರಿಗೆ ಅನುದಾನ ಬಿಡುಗಡೆ ಮಾಡಲ್ಲ ಅಂತೇನಾದರೂ ಸಿಎಂ ಹೇಳಿದ್ದಾರೆಯೇ? ಅವರಿಗೂ ಕೊಡುತ್ತಾರೆ. ಆದರೆ ಈ ಸಂಪ್ರದಾಯವನ್ನು ಶುರು ಮಾಡಿದ್ದು ಹಿಂದಿನ ಸರ್ಕಾರ, ಆಡಳಿತ ಪಕ್ಷದ ಶಾಸಕರಿಗೆ ಒಂದು, ವಿಪಕ್ಷದವರಿಗೆ ಒಂದು ಕೊಟ್ಟಿದ್ರು. ಅವರ ಪಕ್ಷದ ಶಾಸಕರಿಗೆ ತಲಾ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೆ, ಕಾಂಗ್ರೆಸ್ ಶಾಸಕರಿಗೆ 25, 20 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿತ್ತು. ಅದನ್ನೇ ನಾವೂ ಫಾಲೋ ಮಾಡ್ತಿದೇವೆ. ಸಿಎಂ ಡೆವಲಪ್ಮೆಂಟ್ ನೋಡ್ಕೊಂಡು ಕೊಡ್ತಾರೆ ಎಂದು ಪರಮೇಶ್ವರ್ ಹೇಳಿದರು. ನಮ್ಮ ಸರ್ಕಾರ ರಿವೆಂಜ್ ಪಾಲಿಟಿಕ್ಸ್ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.

ಕೊಲೆ ಕೇಸ್‌ನಲ್ಲಿ ಬೈರತಿ ರಾಜಕೀಯವೋ..?
ಶಾಸಕ ಬೈರತಿ ಬಸವರಾಜ್‌‌ ಮೇಲಿನ ಕೊಲೆ ಆರೋಪದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯಿಸಿದ್ರು. ಅವರ ಸ್ಟೇಟ್‌ಮೆಂಟ್ ರೆಕಾರ್ಡ್ ಮಾಡ್ಕೋತಾರೆ. ಈ ವಿಚಾರದಲ್ಲಿ ಅವರ ಅನುಯಾಯಿಗಳ ಜೊತೆ ಸಂಪರ್ಕ ಇದ್ಯೋ ಇಲ್ವೋ ನೋಡ್ತಾರೆ, ನಮ್ಮ ಸರ್ಕಾರ ಬಂದು ಎರಡೂವರೆ ವರ್ಷಗಳಾಗಿದೆ. ಈ ಅವಧಿಯಲ್ಲಿ ಎಷ್ಟಾಗಿವೆ ರಾಜಕೀಯ ಪ್ರೇರಿತ? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. ಆ ಮಹಿಳೆ ಬಂದು ಹೇಳಿದ್ದಾರೆ. ಹಾಗಿದ್ರೆ ಅದರಲ್ಲಿ ಯಾವ ರಾಜಕೀಯ ಪ್ರೇರಿತ ಇದೆ ಎಂದರು.

Share.
Leave A Reply